ಗಾಂಧೀಜಿ ಬೋಧನೆಗಳು ಬದುಕಿಗೆ ದಾರಿದೀಪ: ರಾಧಾಕೃಷ್ಣನ್
Team Udayavani, Jun 16, 2019, 6:10 AM IST
ಮಂಜೇಶ್ವರ: ಸಮಾಜದಲ್ಲಿ ಅನಾಚಾರಗಳು ಹಾಗೂ ಸ್ವತ್ಛಂದತೆಗಳು ತಾಂಡವವಾಡುತ್ತಿದ್ದು, ಯಾವ ಹಾದಿಯಲ್ಲಾದರೂ ಹಣ ಮತ್ತು ಅಧಿಕಾರವನ್ನು ಕೈವಶಪಡಿಸಬೇಕೆಂಬ ಮನುಷ್ಯನ ಹಪಾಹಪಿ ಹಿಂಸೆ, ದಬ್ಟಾಳಿಕೆ ಹಾಗೂ ದಮನಗಳಿಗೆ ಜನರನ್ನು ಪ್ರೇರೇಪಿಸುತ್ತವೆ. ಕೇವಲ ಬೆರಳೆಣಿಕೆಯಷ್ಟು ಜನರು ಇದರ ಫಲಾನುಭವಿಗಳಾದರೆ, ಕೋಟ್ಯಂತರ ಜನರು ಇದರಿಂದಾಗಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಹಿಂಸೆ, ಕೊಲೆ, ಮಾದಕ ವಸ್ತುಗಳ ಬಳಕೆ ಜನರಲ್ಲಿ ಮನುಷ್ಯತ್ವವನ್ನು ಇಲ್ಲವಾಗಿಸುತ್ತವೆ ಎಂದು ಹಿರಿಯ ಗಾಂಧೀವಾದಿ, ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ| ಎನ್.ರಾಧಾಕೃಷ್ಣನ್ ಹೇಳಿದರು.
ಹಿಂಸೆ, ಕೊಲೆ, ಮದ್ಯ-ಮಾದಕವಸ್ತಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಸಂಗಮ ಹಾಗೂ ವಿನೋಭಾ ವೆಂಕಟೇಶ್ ರಾವ್ ಶಾಂತಿಸೇನಾ ಫೌಂಡೇಶನ್ ವಾರ್ಷಿಕ ಅವಲೋಕನ ಸಭೆಯನ್ನು ಗುರುವಾರ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್.ಪಾಟೀಲ್‌ಅವರು ಅಧ್ಯಕ್ಷತೆ ವಹಿಸಿದ್ದರು.
ಶಾಂತಿ ಸ್ಥಾಪನ ದಿನ
1957ರಲ್ಲಿ ಆಚಾರ್ಯ ವಿನೋಭಾವೆ ಅವರಿಂದ ಮಂಜೇಶ್ವರದಲ್ಲಿ ಆರಂಭಿಸಲ್ಪಟ್ಟ ಶಾಂತಿಸೇನೆಯು ಕ್ರಿಯಾತ್ಮಕವಾಗಿ ಮುನ್ನಡೆಯಲು ತೀರ್ಮಾನಿಸಿದೆ. ಹೊಸ ತಲೆಮಾರಿಗೆ ಹಸ್ತಾಂತರಿಸಲ್ಪಟ್ಟ ಗಾಂಧೀಜಿಯವರ ಶಾಂತಿಸೇನಾ ಪರಿಕಲ್ಪನೆಯನ್ನು ರಾಷ್ಟ್ರವ್ಯಾಪಿ ಹರಡುವ ನಿಟ್ಟಿನಲ್ಲಿ ಶಾಂತಿಸೇನೆಯ ಸ್ಥಾಪನಾ ದಿನವಾದ ಆಗಸ್ಟ್ 23 ರಂದು ಮಂಜೇಶ್ವರದಲ್ಲಿ ರಾಷ್ಟ್ರೀಯ ಶಾಂತಿಸೇನಾ ದಿನವನ್ನು ಆಚರಿಸಲು ತೀರ್ಮಾನಿಸಿದ್ದು, ದೇಶ-ವಿದೇಶಗಳ ಪ್ರತಿನಿಧಿಗಳು ಭಾಗವ ಹಿಸುವ ನಿರೀಕ್ಷೆದೆಯೆಂದು ಡಾ| ಎನ್.ರಾಧಾಕೃಷ್ಣನ್ ಹೇಳಿದರು.
ಮುಖ್ಯ ಅತಿಥಿಗಳಾಗಿ ವಿ.ಕೆ.ಮೋಹನನ್, ಆರ್.ಪಿ.ರವೀಂದ್ರನ್, ಫಾದರ್ ಸ್ಕರಿಯಾ, ಶಿವನ್ ಅರುಣಾಚಲಂ, ರಂಜಿತ್ ಸರಕಾರ್, ಮಮತಾ ದಿವಾಕರ್, ಜೀನ್ ಲವೀನಾ ಮೊಂತೇರೋ, ಶಂಶಾದ್ ಶುಕೂರ್, ಕ್ಯಾಪ್ಟನ್ ನಂಬ್ಯಾರ್, ಪ್ರೋ.ಮೇರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿವಾಕರ್ ಎಸ್ ಜೆ ಸ್ವಾಗತಿಸಿ, ಉಮ್ಮರ್ ಬೋರ್ಕಳ ವಂದಿಸಿದರು.
ಮರು ವ್ಯಾಖ್ಯಾನ
ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೇ ದಾರಿದೀಪವಾಗಿವೆ. ಈ ನಿಟ್ಟಿನಲ್ಲಿ ಗಾಂಧೀಜಿಯವರನ್ನು ಕಂಡು ಕೇಳರಿಯದ ಹೊಸ ತಲೆಮಾರಿಗೆ ಗಾಂಧೀಜಿಯವರ ಚಿಂತನೆಗಳು ಸೀÌಕೃತವಾಗುವ ರೀತಿಯಲ್ಲಿ ಮರು ವ್ಯಾಖ್ಯಾನಗೊಳಿಸಬೇಕಾದ ಜವಾಬ್ದಾರಿ ನಮಗಿದೆ ಎಂದು ಡಾ| ಎನ್.ರಾಧಾಕೃಷ್ಣನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.