ಗಂಗೊಳ್ಳಿ: ಮೀನುಗಾರಿಕಾ ಋತುವಿಗೆ ಆರಂಭದಲ್ಲೇ ವಿಘ್ನ
Team Udayavani, Aug 2, 2018, 6:45 AM IST
ಗಂಗೊಳ್ಳಿ: ಎರಡು ತಿಂಗಳ ಮೀನುಗಾರಿಕೆ ನಿಷೇಧ ಅವಧಿ ಜು. 31 ಕ್ಕೆ ಮುಕ್ತಾಯಗೊಂಡಿದೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಆ. 1ರಿಂದ ಗಂಗೊಳ್ಳಿಯಲ್ಲಿ ಬೋಟುಗಳು ಕಡಲಿಗಿಳಿಯುತ್ತಿಲ್ಲ, ಬದಲಿಗೆ ಆ. 15ರಿಂದ ಇಳಿಯುವ ನಿರೀಕ್ಷೆ ಇದೆ.
ಸದ್ಯ ಕಡಲು ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರವು ಜೋರಾಗಿದೆ. ಗಾಳಿಯ ರಭಸವು ತೀವ್ರವಾಗಿರುವುದರಿಂದ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕಿದ್ದಾರೆ. ಮಳೆಗಾಲದಲ್ಲಿ ಮೇಲಿರಿಸಿದ ಬೋಟುಗಳ ಪೈಕಿ ಕೆಲವನ್ನು ಮಾತ್ರ ಕಡಲಿಗಿಳಿಸಲಾಗಿದೆ.
ಸಿದ್ಧತೆಯೇ ಆರಂಭವಾಗಿಲ್ಲ
ಬಂದರು ವಠಾರದ ಸ್ವತ್ಛತೆ ಸೇರಿದಂತೆ ಇನ್ನಿತರ ಕಾರ್ಯಗಳು ಇನ್ನೂ ನಡೆದಿಲ್ಲ. ಬಲೆಗಳ ನೇಯುವಿಕೆ, ಬೋಟುಗಳ ದುರಸ್ತಿ, ಬೋಟುಗಳಿಗೆ ಬಣ್ಣ ಬಳಿದು ಅಗತ್ಯ ಸಾಮಗ್ರಿಗಳನ್ನು ಸೇರಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಬೋಟುಗಳು ಮ್ಯಾಂಗನೀಸ್ ವಾರ್ಫ್‌ನಲ್ಲಿ ಲಂಗರು ಹಾಕಿವೆ. ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಅಂತ್ಯವಾದರೂ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.
ಮೀನುಗಾರರೊಳಗೆ ಗೊಂದಲ
ಯಾವ ಬೋಟುಗಳನ್ನು ಮೊದಲು ಕಡಲಿಗೆ ಇಳಿಸಬೇಕು ಎನ್ನುವ ಗೊಂದಲ ಬೋಟು ಮಾಲಕರೊಳಗೆ ಇದ್ದು, ಇದರಿಂದ ಇನ್ನೂ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಆರಂಭವಾಗಿಲ್ಲ. ಈ ಬಾರಿ ಲೈಟ್ ಫಿಶಿಂಗ್‌ಗೆ ಕೂಡ ನಿಷೇಧ ಇರುವುದರಿಂದ 370 ಅಥವಾ ಬುಲ್ ಟ್ರಾಲ್ ಇಳಿಸಬೇಕೋ ಎನ್ನುವ ಗೊಂದಲಗಳಿವೆ.
ಅವಧಿಗೆ ಮುನ್ನವೇ ಅಂತ್ಯ
ಕಳೆದ ಋತುವಿನಲ್ಲಿ ಮತ್ಸé ಕ್ಷಾಮ ಹಾಗೂ ವಾತಾವರಣದ ಬಿಸಿಯಿಂದಾಗಿ ಅವಧಿಗೆ ಮುನ್ನವೇ ಅಂದರೆ ಫೆಬ್ರವರಿಯಲ್ಲಿಯೇ ಮೀನುಗಾರಿಕೆ ಅಂತ್ಯವಾಗಿತ್ತು. ಕಳೆದ ಸಾಲಿನಲ್ಲಿ 33,115 ಮೆಟ್ರಿಕ್ ಟನ್ ಮೀನು ಸಂಗ್ರಹವಾಗಿದ್ದು, 37,458.5 ಲಕ್ಷ ರೂ. ಆದಾಯ ಬಂದಿದೆ.
ಗಂಗೊಳ್ಳಿ ಬಂದರಿನಲ್ಲಿರುವ ಒಟ್ಟು ದೋಣಿಗಳು
ದೋಣಿಯ ವಿಧ ಸಂಖ್ಯೆ
ಟ್ರಾಲರ್ 338
ಪಸೀìನ್ 36
ಗಿಲ್‌ನೆಟ್ 1,945
ಯಾಂತ್ರೀಕೃತವಲ್ಲದ ದೋಣಿಗಳು 1,456
ಪಾತಿ 23
ದುರಸ್ತಿಗೆ ಪ್ರಸ್ತಾವನೆ ಸಲ್ಲಿಕೆ
ಆ. 1ರಿಂದ ಬೋಟುಗಳು ಕಡಲಿಗೆ ಇಳಿಯಬಹುದು. ಆದರೆ ಈ ಬಾರಿ ಪ್ರತಿಕೂಲ ಹವಾಮಾನ ಇರುವುದರಿಂದ ವಿಳಂಬವಾಗುವ ಸಾಧ್ಯತೆಗಳಿವೆ. ಬಂದರಿನ ಕಟ್ಟಡದ ಶೀಟುಗಳ ದುರಸ್ತಿ, 2 ಕಟ್ಟಡಗಳಿಗೆ ವಿದ್ಯುತ್ ಪೂರೈಕೆ, ಸ್ಲಾéಬ್ ದುರಸ್ತಿ ತುರ್ತಾಗಿ ಆಗಬೇಕಾಗಿದ್ದು, ಅದಕ್ಕಾಗಿ ಈಗಾಗಲೇ ಇಲಾಖೆ ಹಾಗೂ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಅಂಜನಾದೇವಿ,
ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಮೀನುಗಾರಿಕಾ ಬಂದರು
ತಡವಾಗಿ ಆರಂಭ
ಈ ಬಾರಿ ಒಂದು ವಾರ ತಡವಾಗಿ ಮೀನುಗಾರಿಕೆ ಆರಂಭ ನಿರೀಕ್ಷೆಯಿದೆ. ಗಂಗೊಳ್ಳಿ ಬಂದರು ಮಲ್ಪೆಯನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಸಾಮಾನ್ಯವಾಗಿ ಆ. 10 ರ ಅನಂತರವೇ ಅಧಿಕೃತವಾಗಿ ಆರಂಭವಾಗುತ್ತದೆ. ಬೋಟುಗಳನ್ನು ಮೊದಲು ಇಳಿಸಬೇಕು ಎನ್ನುವ ಗೊಂದಲವಿದೆ.
– ರಮೇಶ್ ಕುಂದರ್, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.