‘ಗಿರೀಶ್ ವಿಯೋಗ ಸಾಹಿತ್ಯ ಲೋಕ ರಂಗಭೂಮಿಗೆ ನಷ್ಟ’
ಪರಿಸರ ದಿನಾಚರಣೆ, ಕಾರ್ನಾಡ್‌ಗೆ ನುಡಿನಮನ, ಪ್ರತಿಭಾ ಪುರಸ್ಕಾರ
Team Udayavani, Jun 27, 2019, 5:43 AM IST
ಕುಂಬಳೆ: ಬಿ.ಎ ಮೊಹಮ್ಮದ್ ಸ್ಮಾರಕ ಗ್ರಂಥಾಲಯ ಮತ್ತು ವಾಚನಾಲಯ ಸುಬ್ಬಯ ಕಟ್ಟೆ ಇದರ ಸಹಯೋಗದಲ್ಲಿ ಪರಿಸರ ದಿನಾಚರಣೆ ಮತ್ತು ಡಾ. ಗಿರೀಶ್ ಕಾರ್ನಾಡ್ ಅವರಿಗೆ ನುಡಿನಮನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸುಬ್ಬಯ್ಯ ಕಟ್ಟೆಯಲ್ಲಿ ಜರಗಿತು.
ಲೈಬ್ರೆರಿಯ ಅಧ್ಯಕ್ಷ ಕೆ.ಆಶೋಕ ಭಂಡಾರಿ ಕೋರಿಕ್ಕಾರು ಆಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕು ಲೈಬ್ರೇರಿ ಕೌನ್ಸಿಲಿನ ಕಾರ್ಯದರ್ಶಿ ಪಿ.ಕೆ ಅಹಮ್ಮದ್ ಹುಸೈನ ಮಾಸ್ತರ್ ಜ್ಞಾನ ಪೀಠ ಪ್ರಶಸ್ತಿ ವಿಜೇತ ದಿ. ಗಿರೀಶ್ ಕಾರ್ನಾಡ್‌ರವರ ನುಡಿ ನಮನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಹಿರಿಯ ಸಾಹಿತಿ, ನಾಟಕಾರರಾಗಿದ್ದ ಗಿರೀಶ್ ಕಾರ್ನಾಡ್ ಅವರ ವಿಯೋಗವು ಸಾಹಿತ್ಯ ಲೋಕ ಹಾಗೂ ರಂಗಭೂಮಿಗೆ ಅಪಾರ ನಷ್ಟ ಎಂದು ಅವರು ಅಭಿಪ್ರಾಯಪಟ್ಟರು. ಜ್ಞಾನಪೀಠ ಪ್ಶಸ್ತಿ ವಿಜೇತ ಸಾಹಿತಿ, ಸಿನಿಮಾ ನಟ ಕನ್ನಡ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿದರು.
ಕೊನೆಯಲ್ಲಿ ಸಸಿ ವಿತರಣೆ ಮಾಡ ಲಾಯಿತು. ಶಿವಪ್ರಸಾದ್ ಶೆಟ್ಟಿ ಕುಡಾಲು ಅವರು ಸ್ವಾಗತಿಸಿದರು. ಎಸ್.ಕೆ ಬಾಲಕೃಷ್ಣ ಅವರು ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.