ಗೋವಾ ಮಾದರಿ ಚಂದ್ರಗಿರಿ ಹೊಳೆಯಲ್ಲಿ “ಭಂಡಾರ’ ನಿರ್ಮಾಣ


Team Udayavani, Jun 15, 2018, 6:00 AM IST

14ksde6.jpg

ಕಾಸರಗೋಡು: ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಸಂರಕ್ಷಿಸಲು ಗೋವಾ ಮಾದರಿಯಲ್ಲಿ “ಭಂಡಾರ’ ಎಂದು ಕರೆಯಲ್ಪಡುವ ನೀರು ಸಂರಕ್ಷಣಾ ವ್ಯವಸ್ಥೆಯನ್ನು ಕಾಸರಗೋಡು ಜಿಲ್ಲೆಯ ಚಂದ್ರಗಿರಿ(ಪಯಸ್ವಿನಿ) ಹೊಳೆ ಸಹಿತ ರಾಜ್ಯದ ಐದು ನದಿಗಳಲ್ಲಿ ಮತ್ತು ಉಪನದಿಗಳಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಸಾಕಾರಗೊಳಿಸಿದ್ದಲ್ಲಿ 1938 ಕೋಟಿ ಲೀಟರ್‌ ನೀರು ಅಧಿಕ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಬೇಸಿಗೆ ಕಾಲದಲ್ಲಿ ಕೇರಳದಲ್ಲಿ ಪ್ರತೀ ವರ್ಷವೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಭಂಡಾರ ನಿರ್ಮಿಸಿ ಜಲ ಸಂಪನ್ಮೂಲವನ್ನು ರಕ್ಷಿಸಲಾಗುವುದು. ರಾಜ್ಯದಲ್ಲಿ ಸುರಿಯುವ ಮಳೆಯ ಪ್ರಮಾಣದಲ್ಲಿ ಕಡಿಮೆಯಾಗುವುದಿಲ್ಲ. ಆದರೆ ನೀರು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆಯಿಲ್ಲದಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ತಜ್ಞರ ಸಮಿತಿಯ ವರದಿಯಲ್ಲಿ  ಹೇಳುತ್ತಿದೆ. “ಭಂಡಾರ’ ಎನ್ನುವ ಯೋಜನೆಯನ್ನು ಸಾಕಾರಗೊಳಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಉಪಸ್ಥಿತಿಯಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯದ ಹೊಳೆಗಳಲ್ಲಿ ಗೋವದಲ್ಲಿ “ಭಂಡಾರ’ ಎನ್ನುವ ನೀರಿನ ಸಂಗ್ರಹ ನಿರ್ಮಿಸಲು ತೀರ್ಮಾನಿಸಲಾಗಿದೆ. ಕಾಸರಗೋಡು ಜಿಲ್ಲೆಯ ಚಂದ್ರಗಿರಿ, ಪಾಲಾ^ಟ್‌ ಜಿಲ್ಲೆಯ ತೂತ್ತು ಹೊಳೆ, ಭವಾನಿ ಹೊಳೆ, ವಯನಾಡ್‌ನ‌ ಪನಮರ ಹೊಳೆ, ಪತ್ತನಂತಿಟ್ಟದ ಅಚ್ಚನ್‌ಕೋವಿಲ್‌ ಹೊಳೆ ಎಂಬೀ ಪ್ರಮುಖ ಐದು ಹೊಳೆಗಳಲ್ಲಿ ಮತ್ತು ಉಪ ನದಿಗಳಲ್ಲಿ ಭಂಡಾರ ನಿರ್ಮಿಸಲಾಗುವುದು. ಈ ಯೋಜನೆ ಸಾಕಾರಗೊಂಡಲ್ಲಿ 1938 ಕೋಟಿ ಲೀಟರ್‌ ನೀರು ಹೆಚ್ಚು ಲಭಿಸಲಿದೆ.

ಪ್ರತೀ ವರ್ಷವೂ ಎದುರಾಗುತ್ತಿರುವ ಬರಗಾಲವನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲು ನೀರಾವರಿ ಇಲಾಖೆಯ ಚೀಫ್‌ ಎಂಜಿನಿಯರ್‌ ಟೆರೆನ್ಸ್‌ ಆ್ಯಂಟಣಿ(ಐ.ಡಿ.ಆರ್‌.ಬಿ) ಅವರನ್ನು ತಾಂತ್ರಿಕ ಸಮಿತಿಯ ಚೆಯರ್‌ವೆುàನ್‌ ಆಗಿ ನೇಮಿಸಲಾಗಿದೆ. ವಿ.ಎಂ.ಸುನಿಲ್‌(ಮಿಶನ್‌ ಮೋನಿಟರಿಂಗ್‌ ಟೀಂ), ಅಬ್ರಹಾಂ ಕೋಶಿ(ಹರಿತ ಕೇರಳ ಮಿಶನ್‌ ಕನ್‌ಸಲ್ಟೆಂಟ್‌) ಸಹಿತ ನೀರಾವರಿ ಇಲಾಖೆಯ ಐವರು ಎಂಜಿನಿಯರ್‌ಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ. ಈ ಸಮಿತಿಯ ಶಿಫಾರಸಿನ ಮೇರೆಗೆ ಭಂಡಾರ ಎನ್ನುವ ಯೋಜನೆಯನ್ನು ಕೇರಳದಲ್ಲಿ ಸಾಕಾರಗೊಳಿಸಲು ತೀರ್ಮಾನಿಸಲಾಗಿದೆ. ಹರಿತ ಕೇರಳ ಮಿಶನ್‌ನೊಂದಿಗೆ ಕೈಜೋಡಿಸಿ ಜಲಸಂಪನ್ಮೂಲ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.

ಸಭೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವ ಮ್ಯಾಥ್ಯೂ ಟಿ.ತೋಮಸ್‌, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಟಿಂಕು ಬಿಸ್ವಾಲ್‌, ಹರಿತ ಕೇರಳ ಮಿಶನ್‌ ಚೆಯರ್‌ವೆುàನ್‌ ಟಿ.ಎನ್‌.ಸೀಮಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಶಿವಶಂಕರ್‌, ಸರಕಾರದ ಅಭಿವೃದ್ಧಿ ಸಲಹೆಗಾರ ಸಿ.ಎಸ್‌.ರಂಜಿತ್‌ ಮೊದಲಾದವರು ಭಾಗವಹಿಸಿದ್ದರು.

ಏನಿದು “ಭಂಡಾರ’ ?
ಕೇರಳದ ಹೊಳೆಗಳಲ್ಲಿ “ಭಂಡಾರ’ ನಿರ್ಮಿಸಿದಲ್ಲಿ ರೆಗ್ಯೂಲೇಟರ್‌ನ ವೆಚ್ಚ ಬಹಳಷ್ಟು ಕಡಿಮೆಯಾಗಲಿದೆ. ಅಲ್ಲದೆ ಸುಲಭದಲ್ಲಿ ಕಾರ್ಯಾಚರಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಳೆಗಳಲ್ಲಿ ವರ್ಷಪೂರ್ತಿ ನೀರು ಸಂಗ್ರಹಿಸಿಡಬಹುದು. ಗೋವಾದಲ್ಲಿ ಇಂತಹ 400ಕ್ಕೂ ಅಧಿಕ ಭಂಡಾರಗಳು ಬಳಕೆಯಲ್ಲಿವೆೆ. ನದಿಯಲ್ಲಿ ಎರಡು ಮೀಟರ್‌ ಅಂತರದಲ್ಲಿ ಕಾಂಕ್ರೀಟ್‌ ಕಂಬಗಳನ್ನು ನಿರ್ಮಿಸಿದ ಫೈಬರ್‌ ರೀಇನ್‌ಫೋರ್ಸಡ್‌ ಪ್ಲಾಸ್ಟಿಕ್‌ (ಎಫ್‌.ಆರ್‌.ಪಿ) ನಿಂದ ಶಟರ್‌ ಸ್ಥಾಪಿಸಲಾಗುತ್ತದೆ. 

ನದಿಯ ಹರಿವಿಗನುಗುಣವಾಗಿ ನಾಲ್ಕೋ ಐದೋ ಕಿಲೋ ಮೀಟರ್‌ ದೂರದಲ್ಲಿ ನೀರನ್ನು ತಡೆದು ನಿಲ್ಲಿಸುವ ತಡೆಗೋಡೆಗಳನ್ನು ನಿರ್ಮಿಸಬೇಕು. ಮಳೆಗಾಲ ಕಳೆಯುತ್ತಿದ್ದಂತೆ ಎಲ್ಲ ಶಟರ್‌ಗಳನ್ನು ಮುಚ್ಚಿ ನೀರನ್ನು ಸಂಗ್ರಹಿಸಬೇಕು. ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆ ಅನುಸಾರವಾಗಿ ಶಟರ್‌ಗಳನ್ನು ತೆರೆದು  ಒಂದರಿಂದ ಇನ್ನೊಂದು ಭಂಡಾರಕ್ಕೆ ನೀರನ್ನು ಹರಿಯಬಿಡಬೇಕು. ಹರಿಯಬಿಟ್ಟು ನೀರು ತುಂಬಿಕೊಂಡಾಗ ಶಟರ್‌ ಮುಚ್ಚಬೇಕು. ಮಳೆಗಾಲದಲ್ಲಿ  ಎಲ್ಲ ಶಟರ್‌ಗಳನ್ನು ತೆರೆಯಬೇಕು. ಈ ಕಾರಣದಿಂದ ಮಳೆಗಾಲದಲ್ಲಿ ಹೊಳೆಯಲ್ಲಿ ಸ್ವಾಭಾವಿಕವಾಗಿ ನೀರಿನ ಹರಿವು ಇರುತ್ತದೆ. ಇದರಿಂದಾಗಿ ಪರಿಸರ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಮೀನಿನ ಸಂಪತ್ತು ಸಂರಕ್ಷಿಸಬಹುದು.

ಕೇರಳದಲ್ಲಿ ಬರಗಾಲಕ್ಕೆ ಮುಖ್ಯ ಕಾರಣ ಮಳೆಯ ಕೊರತೆಯಲ್ಲ ಎಂದು ಅಧ್ಯಯನ ಸಮಿತಿ ವರದಿ ನೀಡಿದೆ. 1871ರಿಂದ 2008 ರ ವರೆಗೆ ಮಳೆಯ ಲಭ್ಯತೆಯನ್ನು ಪರಿಗಣಿಸಿ ಈ ಸಮಿತಿ ಬರಗಾಲಕ್ಕೆ ಕಾರಣವನ್ನು ಕಂಡುಕೊಂಡಿದೆ. ಮುಂಗಾರು ಮಳೆ ಕಡಿಮೆಯಾಗುತ್ತಿದ್ದರೂ ಬೇಸಗೆಯಲ್ಲಿ ಮತ್ತು ಶೀತಕಾಲದಲ್ಲಿ ಮಳೆಯ ಪ್ರಮಾಣ ಅಧಿಕವಾಗಿ ಲಭಿಸುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ಬೊಟ್ಟು ಮಾಡಿದೆ. ಸುರಿದ ಮಳೆ ನೀರು ತತ್‌ಕ್ಷಣ ಸಮುದ್ರ ಸೇರುವುದರಿಂದ ಕೇರಳದಲ್ಲಿ ಬರದ ಅನುಭವವಾಗಲು ಕಾರಣವಾಗಿದೆ.

ಚಿತ್ರ : ಚಂದ್ರಗಿರಿ ಹೊಳೆ

ಟಾಪ್ ನ್ಯೂಸ್

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

Kasaragod: ಸ್ತನ್ಯಪಾನ ಗಂಟಲಲ್ಲಿ ಸಿಲುಕಿ ಮಗುವಿನ ಸಾವು

12

Madikeri: ಅರೆಸುಟ್ಟ ಮೃತದೇಹದ ಪ್ರಕರಣ; ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅಂಕೂರ್‌ ರಾಣ ಬಂಧನ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Untitled-5

Kasaragod: ಶ್ರೀಗಂಧ ಕೊರಡು ಸಹಿತ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Anushka shetty’s upcoming movie Ghaati first look

Ghaati: ಸ್ವೀಟಿ ಅಲ್ಲ ಘಾಟಿ; ಫ‌ಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ

8-brahmavar

Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

7-bunts

Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ

6-udupi

Udupi: ಪ್ರಧಾನಿ ಸಹೋದರ ಸೋಮು ಬಾೖ ಶ್ರೀ ಕೃಷ್ಣಮಠಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.