ಕನಸುಗಳನ್ನು ಹೆಣೆಯುತ್ತ ಗುರಿಯತ್ತ ಸಾಗಿ: ಡಾ| ರಾಜೇಶ್‌

ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಕಲೋತ್ಸವ ಉದ್ಘಾಟನೆ

Team Udayavani, Sep 28, 2019, 5:05 AM IST

27KSDE8

ಕಾಸರಗೋಡು: ಇಚ್ಛಿಸಿದುದನ್ನು ಗಳಿಸುವ ಸಾಮರ್ಥ್ಯ ಇಂದು ಮನುಷ್ಯ ನಿಗಿದೆ. ಆದರೆ ಸಂತೋಷಕ್ಕಾಗಿ ಎಲ್ಲೆಲ್ಲೋ ಅಲೆದಾಡುತ್ತಾನೆ. ನಮ್ಮೊಳಗಿನ ಸಂತೋಷವನ್ನು ಮುಚ್ಚಿಟ್ಟು ಫೇಸ್‌ಬುಕ್‌, ಟ್ವಿಟ್ಟರ್‌ ವಾಟ್ಸಪ್‌ಗ್ಳಲ್ಲಿ ಅದನ್ನರಸುತ್ತಾ ಕಾಲ ಕಳೆಯುವುದು ಮೂರ್ಖತನ ಎಂದು ಕಣ್ಣೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನ ನಿರ್ದೇಶಕರೂ, ಸಾಹಿತಿಯೂ ಆದ ಡಾ| ರಾಜೇಶ್‌ ಬೆಜ್ಜಂಗಳ ಅಭಿಪ್ರಾಯಪಟ್ಟರು.

ಕಾಸರಗೋಡು ಚಿನ್ಮಯ ವಿದ್ಯಾಲಯದ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಗಳು ಶಿಕ್ಷಣದ ಜತೆಗೆ ಶಿಸ್ತುಬದ್ಧ ಜೀವನದ ತರಬೇತಿಯನ್ನು ಹೊಂದುತ್ತಿರುವುದು ಅದೃಷ್ಟಕರ. ಇಲ್ಲಿನ ಪರಿಸರ, ಪರಿಕರ, ನಿಯಮ ಗಳು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವಲ್ಲಿ ಪ್ರೇರಕವಾಗು ತ್ತಿವೆ. ಕಲಿತು ಉದ್ಯೋಗಗಳಿಸಿದ ಬಳಿಕ ಶಾಲಾ ಚಟುವಟಿಕೆಗಳಂಥ ಆಹ್ಲಾದಕರ ಉತ್ಸವಗಳಲ್ಲಿ ಪಾಲ್ಗೊಳ್ಳುವ ಅವಕಾಶವಿರಲಾರದು. ಆ ದಿನಗಳಲ್ಲಿ ಶಾಲಾ ಜೀವನವನ್ನು ಮೆಲುಕು ಹಾಕುವುದರಲ್ಲೇ ನಾವು ತೃಪ್ತಿ ಪಡಬೇಕಾ ಗುವುದು. ವಿದ್ಯಾರ್ಥಿ ದೆಸೆಯಲ್ಲಿ ಇಂಥ ಕಲೋತ್ಸವಗಳಲ್ಲಿ ಪಾಲ್ಗೊಳ್ಳುವುದು, ಅನೇಕ ಕೌಶಲಗಳನ್ನು ಅರಿಯುವುದು ಅತೀ ಅಗತ್ಯ.

ಪ್ರಕೃತಿಯನ್ನು ಆರಾಧಿಸಿ
ಆಂಗ್ಲ ಕವಿ ವರ್ಡ್ಸ್‌ವರ್ತ್‌ ಹೇಳಿದಂತೆ ಬೆಳಗ್ಗಿನ ಸೂರ್ಯ ಕಿರಣ, ತಂಪಾದ ಗಾಳಿ, ಅರಳಿದ ಹಳದಿ ಹೂವುಗಳು ನೀಡುವ ಸಂತೋಷ ಅದ್ಭುತವಾದುದು. ಪ್ರಕೃತಿಯನ್ನು ಆಸ್ವಾದಿಸುವ ಮನಸ್ಸನ್ನು ಬೆಳೆಸಬೇಕು. ನಮ್ಮ ಸುತ್ತಲೇ ಸಂತೋಷ ಸಿಗುವುದಾದರೆ ಮತ್ತೇಕೆ ಅದನ್ನು ಅರಸುತ್ತ ಸಮಯವನ್ನು ಪೋಲು ಮಾಡುವುದು? ಕವಿ ಕೀಟ್ಸ್‌ ಹೇಳಿದ್ದಾರೆ, ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬೆಳಕು ಹಾಗೂ ಕತ್ತಲೆಯ ನಡುವಿನ ಈ ಹೊತ್ತನ್ನು ಸುಂದರಗೊಳಿಸಲು ಎಷ್ಟೆಷ್ಟೋ ಚಟುವಟಿಕೆಗಳು ನಮ್ಮ ಮುಂದಿವೆ. ಸುಂದರ ಕನಸನ್ನು ಹೆಣೆಯುತ್ತಾ ಒಂದೊಂದನ್ನೂ ನನಸಾಗಿಸಲು ಶ್ರಮಿಸಬೇಕು. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾಲಯದ ಪ್ರಾಂಶುಪಾಲ ಬಿ. ಪುಷ್ಪರಾಜ್‌ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಆಯಿಷ ಹುದ ಸ್ವಾಗತಿಸಿದರು. ಆಯಿಷಾ ಅಫಾ° ವಂದಿಸಿದರು.

ಶಿಸ್ತು ಬದ್ಧರಾಗಿರಿ
ಡಾ| ಅಬ್ದುಲ್‌ ಕಲಾಂ ಹೇಳಿದಂತೆ “ನಾವು ಸೂರ್ಯನಂತೆ ಪ್ರಕಾಶಿಸಬೇಕು. ಅದಕ್ಕಾಗಿ ಸೂರ್ಯನಂತೆ ಉರಿಯಬೇಕು’. ಕಠಿನ ಪರಿಶ್ರಮ, ಪ್ರಾರ್ಥನೆ, ಗುರು ಹಿರಿಯರಲ್ಲಿ ಭಕ್ತಿ, ಸಮಯ ಪಾಲನೆಯಿಂದ ಮಾತ್ರವೇ ನಿಶ್ಚಿತ ಗುರಿಯತ್ತ ಸಾಗುತ್ತಾ ಶಿಸ್ತುಬದ್ಧ ವ್ಯಕ್ತಿಯಾಗಿ ಮಾರ್ಪಡುವುದು ಸಾಧ್ಯ ಎಂದು ಡಾ| ರಾಜೇಶ್‌ ಹೇಳಿದರು.

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.