“ಬಾಲಗೋಕುಲದಿಂದ ಸಂಸ್ಕಾರಯುತ ವ್ಯಕ್ತಿತ್ವ ನಿರ್ಮಾಣ’
Team Udayavani, Jan 23, 2020, 11:27 PM IST
ಮಂಜೇಶ್ವರ: ಸೇವಾಭಾರತಿಯಿಂದ ಮಂಜೇಶ್ವರ ತಾಲೂಕು ಬಾಲಗೋಕುಲಗಳ “ಗೋಕುಲೋತ್ಸವ’ ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲೆಯಲ್ಲಿ ನಡೆಯಿತು.
ಬಾಲಗೋಕುಲಗಳ ಮಕ್ಕಳಿಂದ ಶ್ರೀ ಸತ್ಯನಾರಾಯಣ ಭಜನ ಮಂದಿರದಿಂದ ಶ್ರೀ ರಾಮ ಎಯುಪಿ ಶಾಲೆ ಕುಬಣೂರು ತನಕ ಶೋಭಾಯಾತ್ರೆ ನಡೆಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ “ಗೋಕುಲೋತ್ಸವ’ದ ಉದ್ಘಾಟನೆಯನ್ನು ಕುಬಣೂರು ಶ್ರೀ ರಾಮ ಎ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಅರುಣಾ ಕೆ. ದೀಪ ಪ್ರಜ್ವಲನದ ಮೂಲಕ ನಡೆಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ, ಬಾಲಗೋಕುಲ ತಾಲೂಕು ಪ್ರಮುಖ್ ರಾಮಚಂದ್ರ ಭಟ್ ಹಳೆಮನೆ ಉಪಸ್ಥಿತರಿದ್ದರು.
ಉದ್ಘಾಟನೆ ಸಂದರ್ಭದಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ ಪುರುಷೋ ತ್ತಮ ಪ್ರತಾಪನಗರ ಮಾತನಾಡುತ್ತಾ ಧರ್ಮದ ರಕ್ಷಣೆ ಸಂಸ್ಕಾರಯುತ ವ್ಯಕ್ತಿಗಳಿಂದ ಆಗಬೇಕಿದೆ. ಅಂತಹ ಸಂಸ್ಕಾರಯುತ ವ್ಯಕ್ತಿ ಸಮಾಜ ನಿರ್ಮಾಣದ ಕೆಲಸ ಬಾಲಗೋಕುಲ ಗಳಿಂದ ಆಗುತ್ತಿದೆ. ಇಂದು ನಾವು ಒಬ್ಬ ವ್ಯಕ್ತಿಯ ಕುಟುಂಬದಿಂದ ಹಿಡಿದು ಇಡೀ ರಾಷ್ಟ್ರಕ್ಕೆ ಸಂಬಂ ಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಎಲ್ಲ ಸಮಸ್ಯೆಗಳಿಗೆ ವ್ಯಕ್ತಿಯೇ ಕಾರಣ. ಆದರೆ ವ್ಯಕ್ತಿ ಸಂಸ್ಕಾರವಂತನಾಗಿ ಆತ್ಮಕ್ಕೆ ಪೂರಕವಾಗಿ ಬದುಕಿದಾಗ ವ್ಯಕ್ತಿಯ ಜೀವನಕ್ಕೆ ಸರಿಯಾದ ದಿಕ್ಕು ಸಿಗಲು ಸಾಧ್ಯ. ಈ ಬಾಲಗೋಕುಲಗಳ ಮೂಲಕ ಬಾಲ್ಯದಿಂದಲೇ ಹಿಂದೂ ಸಂಸ್ಕಾರ ಕಲಿಸಿ ಕೊಡುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಬಳಿಕ ಬಾಲಗೋಕುಲಗಳ ಮಕ್ಕಳಿಗೆ ದೇಶ ಭಕ್ತಿಗೀತೆ, ವಂದೇ ಮಾತರಂ ಹಾಡುವ ಸ್ಪರ್ಧೆ, ಕುಣಿತ ಭಜನೆ ಹಾಗೂ ವಿವಿಧ ಆಟಗಳ ಸ್ಪರ್ಧೆಗಳು ನಡೆದವು. ಗೋಕುಲೋತ್ಸವದಲ್ಲಿ ಮಂಜೇಶ್ವರ ತಾಲೂಕಿನ 27 ಬಾಲಗೋಕುಲಗಳ ಒಟ್ಟು 436 ಮಕ್ಕಳು ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಎಯುಪಿ ಶಾಲೆಯ ಸಂಚಾಲಕಿ ಮೋಕ್ಷದಾ ಬಿ. ಶೆಟ್ಟಿ ವಹಿಸಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಆರೆಸ್ಸೆಸ್‌ನ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಬಾಲಗೋಕುಲಗಳ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.