![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 2, 2019, 6:30 AM IST
ಗೋಣಿಕೊಪ್ಪಲು/ಮಡಿಕೇರಿ: ತೋಟದಲ್ಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಮೇಲೆ ಕಬ್ಬಿಣದ ಏಣಿ ಆಕಸ್ಮಿಕವಾಗಿ ಜಾರಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಅರ್ವತ್ತೂಕ್ಲು ಗ್ರಾಮದ ಪಿ.ಎಚ್.ಎಸ್. ಕಾಲನಿಯಲ್ಲಿ ರವಿವಾರ ಸಂಜೆ ಸಂಭವಿಸಿದೆ.
ಕಾವಡಿ ಗ್ರಾಮದ ಇಗ್ಗುಡ ಸತೀಶ್ (50), ಇಗ್ಗುಡ ರವಿ (45), ಮೊಟ್ಟೇರ ಧರ್ಮಜ (50) ಮೃತಪಟ್ಟವರು. ಸ್ಥಳೀಯ ನಿವಾಸಿ ರಾಮಜಮ್ಮ ಅವರ ತೋಟದಲ್ಲಿ ಅವಘಡ ಸಂಭವಿಸಿತು. ಮೂವರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಕೆಲಸಕ್ಕೆ ತೆರಳಿದವರು ರಾತ್ರಿಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಸೋಮವಾರ ಬಂದು ತೋಟದಲ್ಲಿ ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರು ಸಹೋದರರು
ಮೃತರ ಪೈಕಿ ಧರ್ಮಜ, ಸತೀಶ್ ಸಹೋದರರು. ಸತೀಶ್ ಅವರು ರಾಮಜಮ್ಮ ಅವರ ತೋಟದಲ್ಲಿ ರೈಟರ್ ಆಗಿಯೂ ರವಿ ವಾಹನ ಚಾಲಕರಾಗಿಯೂ ಕೆಲಸ ಮಾಡುತ್ತಿ ದ್ದರು. ತೋಟದಲ್ಲಿ ಕಾಯಿ ಕೊಯ್ಯುತ್ತಿದ್ದಾಗ ಮರದ ಹತ್ತಿರದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಮೇಲೆ ಏಣಿ ಬಿದ್ದಿತು. ಏಣಿ ಏರುವ ಸಂದರ್ಭವೇ ಘಟನೆ ನಡೆದಿರ ಬಹುದು ಎಂದು; ಓರ್ವ ಏಣಿ ಏರುವಾಗ ಇಬ್ಬರು ಜಾರ ದಂತೆ ಹಿಡಿದುಕೊಂಡಿರಬಹುದು ಎಂದು ಅಂದಾಜಿಸಲಾ ಗಿದೆ. ಬೆಂಕಿಯಿಂದ ತೋಟದಲ್ಲಿನ ಎಲೆಗಳು ಕೂಡ ಸುಟ್ಟು ಹೋಗಿವೆ.
ಸೋಮವಾರ ಸ್ಥಳದಲ್ಲೇ ಶವಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಡಿವೈಎಸ್ಪಿ ನಾಗಪ್ಪ, ಗೋಣಿಕೊಪ್ಪ ಉಪನಿರೀಕ್ಷಕ ಶ್ರೀಧರ್, ಸೆಸ್ಕ್ ಎಇಇ ಅಂಕಯ್ಯ, ಜೆಇ ಕೃಷ್ಣ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
You seem to have an Ad Blocker on.
To continue reading, please turn it off or whitelist Udayavani.