ಸರಕಾರ, ವಿಪಕ್ಷಗಳೇ ಹೊಣೆ: ಕೇಂದ್ರ ಸಚಿವ ಕಣ್ಣಂತಾನಂ
Team Udayavani, Apr 9, 2018, 9:30 AM IST
ಕಾಸರಗೋಡು: ಕರುಣಾ, ಕಣ್ಣೂರು ಮೆಡಿಕಲ್ ಕಾಲೇಜು ಪ್ರವೇಶಾತಿ ಮಸೂದೆಯನ್ನು ರಾಜ್ಯಪಾಲರು ಹಿಂದಿರುಗಿಸಿರುವುದರ ಸಂಪೂರ್ಣ ಹೊಣೆಯಿಂದ ಜಾರಿಕೊಳ್ಳಲು ಸರಕಾರ ಹಾಗೂ ವಿಪಕ್ಷಕ್ಷೆ ಸಾಧ್ಯವಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಹೇಳಿದರು. ರವಿವಾರ ಬೆಳಗ್ಗೆ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಲುಪಿದ ಅವರು ಪತ್ರಿಕಾ ಪ್ರತಿನಿಧಿಗಳ ಜತೆ ಮಾತನಾಡಿದರು. ವಿಧಾನಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿ, ಈಗ ಅದನ್ನು ವಿರೋಧಿಸುವ ವಿಪಕ್ಷಕ್ಕೆ ಪ್ರಾಮಾಣಿಕತೆ ಇಲ್ಲ ಎಂದರು. ಸರಕಾರ ತಪ್ಪು ಹಾದಿಯಲ್ಲಿ ಸಾಗುವಾಗ ಅದನ್ನು ತಿದ್ದಿ ಸರಿದಾರಿಗೆ ತರಬೇಕಾದ ಹೊಣೆ ವಿಪಕ್ಷಗಳಿಗಿವೆ. ಆದರೆ ಇಲ್ಲಿ ಅದು ಸಂಭವಿಸಲಿಲ್ಲ. ಆದರೆ ಬಿಜೆಪಿ ವಿಧಾನಸಭೆಯಲ್ಲೂ ಹೊರಗೂ ಈ ಮಸೂದೆಯನ್ನು ಎದುರಿಸುತ್ತದೆ.
ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕಣ್ಣಂತಾನಂ ನುಡಿದರು.
ಬೆಳಗ್ಗೆ ಕಾಸರಗೋಡಿಗೆ ತಲುಪಿದ ಕೇಂದ್ರ ಸಚಿವರಿಗೆ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಬಳಿಕ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಅನಂತರ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಉದ್ಘಾಟಿಸಿ ಎಣ್ಮಕಜೆ ಪಂಚಾಯತ್‌ನ ನವೀಕರಿಸಿದ ರಸ್ತೆಯನ್ನು ಉದ್ಘಾಟಿಸಿದರು. ಬಳಿಕ ಕಾಂಞಂಗಾಡ್‌ನ ವಿಶ್ವಕರ್ಮ ಕಲಾ ಮಂದಿರ ಉದ್ಘಾಟಿಸಿದರು. ಬಿಜೆಪಿ ವತಿಯಿಂದ ನೀಡಿದ ಕಾರ್ಯಕ್ರಮದಲ್ಲಿ ಹಲವಾರು ನೇತಾರರು ಭಾಗವಹಿಸಿದರು. ಇದಕ್ಕೂ ಮೊದಲು ಕಾಂಞಂಗಾಡ್ ಜವಾಹರ್ ಕಾಲೇಜಿನ ಪ್ರಾಂಶುಪಾಲೆ ಪುಷ್ಪಜಾ ಅವರ ಮನೆಗೆ ಭೇಟಿ ನೀಡಿ ಪ್ರಾಂಶುಪಾಲೆಯನ್ನು ಸಂತೈಸಿದರು.
ಪ್ರವಾಸೋದ್ಯಮ ವಿಚಾರಗೋಷ್ಠಿ
ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದು, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಿರು ಉದ್ದಿಮೆಗಳು, ಬಂಡವಾಳ ಹೂಡಿಕೆದಾರರು ಮುಂದೆ ಬರಬೇಕೆಂದು ಕೇಂದ್ರ ಸಚಿವ ಕಣ್ಣಂತಾನಂ ಹೇಳಿದರು. ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಮುನ್ಸಿಪಲ್ ವನಿತಾ ಭವನದಲ್ಲಿ ಆಯೋಜಿಸಿದ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇರಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಅವಕಾಶಗಳಿದ್ದರೂ, ಅವುಗಳನ್ನು ಬಳಸಿಕೊಳ್ಳಲು ರಾಜ್ಯ ಸರಕಾರ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೇರಳದಲ್ಲಿ ಪ್ರವಾಸೋದ್ಯಮ ನೆಲಕಚ್ಚಲಿದೆ. ಪ್ರವಾಸೋದ್ಯಮದಲ್ಲಿ ಅತ್ಯಾಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯ ದರ್ಶಿ ಎ. ವೇಲಾಯುಧನ್ ಸ್ವಾಗತಿಸಿ ದರು. ವಲಿಯಪರಂಬ ಪಂ. ಅಧ್ಯಕ್ಷ ಅಬ್ದುಲ್ ಜಬ್ಟಾರ್, ಜೋಸೆಫ್ ಕನಕಮೊಟ್ಟ, ಜೋಸ್ ಪುಳಿಂಜಿಕುನ್ನೇಲ್, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.