ಯಕ್ಷರಂಗದಲ್ಲಿ ಉತ್ತಮ ಅವಕಾಶ: ಮಂಜುನಾಥ
Team Udayavani, Oct 11, 2019, 5:36 AM IST
ಬದಿಯಡ್ಕ: ಹಿಂದಿನ ಕಾಲದಲ್ಲಿ ಕಲಾವಿದನಾಗುವುದು ಎಂಬುದು ಒಂದು ಸವಾಲಾಗಿತ್ತು. ಯಾಕೆಂದರೆ ಇಂದಿನಂತೆ ಸೌಕರ್ಯಗಳಿರಲಿಲ್ಲ.
ಪ್ರೋತ್ಸಾಹವೂ ಇಲ್ಲ. ಆದರೆ ನಮ್ಮೊಳಗೆ ಯಕ್ಷಗಾನ ಬಗ್ಗೆ ಅಪಾರವಾದ ಆಸಕ್ತಿ, ಆಕರ್ಷಣೆ ಮತ್ತು ಕಲಿಯುವ ತುಡಿತವಿತ್ತು. ಕಲಿಸುವವರಿಲ್ಲದ ಕಾಲದಲ್ಲಿ ಕಲಿತವರು ನಾವು. ಇಂದು ಧಾರಾಳ ಅವಕಾಶಗಳಿವೆ. ಅದನ್ನು ಸದುಪಯೋಗ ಪಡಿಸುವತ್ತ ಹೆಚ್ಚು ಗಮನ ಹರಿಸಬೇಕು. ಆ ಮೂಲಕ ಕಲೆಯನ್ನು ಹಸಿರಾಗಿಸಬೇಕು ಎಂದು ಬದಿಯಡ್ಕ ಪಂಚಾಯತ್‌ನ ಮಾಜಿ ಸದಸ್ಯ ಮಂಜುನಾಥ ಮಾನ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೊಲ್ಲಂಗಾನ ಶ್ರೀನಿಲಯ ಶ್ರೀ ದುರ್ಗಾಪರಮೆಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಲಾದ ಯಕ್ಷ ದಶ ವೈಭವದ ಗೌರವಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ನರಸಿಂಹ ಭಟ್ ಬೆಟ್ಟಂಪಾಡಿಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸುಂದರ ಶೆಟ್ಟಿ ಕೊಲ್ಲಂಗಾನ, ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಸಲಹೆಗಾರರಾದ ಪ್ರೊ| ಶ್ರೀನಾಥ್, ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿ ರವಿಶಂಕರ ಶೆಟ್ಟಿ ಕೊಲ್ಲಂಗಾನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉತ್ಸವದಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ ನಡೆಸಿಕೊಟ್ಟ ಯಕ್ಷಗಾನ ಬಯಲಾಟ ಚಕ್ರವರ್ತಿ ದಶರಥ ಜನಮನ ಸೂರೆಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.