ಜಿ.ಎಸ್.ಟಿ.: ವ್ಯಾಪಾರಿಗಳಿಂದ ಅಂಗಡಿ ಬಂದ್
Team Udayavani, Jul 12, 2017, 3:00 AM IST
ಕಾಸರಗೋಡು: ಸರಕು ಸೇವಾ ತೆರಿಗೆ (ಜಿ.ಎಸ್.ಟಿ) ಸಹಿತ ವಿಷಯಗಳಿಗೆ ಸಂಬಂಧಿಸಿ ರಾಜ್ಯದಲ್ಲಿ ಚಳವಳಿ ವ್ಯಾಪಕಗೊಂಡಿದೆ. ಜಿಎಸ್‌ಟಿ ಗೊಂದಲಗಳನ್ನು ಪರಿಹರಿಸದಿರುವುದನ್ನು ಪ್ರತಿಭಟಿಸಿ ರಾಜ್ಯದಾದ್ಯಂತ ಮಂಗಳವಾರ ವ್ಯಾಪಾರ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಿ ಮುಷ್ಕರ ನಡೆಸಿದರು.
ಜಿಎಸ್‌ಟಿ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಪರಿಹಾರ ಲಭಿಸದಿರುವು ದರಿಂದ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿ ನೀಡಿದ ಕರೆಯಂತೆ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚುಗಡೆಗೊಳಿಸಿದರು.
ಅನಗತ್ಯವಾಗಿ ಅಂಗಡಿಗಳಿಗೆ ತಲುಪಿ ಪರಿಶೀಲನೆ ನಡೆಸುವುದನ್ನು ಕೊನೆಗೊಳಿಸಬೇಕು ಸಹಿತ ಹನ್ನೊಂದು ಬೇಡಿಕೆಗಳನ್ನು ಮುಂದಿರಿಸಿ ವ್ಯಾಪಾರಿಗಳು ಮುಷ್ಕರ ನಡೆಸಿದರು. ಇದೇ ವೇಳೆ ಹಣಕಾಸು ಸಚಿವರೊಂದಿಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಹಸನ್ ಕೋಯ ವಿಭಾಗ ಮುಷ್ಕರದಿಂದ ಹಿಂದೆ ಸರಿದಿದೆ. ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಾರಿಗಳ ಮುಷ್ಕರ ಯಶಸ್ವಿಯಾಗಿದೆ. ಪ್ರಧಾನ ಪೇಟೆಗಳಲ್ಲಿ ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿವೆ. ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿರುವುದರಿಂದ ಪೇಟೆಗಳಲ್ಲಿ ಜನಸಂಖ್ಯೆ ವಿರಳವಾಗಿದೆ. ಕೋಳಿ ಬೆಲೆ ಕಿಲೋಗೆ 87 ರೂ. ಆಗಿ ನಿಗದಿಗೊಳಿಸಬೇಕೆಂದು ಸರಕಾರ ಆದೇಶಿಸಿರುವುದನ್ನು ಪ್ರತಿಭಟಿಸಿ ಕೋಳಿ ವ್ಯಾಪಾರಿಗಳು ಜು. 10ರಿಂದ ಅಂಗಡಿ ಮುಚ್ಚುಗಡೆಗೊಳಿಸಿ ಮುಷ್ಕರದಲ್ಲಿ ತೊಡಗಿದ್ದಾರೆ. ಮುಷ್ಕರ ನಿರತ ವ್ಯಾಪಾರಿಗಳು ಕಾಸರಗೋಡು ನಗರದಲ್ಲಿ, ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಿದರು.
ಬದಿಯಡ್ಕದಲ್ಲಿ ಅಂಚೆ ಕಚೇರಿ ಧರಣಿ
ಜಿಎಸ್‌ಟಿ ಸಂಬಂಧ ನ್ಯೂನತೆಗಳನ್ನು ಪರಿಹರಿಸಬೇಕೆಂದು ಬೇಡಿಕೆ ಮುಂದಿರಿಸಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಹಾಗೂ ಮುಳ್ಳೇರಿಯ ಘಟಕಗಳು ಸಂಯುಕ್ತವಾಗಿ ಬದಿಯಡ್ಕ ಅಂಚೆ ಕಚೇರಿ ಮುಂದೆ ಧರಣಿ ನಡೆಸಿದವು. ಇದಕ್ಕೆ ಮುಂಚಿತವಾಗಿ ವ್ಯಾಪಾರಿಗಳು ಪೇಟೆಯಲ್ಲಿ ಮೆರವಣಿಗೆ ನಡೆಸಿದರು.
ಉಪ್ಪಳ ಅಂಚೆ ಕಚೇರಿಯ ಮುಂದೆ ಧರಣಿ
ಉಪ್ಪಳದಲ್ಲಿ ವ್ಯಾಪಾರಿಗಳು ಅಂಗಡಿ ಗಳನ್ನು ಮುಚ್ಚಿ ಉಪ್ಪಳ ಅಂಚೆ ಕಚೇರಿಯ ಮುಂದೆ ಧರಣಿ ನಡೆಸಿದರು. ವ್ಯಾಪಾರಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಪೈಕ ಅಬ್ದುಲ್ಲ ಕುಂಞಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಹಾಗೂ ಉಪ್ಪಳ ಯೂನಿಟ್ ಅಧ್ಯಕ್ಷ ಮೊಹಮ್ಮದ್ ರಫೀಕ್ ಕೆ.ಐ.ಅಧ್ಯಕ್ಷತೆ ವಹಿಸಿದರು. ಯೂತ್ ವಿಂಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಟಾರ್ , ವ್ಯಾಪಾರಿ ಸಮಿತಿಯ ಉಪ್ಪಳ ವಲಯದ ಎಲ್ಲಾ ಯೂನಿಟ್‌ಗಳ ಅಧ್ಯಕ್ಷರು ಶುಭಹಾರೈಸಿದರು. ಧರಣಿಗೆ ಮುನ್ನ ವ್ಯಾಪಾರಿಗಳಿಂದ ಮೆರವಣಿಗೆ ನಡೆಯಿತು. ಜು.10ರಂದು ರಾತ್ರಿ ಉಪ್ಪಳ ಪೇಟೆಯಲ್ಲಿ ವ್ಯಾಪಾರಿಗಳು ಪಂಜಿನ ಮೆರವಣಿಗೆ ನಡೆಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.