ಬಂಟರ ಸಂಘ: ವರ್ಕಾಡಿ ವಲಯ ಸಮಿತಿಯಿಂದ ಗುರುವಂದನೆ
Team Udayavani, Sep 8, 2017, 8:30 AM IST
ಕುಂಬಳೆ: ಬಂಟರಸಂಘ ವರ್ಕಾಡಿ ವಲಯ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯಂಗವಾಗಿ ಬಾಕ್ರಬೈಲು ಎ.ಯು.ಪಿ. ಶಾಲೆಯ ನಿವೃತ್ತ ಶಿಕ್ಷಕ ಕಿಟ್ಟಣ್ಣ ಶೆಟ್ಟಿಯವರಿಗೆ ಸ್ವಗೃಹದಲ್ಲಿ ವರ್ಕಾಡಿ ಬಂಟ ಸಮಾಜ ಬಾಂಧವರ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಮುಡಿಪು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಟಿ. ಆಳ್ವ, ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ ತಮ್ಮ ಅಧ್ಯಾಪನ ಅನುಭವನ್ನು ವಿವರಿಸಿ ಗುರು ವಂದನೆಯು ಕೇವಲ ಒಂದು ದಿನದ ಮಂತ್ರ ವಾಗಿರದೆ ಅದು ವಿದ್ಯಾರ್ಥಿ ಜೀವನದ ನಿತ್ಯ ಸತ್ಯ ವಿಚಾರ ಆಚಾರವಾಗಿರಲಿ. ಗುರುವಿನ ಭೋದನೆಯು ವಿದ್ಯಾìರ್ಥಿಗಳ ಜೀವನದಲ್ಲಿ ಕೈಪಿಡಿಯಾಗಿರಲಿ ಎಂದರು. ಗುರುವನ್ನು ಕಂಡಾಗ ಓಡುವುದನ್ನು ಬಿಟ್ಟು ತನ್ನಲ್ಲಿರುವ ತನುವನ್ನು ಓಡಿಸುವ ಕೆಲಸವನ್ನು ಮಾಡಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವಿಚಾರ ತಾತ್ಪರ್ಯಯವನ್ನು ಅರಿತು ನಡೆಯುವುದೇ ನಿಜವಾದ ಗುರುವಂದನೆ. ವಿದ್ಯಾರ್ಥಿಗೆ ಗುರು ಇದ್ದಾಗ ಆತನ ಜೀವನ ಮೌಲ್ಯಕೊಂದು ಗರಿಮೂಡುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ದೇವಪ್ಪ ಶೆಟ್ಟಿ ಚಾವಡಿ ಬೈಲು ವಹಿಸಿ ಮಾತನಾಡಿ, ಒಂದು ಮಗುವನ್ನು ಸುಸಂಸ್ಕೃತನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದು ಎಂದರು. ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ದೀಲೀಪ್ ರೈ ಸುಳ್ಯಮೆ ತಮ್ಮ ಪಾಸ್ತಾವಿಕ ಭಾಷಣದಲ್ಲಿ ಭಾರತೀಯ ಸಂಸೃRತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ಕಲ್ಪಿಸಲಾಗಿದೆ ಎಂದರು. ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ನಡಿಮಾರು, ಮಹಾಬಲ ಶೆಟ್ಟಿ ಪುಂಡಿಕ್ಕು, ಬಾಲಕೃಷ್ಣ ಶೆಟ್ಟಿ ಪಾವಳ, ಲಕ್ಷ್ಮಣ್ ಶೆಟ್ಟಿ ಬೈರೋಡಿ, ಪುಷ್ಪಾವತಿ ಪುಷ್ಪರಾಜ ಶೆಟ್ಟಿ ಬಾಕ್ರಬೈಲು, ಉಷಾ ಬೇಬಿ ಆರ್. ಶೆಟ್ಟಿ ಅಡೇಕಳಕಟ್ಟೆ ಉಪಸ್ಥಿತರಿದ್ದರು. ವಿದ್ಯಾನಂದ ಸಾಮಾನಿ ಸ್ವಾಗತಿಸಿದರು.ಜಯಂತ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.