‘ಕೊಡಗಿನ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಓರ್ವ ದೈವಾಂಶ ಸಂಭೂತ’


Team Udayavani, Apr 9, 2018, 9:55 AM IST

APPACHA-KAVI-8-4.jpg

ಮಡಿಕೇರಿ: ಕೊಡಗಿನ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಓರ್ವ ದೈವಾಂಶ ಸಂಭೂತ ಕವಿಯೇ ಆಗಿದ್ದು, ಇವರ ಸಾಹಿತ್ಯದಿಂದ ಅನೇಕರು ಪ್ರಭಾವಿತರಾಗಿದ್ದಾರೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅಭಿಪ್ರಾಯಪಟ್ಟಿದ್ದಾರೆ. ಅಖಿಲ ಕೊಡವ ಸಮಾಜ ಮತ್ತು ಮಡಿಕೇರಿ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಹರದಾಸ ಅಪ್ಪನೆರವಂಡ ಅಪ್ಪ‌ಚ್ಚ ಕವಿಯ 150ನೇ ಜನ್ಮೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಪ್ಪಚ್ಚ ಕವಿ ಅವರು ನಲ್ವತ್ತೇಳು ವಿವಿಧ ರಾಗಗ‌ಳಿಗೆ ಅನುಗುಣವಾಗಿ ಪದ್ಯಗಳನ್ನು ರಚಿಸಿದ್ದಾರೆ, ಇಂತಹ ಒಂದು ಪ್ರಯತ್ನ ಮತ್ತೆಲ್ಲೂ ಕಂಡು ಬರುವುದಿಲ್ಲವೆಂದು ತಿಳಿಸಿದರು.

ಅಪ್ಪಚ್ಚ ಕವಿ ಅವರನ್ನು 1945ರಲ್ಲಿ ನಡೆದ ಒಂದು ಸಭೆಯಲ್ಲಿ ಕೋಟೇರ ಮುತ್ತಣ್ಣ ಎಂಬವರು ಷೇಕ್ಸ್‌ ಪಿಯರ್‌ನಿಗೆ ಹೋಲಿಸುತ್ತಾರೆ. ಅದೇ ಸಂದರ್ಭ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಉನ್ನತ ಶಿಕ್ಷಣ ಪಡೆಯದ ಅಪ್ಪಚ್ಚ ಕವಿಯನ್ನು ಷೇಕ್ಸ್‌ಪಿಯರ್‌ನಿಗೆ ಹೋಲಿಸುವುದು ಸರಿಯಲ್ಲವೆಂದು ತಿಳಿಸಿದ್ದರು. ಆದರೆ, ಅದೇ ವ್ಯಕ್ತಿ 1967ರಲ್ಲಿ ನಡೆದ ಅಪ್ಪಚ್ಚ ಕವಿಯ ಜನ್ಮ ಶತಮಾನೋತ್ಸವ ಸಂದರ್ಭ ತಾವು ಹಿಂದೆ ಕವಿಯ ಬಗ್ಗೆ ಮಾಡಿದ್ದ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸಿದ್ದರೆಂದು ತಿಳಿಸಿದ ಬಾಚರಣಿಯಂಡ ಅಪ್ಪಣ್ಣ, ಹೀಗೆ ಸಾಕಷ್ಟು ಮಂದಿ ಅಪ್ಪಚ್ಚ ಕವಿಯ ಬಗ್ಗೆ ಮಾಹಿತಿ ಇಲ್ಲದೆ ಹೇಳಿಕೆ ನೀಡಿದ್ದಾರಾದರೂ, ಬಳಿಕ ಅವರ ಸಾಹಿತ್ಯದಿಂದ ಪ್ರಭಾವಿತರಾದುದನ್ನು ಉಲ್ಲೇಖೀಸಿದರು.

ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವದ ಅ.ನ. ಕೃಷ್ಣರಾಯರು ಈ ಹಿಂದೆ ಅಪ್ಪಚ್ಚ ಕವಿ ದುರಂತ ಕವಿಯೆನ್ನುವ ಮಾತುಗಳನ್ನು ಅಲ್ಲಗಳೆೆದು, ಅಪ್ಪಚ್ಚ ಕವಿ ಎಂದಿಗೂ ದುರಂತ ಕವಿಯಲ್ಲ. ಬದಲಾಗಿ, ಅವರ ಮೇರು ಸಾಹಿತ್ಯವನ್ನು ಸ್ಥಳೀಯರು ಓದಲಿಲ್ಲ, ಅವರಿಂದ ರಚಿತವಾದ ಹಾಡುಗಳನ್ನು ಹಾಡಲಿಲ್ಲ, ಕೇಳಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದನ್ನು ಉಲ್ಲೇಖೀಸಿದ ಬಾಚರಣಿಯಂಡ ಅಪ್ಪಣ್ಣ, ಅಪ್ಪಚ್ಚ ಕವಿ ತಮ್ಮ ಮೇರು ಸ್ತರದ ಸಾಹಿತ್ಯ ರಚನೆಯ ಮೂಲಕ ಮಹಾನ್‌ ವ್ಯಕ್ತಿಯಾಗಿರುವುದಾಗಿ ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್‌. ದೇವಯ್ಯ ಮಾತನಾಡಿ, ಕೊಡವ ಭಾಷೆಯ ಸಣ್ತೀವನ್ನು ನಮಗೆ ತಿಳಿಸಿದ, ಕಾವೇರಿಯನ್ನು ನಮ್ಮ ತಾಯಿಯೆಂದು, ಇಗ್ಗುತ್ತಪ್ಪನನ್ನು ತಮ್ಮ ತಂದೆಯೆಂದು ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟ ಮಹಾನ್‌ ಕವಿ ಹರದಾಸ ಅಪ್ಪಚ್ಚ ಕವಿಯಾಗಿದ್ದಾರೆ ಎಂದು ಶ್ಲಾಘಿಸಿದರು.


ನಾಟಕ ಪ್ರದರ್ಶನ

ನಗರದ ಜನರಲ್‌ ತಿಮ್ಮಯ್ಯ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿಗಳಿಂದ, ಮಾದೇಟಿರ ಪ್ರಮೀಳಾ ಜೀವನ್‌ ಅವರ ನಿರ್ದೇಶನದಲ್ಲಿ ಹರದಾಸ ಅಪ್ಪಚ್ಚ ಕವಿ ಅವರ ನಾಟಕದ ಆಯ್ದ ಒಂದು ಭಾಗದ ನಾಟಕ ಪ್ರದರ್ಶನ ನಡೆಯಿತು. ಇದರೊಂದಿಗೆ ಜಿಲ್ಲೆಯ ಖ್ಯಾತ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರಿಂದ ಕವಿ ಕಾವ್ಯ ನಿರೂಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿàರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್‌, ನಿರ್ದೇಶಕರುಗಳಾದ ಪುಟ್ಟಿಚಂಡ ಡಾಲಿ ದೇವಯ್ಯ, ಕಾಳೆಯಂಡ ಮುತ್ತಪ್ಪ, ಪೊನ್ನಚೆಟ್ಟಿàರ ಸುಬ್ಬಯ್ಯ, ಚೊಟ್ಟೆಯಂಡಮಾಡ ಅಪ್ಪಾಜಿ, ನಂದೇಟಿರ ರಾಜಾ ಮಾದಪ್ಪ, ಉಳ್ಳಿಯಡ ಗಂಗಮ್ಮ, ಐಮುಡಿಯಂಡ ರಾಣಿ ಮಾಚಯ್ಯ, ತಾತಂಡ ಸರೋಜ, ಅಖೀಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿàರ ಸುಬ್ರಮಣಿ ಮಾದಯ್ಯ, ಅಖೀಲ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ರಾಜಾ ಮಾದಪ್ಪ ಉಪಸ್ಥಿತರಿದ್ದರು. ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡವ ಸಮಾಜದ ನಿರ್ದೇಶಕರಾದ ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ

1-katte

ಕಟ್ಟೆಮಾಡು ದೇಗುಲ ವಸ್ತ್ರ ಸಂಹಿತೆೆ ವಿವಾದ: ಆಡಳಿತ ಮಂಡಳಿ ಸಭೆಯಲ್ಲಿ ಮೂಡದ ಒಮ್ಮತ‌

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.