ಅಗ್ನಿ ದುರಂತ : ಹವ್ಯಕ ಮಂಡಲಗಳ 40 ಸೇವಾ ಬಿಂದುಗಳಿಂದ ಶ್ರಮದಾನ
Team Udayavani, Mar 20, 2018, 10:30 AM IST
ಪೆರ್ಲ: ಮುಳ್ಳೇರಿಯ ಹವ್ಯಕ ಮಂಡಲದ ಎಣ್ಮಕಜೆ ವಲಯದ ನಿಷ್ಠಾವಂತ ಗುರು ಭಕ್ತ ಅಬರಾಜೆ ಘಟಕದ ಗುರಿಕ್ಕಾರ ಹಾಗೂ ಸೇವಾ ವಿಭಾಗದ ಪ್ರಧಾನ ಶಂಕರನಾರಾಯಣ ಪ್ರಕಾಶ ಅವರ ನಿವಾಸದಲ್ಲಿ ಇತ್ತೀಚೆಗೆ ಅನಿರೀಕ್ಷಿತ ಅಗ್ನಿದುರಂತ ಸಂಭವಿಸಿ ಹಟ್ಟಿ ಹಾಗೂ ಕೊಟ್ಟಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿ ಅಪಾರ ಪ್ರಮಾಣದ ನಾಶ ನಷ್ಟ ಉಂಟಾಗಿತ್ತು. ವಿವರವನ್ನರಿತು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಬರಾಜೆ ಕುಟುಂಬಕ್ಕೆ ಆಶೀರ್ವದಿಸಿ ಫಲ ಮಂತ್ರಾಕ್ಷತೆ ಹಾಗೂ ಸಂದೇಶವನ್ನು ನೀಡಿ ಕಳುಹಿಸಿಕೊಟ್ಟರು.
ಮಹಾಮಂಡಲ ಕಾರ್ಯದರ್ಶಿ ಮೂಲಕ ಮಂಡಲ ಅಧ್ಯಕ್ಷ ಶ್ರೀಕೃಷ್ಣ ಭಟ್, ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮಂಡಲ ಸಂಘಟನಾ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಮೀನಗದ್ದೆ, ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ, ವಲಯ ಕಾರ್ಯದರ್ಶಿ ಶಂಕರ ಪ್ರಸಾದ ಕುಂಚಿನಡ್ಕ ಹಾಗೂ ಇತರರು ಅಬರಾಜೆ ಮನೆಗೆ ಭೇಟಿ ನೀಡಿ ಮನೆ ದೇವರ ಸಾನ್ನಿಧ್ಯದಲ್ಲಿ ಮುಂದಿನ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಎಣ್ಮಕಜೆ ವಲಯದ ನೇತೃತ್ವದಲ್ಲಿ ಪಳ್ಳತ್ತಡ್ಕ, ಪೆರಡಾಲ, ಈಶ್ವರ ಮಂಗಲ ವಲಯದ ಸೇವಾ ಬಿಂದುಗಳ ನೇತೃತ್ವದಲ್ಲಿ ಶ್ರಮದಾನವನ್ನು ನಡೆಸಲಾಯಿತು. 40ಕ್ಕೂ ಹೆಚ್ಚು ಸೇವಾ ಬಿಂದುಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.