ಗಡಿ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ
Team Udayavani, Mar 16, 2020, 5:01 AM IST
ಕಾಸರಗೋಡು: ರಾಜ್ಯದಾದ್ಯಂತ ಎಲ್ಲ ಗಡಿ ಪ್ರದೇಶಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಆರೋಗ್ಯ ಮತ್ತು ಪೊಲೀಸರ ತಂಡ ತಪಾಸಣೆಯಲ್ಲಿ ತೊಡಗಿದೆ.
ಜಿಲ್ಲೆಯ ಮಂಜೇಶ್ವರ, ಪೆರ್ಲ, ಆದೂರು ಮತ್ತಿತರ ಗಡಿಗಳಲ್ಲಿ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಧರಿಸಿದ ಆರೋಗ್ಯ ಮತ್ತು ಪೊಲೀಸರ ತಂಡ ವಾಹನಗಳನ್ನು ತಡೆದು ನಿಲ್ಲಿಸಿ ಅದರಲ್ಲಿರುವ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೊಳಪಡಿಸುತ್ತಿದೆ. ವಿಮಾನ ನಿಲ್ದಾಣದಲ್ಲಿ ಎಸ್.ಪಿ. ಶ್ರೇಣಿಯಲ್ಲಿರುವ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ.
ಬೇರೆ ರಾಜ್ಯಗಳಿಂದ ಗಡಿ ಪ್ರದೇಶದ ಮೂಲಕ ಕೇರಳಕ್ಕೆ ಆಗಮಿಸುವ ಎಲ್ಲ ವಾಹನಗಳನ್ನು ಅದರಲ್ಲೂ ವಿಶೇಷವಾಗಿ ಟೂರಿಸ್ಟ್ ವಾಹನಗಳ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ರೋಗ ಲಕ್ಷಣ ಹೊಂದಿರುವವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿ, ಉಳಿದವರಿಗೆ ಕಠಿನ ನಿರ್ದೇಶಗಳನ್ನು ನೀಡಲಾಗುತ್ತದೆ.
ರೈಲು ಗಾಡಿಯಲ್ಲಿ ತಪಾಸಣೆ
ರೈಲು ಗಾಡಿಗಳಲ್ಲಿ ಜಿಲ್ಲೆಯ ಮೂಲಕ ಹಾದುಹೋಗು ವವರನ್ನು ಪರೀಕ್ಷಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸಜ್ಜುಗೊಂಡಿದೆ. ರೈಲಿನಲ್ಲಿ ಯಾರು ಹೋಗುತ್ತಾರೆ ಎಂಬುದನ್ನು ಪರೀಕ್ಷಿಸಲು ಆರೋಗ್ಯ ಇಲಾಖೆ ಎರಡು ತಂಡಗಳನ್ನು ರಚಿಸಿದೆ. ಪ್ರತಿ ತಂಡವು ಹತ್ತು ಜೆ.ಎಚ್.ಐ.ಗಳು, ಸ್ವಯಂಸೇವಕರು ಮತ್ತು ಪೊಲೀಸರನ್ನು ಒಳಗೊಂಡಿದೆ.
ಸೌದಿಯಿಂದ ಬಂದ ಸಾರಿಗೆ ಬಸ್ ಚಾಲಕನಿಗೆ ರಜೆ
ಸೌದಿಯಿಂದ ಬಂದು ವಿಮಾನನಿಲ್ದಾಣದಲ್ಲಿ ತಪಾಸಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ತಿಳಿದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾದ ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ರಜೆ ನೀಡಿ ವಾಪಸು ಕಳುಹಿಸಲಾಗಿದೆ.
ವಿದೇಶದಿಂದ ಬರುವ ಯಾರೇ ಆಗಲಿ ರೋಗ ಲಕ್ಷಣ
ಗಳಿಲ್ಲದಿದ್ದರೂ 14 ದಿನ ಮನೆಯಲ್ಲಿ ಇತರರೊಂದಿಗೆ ಸಂಪರ್ಕ ಇಟ್ಟುಕೊಳ್ಳದೆ ಇರಲು ಆರೋಗ್ಯ ಇಲಾಖೆಯ ನಿರ್ದೇಶ ಮತ್ತು ಚಾಲಕನ ವಿರುದ್ಧ ದೂರಿನ ಹಿನ್ನೆಲೆಯಲ್ಲಿ ವಾಪಸು ಕಳುಹಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.