heavy rain; ಕಾಸರಗೋಡು ಜಿಲ್ಲೆ: ಇಂದು ಶಾಲೆಗೆ ರಜೆ

ಶಾಲಾ ಆವರಣದಲ್ಲಿ ಮರ ಬಿದ್ದು ವಿದ್ಯಾರ್ಥಿನಿ ಸಾವು

Team Udayavani, Jul 4, 2023, 6:55 AM IST

heavy rain; ಕಾಸರಗೋಡು ಜಿಲ್ಲೆ: ಇಂದು ಶಾಲೆಗೆ ರಜೆ

ಕಾಸರಗೋಡು: ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ. ರವಿವಾರದಿಂದ ಬಿರುಸಾಗಿ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ.

ರವಿವಾರ ರಾತ್ರಿ ಎಡೆಬಿಡದೆ ಸುರಿದಿದ್ದು, ಸೋಮ ವಾರ ಬೆಳಗ್ಗಿನಿಂದ ಮತ್ತಷ್ಟು ಬಿರುಸು ಗೊಂಡಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಇದ್ದು, ಮುನ್ನಚ್ಚರಿಕೆ ಕ್ರಮ ವಾಗಿ ಜಿಲ್ಲಾಡಳಿತವು ಜು. 4ರಂದು ಅಂಗನವಾಡಿಯಿಂದ ಎಸೆಸೆಲ್ಸಿ ತನಕದ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ.

ಪೂರ್ತಿ ಕೇರಳ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಂಭವ ಇರುವು ದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಸಮುದ್ರ ಪ್ರಕ್ಷುಬ್ಧವಾಗಿರಲಿದೆ.

ರಭಸ ವಾಗಿ ಗಾಳಿ ಕೂಡ ಬೀಸುವ ಸಾಧ್ಯತೆ ಇದ್ದು, ಅಪಾಯಗಳನ್ನು ಎದುರಿಸಲು ಸಜ್ಜಾಗಿರುವಂತೆ ಹವಾಮಾನ ಇಲಾಖೆ ರಾಜ್ಯಕ್ಕೆ ಸೂಚನೆ ರವಾನಿಸಿದೆ. ಗುರು ವಾರದ ಬಳಿಕ ಮಳೆ ಪ್ರಮಾಣ ನಿಧಾನಕ್ಕೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೂಡ್ಲು: 12 ಸೆಂ.ಮೀ. ಮಳೆ
ಕೇರಳ ರಾಜ್ಯದಲ್ಲಿಯೇ ಅತ್ಯಧಿಕ ಮಳೆ ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ (12 ಸೆಂ.ಮೀ.) ಸುರಿದಿದೆ.

ಶಾಲಾ ಆವರಣದಲ್ಲಿ ಮರ ಬಿದ್ದು ವಿದ್ಯಾರ್ಥಿನಿ ಸಾವು
ಕುಂಬಳೆ: ಸೋಮವಾರ ಸಂಜೆ ಬೀಸಿದ ಗಾಳಿ ಮಳೆಗೆ ಅಂಗಡಿಮೊಗರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ ಪರಿಸರದಲ್ಲಿದ್ದ ಮರವೊಂದು ಮೈಮೇಲೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

6ನೇ ತರಗತಿ ವಿದ್ಯಾರ್ಥಿನಿ ಪರ್ಲಾಡ ಬಿ.ಎಂ. ಯೂಸುಫ್‌ ಅವರ ಪುತ್ರಿ ಆಯಿಷತ್‌ ಮಿನ್ಹಾ (11) ಮೃತ ಬಾಲಕಿ. ಸಂಜೆ 4ಕ್ಕೆ ಶಾಲೆ ಬಿಡುವ ವೇಳೆಗೆ ಜೋರಾಗಿ ಬೀಸಿದ ಗಾಳಿ ಮಳೆಗೆ ಬೃಹತ್‌ ಮರ ಉರುಳಿದ್ದು, ಅದೇ ದಾರಿಯಾಗಿ ಸಹಪಾಠಿಯ ಜತೆ ನಡೆದು ಹೋಗುತ್ತಿದ್ದ ಬಾಲಕಿಯ ಮೇಲೆಯೇ ಬಿದ್ದಿತ್ತು.

ರಿಫಾನಾ ಎಂಬ ವಿದ್ಯಾರ್ಥಿನಿಯೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾ ಗಿದೆ. ಶಾಲಾ ಅವರಣದಲ್ಲಿ ಹಲವು ಮರಗಳಿದ್ದು ಅವುಗಳ ಸಮೀಪವೇ ವಿದ್ಯುತ್‌ ತಂತಿಗಳೂ ಹಾದು ಹೋಗಿವೆ. ಅದೃಷ್ಟವಶಾತ್‌ ಮರದ ಕೊಂಬೆಗಳು ಅದರ ಮೇಲೆ ಬೀಳದ ಕಾರಣ ಸಂಭಾವ್ಯ ದುರಂತ ತಪ್ಪಿದೆ. ಈ ವೇಳೆ ಕಂಬದಲ್ಲಿ ವಿದ್ಯುತ್‌ ಪ್ರವಹಿಸುತ್ತಿದ್ದುದನ್ನು ನೋಡಿದ ಅಧ್ಯಾಪಕರು ಕೆಇಬಿಗೆ ಮಾಹಿತಿ ನೀಡಿದ್ದು, ವಿದ್ಯುತ್‌ ಪ್ರವಾಹವನ್ನು ಕಡಿತಗೊಳಿಸಿದರು. ಬಿ.ಎಂ. ಯೂಸುಫ್‌ ಅವರ ಮೂವರು ಮಕ್ಕಳಲ್ಲಿ ಆಯಿಷತ್‌ ಕೊನೆಯವಳಾಗಿದ್ದಳು.

ಟಾಪ್ ನ್ಯೂಸ್

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

1-kakkaaa

Encounter; ಕುಖ್ಯಾತ ಕ್ರಿಮಿನಲ್ ನನ್ನು ಹೊಡೆದುರುಳಿಸಿದ ತಮಿಳುನಾಡು ಪೊಲೀಸರು

arrest-25

Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್‌ ಸ್ಟಾರ್ ಬಂಧನ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

aatishi

Anti-national;ಅಫ್ಜಲ್ ಗುರು ವಿಚಾರದಲ್ಲಿ ಆತಿಷಿ ವಿರುದ್ಧ ಬಿಜೆಪಿ ಟೀಕಾ ಪ್ರಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dde

Edneer ಶ್ರೀ ಚಾತುರ್ಮಾಸ್ಯ; ಪದಯಾನ ತಂಡದ ಭರತನಾಟ್ಯ

BC-Road

Audio Contraversy: ಶರಣ್‌ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

Accident-Logo

Kasaragodu: ಸ್ಕೂಟರ್‌ – ಕಾರು ಢಿಕ್ಕಿ: ಯುವಕ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

9-uv-fusion

Lineman: ಸೂಪರ್‌ಮ್ಯಾನ್‌ಗಳಿಗೆ ಸಲಾಂ

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

8-uv-fusion

Wayanad landslides: ದೇವರ ನಾಡಿನಲ್ಲಿ ಸೂತಕದ ಛಾಯೆ

1-kakkaaa

Encounter; ಕುಖ್ಯಾತ ಕ್ರಿಮಿನಲ್ ನನ್ನು ಹೊಡೆದುರುಳಿಸಿದ ತಮಿಳುನಾಡು ಪೊಲೀಸರು

arrest-25

Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್‌ ಸ್ಟಾರ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.