ಅಪಾಯ ಭೀತಿಯಲ್ಲಿ ಅಚ್ಚಾಂತುರ್ತಿ-ಕೋಟ್ಟಪ್ಪುರಂ ಕಾಲ್ಸೇತುವೆ
Team Udayavani, Jul 10, 2018, 6:00 AM IST
ಚೆರ್ವತ್ತೂರಿನ ಅಚ್ಚಾಂತುರ್ತಿ ಮತ್ತು ನೀಲೇಶ್ವರದ ಕೋಟ್ಟಪ್ಪುರಂ ಸಂಪರ್ಕಿಸುವ ಈ ಕಾಲ್ಸೇತುವೆಯನ್ನು 2000ನೇ ಇಸವಿಯಲ್ಲಿ ನಿರ್ಮಿಸಲಾಗಿತ್ತು. 310 ಮೀಟರ್ ಉದ್ದವಿರುವ ಕಾರ್ಯಂಗೋಡು ಹೊಳೆಗೆ ಸೇತುವೆ ನಿರ್ಮಿಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಉದ್ದದ ಕಾಲ್ಸೇತುವೆ ಎಂಬ ಖ್ಯಾತಿಯನ್ನೂ ಪಡೆದಿದೆ. ಕಾಲ್ಸೇತುವೆಗೆ ಬಳಸಿರುವ ಇದಿಗ ಕ್ಷಯಿಸಿರುವ ಹಲಗೆಗಳನ್ನು, ಕಂಬಗಳನ್ನು ದುರಸ್ತಿಗೊಳಿಸಬೇಕು ಇಲ್ಲವೇ ಹಲಗೆ ಮತ್ತು ಕಂಬಗಳನ್ನು ಬದಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾಸರಗೋಡು: ಅಚ್ಚಾಂತುರ್ತಿ ದ್ವೀಪ ನಿವಾಸಿಗಳನ್ನು ದಡಕ್ಕೆ ಸೇರಿಸುವ ಅಚ್ಚಾಂತುರ್ತಿ – ಕೋಟ್ಟಪ್ಪುರಂ ಕಾಲ್ಸೇತುವೆ ಅಪಾಯದ ಭೀತಿಯಲ್ಲಿದೆ. ಅಚ್ಚಾಂತುರ್ತಿ – ಕೋಟ್ಟಪ್ಪುರಂ ಕಾಲ್ಸೇತುವೆ ನಡು ಭಾಗ ಕೆಳಕ್ಕೆ ಕುಸಿದಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರಿನ ಹರಿವು ಅಧಿಕವಾದುದರಿಂದ ಕಾಲ್ಸೇತುವೆಯ ಮಧ್ಯ ಭಾಗ ಕೆಳಕ್ಕೆ ಕುಸಿದಿದೆ. ಹೊಳೆಯಲ್ಲಿ ಹರಿದು ಬಂದ ಭೀಮ ಗಾತ್ರದ ಮರಗಳ ರೆಂಬೆಗಳು ಹಾಗೂ ಇತರ ವಸ್ತುಗಳು ಕಾಲ್ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದು ಸೇತುವೆಯ ಮಧ್ಯಭಾಗ ಪಕ್ಕಕ್ಕೆ ವಾಲಲು ಕಾರಣವಾಗಿದೆ.
ಈ ಕಾಲ್ಸೇತುವೆಯಲ್ಲಿ ಅತ್ಯಗತ್ಯವಿರುವ ಮಂದಿ ಮಾತ್ರವೇ ಸಾಗುತ್ತಾರೆ. ಇತ್ತೀಚೆಗೆ ನೂತನವಾಗಿ ನಿರ್ಮಾಣವಾಗಿರುವ ಸೇತುವೆಯ ಕಾರಣದಿಂದ ಬಹುತೇಕ ಜನರು ಹೊಸ ಸೇತುವೆಯನ್ನು ಬಳಸು ತ್ತಿದ್ದಾರೆ. ಇದೀಗ ಈ ಸೇತುವೆಯನ್ನು ಬಳಸು ವವರು ಬಹಳಷ್ಟು ಕಡಿಮೆ ಮಂದಿ.
ನೂತನ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಸೇತುವೆ ಕಾಮಗಾರಿಗೆ ತಂದಿದ್ದ ಜಂಕರ್ ನೀರಿನಲ್ಲಿ ಹರಿದು ಹೋಗಿ ಕಾಲ್ಸೇತುವೆಯ ಕಂಬಗಳಿಗೆ ಈ ಹಿಂದೆ ಬಡಿದು ಸೇತುವೆಯ ಒಂದು ಭಾಗ ಪಕ್ಕಕ್ಕೆ ವಾಲಿತ್ತು. ಈ ಹಿನ್ನೆಲೆಯಲ್ಲಿ ಅಂದು ಈ ಕಾಲ್ಸೇತುವೆ ಮುರಿದು ಬೀಳದಂತೆ ತೆಂಗಿನ ಕಂಬವನ್ನು ಜೋಡಿಸಿ ಬಲಪಡಿಸಲಾಗಿತ್ತು. ಆದರೆ ಈ ತೆಂಗಿನ ಕಂಬ ಯಾವುದೇ ಸಂದರ್ಭದಲ್ಲೂ ಜೋಡಣೆ ಬಿಡುವ ಸಾಧ್ಯತೆಯಿದೆ.
ಶೀಘ್ರದಲ್ಲೇ ಕಾಲ್ಸೇತುವೆ ದುರಸ್ತಿ ಗೊಳಿಸದಿದ್ದಲ್ಲಿ ಮಳೆಯ ನೀರಿನ ಹರಿವಿಗೆ ಕುಸಿದು ಬೀಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸ್ಮಾರಕವಾಗಿ ಉಳಿಸಿಕೊಳ್ಳಲು ಆಗ್ರಹ
ಕೇರಳ ರಾಜ್ಯದ ಅತ್ಯಂತ ನೀಳದ ಕಾಲ್ಸೇತುವೆಯನ್ನು ಸ್ಮಾರಕವಾಗಿ ಉಳಿಸಿ ಕೊಳ್ಳಬೇಕೆಂದು ಸ್ಥಳೀಯರು ಈ ಹಿಂದೆ ಸಂಬಂಧಪಟ್ಟವರನ್ನು ಆಗ್ರಹಿಸಿದ್ದರು. ಈ ಸೇತುವೆಯಿಂದ ಕೆಲವೇ ದೂರದಲ್ಲಿ ನೂತನ ಸೇತುವೆಯನ್ನು ನಿರ್ಮಿಸಿರುವ ಕಾರಣದಿಂದ ಹಳೆಯ ಸೇತುವೆ ಬಳಕೆ ಕಡಿಮೆಯಾದರೂ, 2000ನೇ ಇಸವಿಯಲ್ಲಿ ಸ್ಥಾಪಿಸಲಾಗಿದ್ದ ರಾಜ್ಯದಲ್ಲೇ ಅತ್ಯಂತ ನೀಳದ ಕಾಲ್ಸೇತುವೆಯನ್ನು ಉಳಿಸಿಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು. 310 ಮೀಟರ್ ಉದ್ದದ ಕಾಲ್ಸೇತುವೆ ಹೊಸ ಸೇತುವೆ ನಿರ್ಮಾಣಕ್ಕೆ ಮುನ್ನ ಅಚ್ಚಾಂತುರ್ತಿ – ಕೋಟ್ಟಪ್ಪುರಂವನ್ನು ಪರಸ್ಪರ ಸಂಪರ್ಕಿಸುತ್ತಿತ್ತು. ಆ ಹಳೆಯ ನೆನಪು ಮಾಸದಂತೆ ಕಾಲ್ಸೇತುವೆಯನ್ನು ಉಳಿಸಿಕೊಳ್ಳಬೇಕೆಂಬುದು ಸ್ಥಳೀಯರ ಸಂಕಲ್ಪವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ
Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.