ಭಾರೀ ಮಳೆ : ರಾಜ್ಯದಲ್ಲಿ 2,195 ಗ್ರಾಮ ಮುಳುಗಡೆ,115 ಕೋಟಿ ರೂ. ನಷ್ಟ
Team Udayavani, Jul 12, 2018, 6:00 AM IST
ರಾಜ್ಯದಾದ್ಯಂತ ಈ ಭಾರೀ ಮಳೆಯಾಗಿದ್ದು ನೆರೆಯಿಂದಾಗಿ 4,288 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಯಿತು. ಜು. 10 ರಂದು ಮಲಪ್ಪುರಂನಲ್ಲಿ ಒಬ್ಬರು ನೀರು ಪಾಲಾಗಿದ್ದಾರೆ. ಭಾರೀ ಮಳೆಯ ಪರಿಣಾಮವಾಗಿ ವರ್ಕಲ ಪಾಪನಾಶದಲ್ಲಿ ಗುಡ್ಡೆ ಕುಸಿದು ಮೂವರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ 276 ಮನೆಗಳು ಪೂರ್ಣವಾಗಿಯೂ, 7149 ಮನೆಗಳು ಭಾಗಶಃ ಹಾನಿಗೀಡಾಗಿವೆ. ಜಾನುವಾರು ಸಹಿತ 5,477 ಸಾಕು ಪ್ರಾಣಿಗಳು ಸಾವಿಗೀಡಾದವು. 3,193 ಮಂದಿಯನ್ನು ಸಂಭವನೀಯ ದುರಂತದಿಂದ ಪಾರು ಮಾಡಲಾಯಿತು. ರಾಜ್ಯದಲ್ಲಿ ಒಟ್ಟು 29,388 ಮಂದಿಯನ್ನು ತುರ್ತು ಪರಿಹಾರ ಕೇಂದ್ರಗಳಿಗೆ ತಲುಪಿಸಲಾಗಿದೆ.
ಕಾಸರಗೋಡು: ಪ್ರಸ್ತುತ ವರ್ಷ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆ ಯಾದುದರಿಂದ 2,195 ಗ್ರಾಮಗಳು ಮುಳುಗಡೆಯಾಗಿವೆ. ಸುಮಾರು 115 ಕೋಟಿ ರೂ. ನಷ್ಟ ಸಂಭವಿಸಿದ್ದು, ಕಳೆದ 42 ದಿನಗಳಲ್ಲಿ ಕೇರಳದಲ್ಲಿ 74 ಮಂದಿ ಸಾವಿಗೀಡಾಗಿ, 25 ಮಂದಿ ಗಾಯಗೊಂಡಿದ್ದಾರೆ. ಸುಮಾರು 4.288 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ದುರಂತ ನಿವಾರಣೆ ಅಥೋರಿಟಿ ಬಹಿರಂಗ ಪಡಿಸಿದ ಅಂಕಿಅಂಶದಲ್ಲಿ ದಾಖಲಿಸಿದೆ.
ನಷ್ಟ, ನಷ್ಟ, ನಷ್ಟ
ಭಾರೀ ಮಳೆಯ ಪರಿಣಾಮವಾಗಿ ರಾಜ್ಯದಲ್ಲಿ 7,689.74 ಹೆಕ್ಟರ್ ಕೃಷಿ ನಾಶನಷ್ಟ ಸಂಭವಿಸಿತು. 292.78 ಕಿಲೋ ಮೀಟರ್ ವಿದ್ಯುತ್ ಲೈನ್, 2,016 ವಿದ್ಯುತ್ ಕಂಬಗಳು, 1,207 ಟ್ರಾನ್ಸ್ ಫಾರ್ಮರ್‌ಗಳು ಹಾನಿಗೀಡಾದವು.
ತೀವ್ರ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಗುಡ್ಡ ಕುಸಿತ, ಮಣ್ಣು ಕುಸಿತ, ನೆರೆ ಭೀತಿ ಕಂಡು ಬಂತು.
ಬಿರುಗಾಳಿ: ಮೀನುಗಾರಿಕೆಗೆ ತೆರಳದಂತೆ ಇಲಾಖೆಎಚ್ಚರಿಕೆ ಮುಂದಿನ ದಿನಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಜು. 17ರ ವರೆಗೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೇರಳ, ಲಕ್ಷದ್ವೀಪ ಕಡಲ ಕಿನಾರೆ ಯಲ್ಲಿ 35ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದೂ, ಮುಂದಿನ 24 ಗಂಟೆಗಳೊಳಗೆ ಮೀನು ಗಾರಿಕೆಗೆ ತೆರಳದಂತೆ ಮುನ್ನೆ ಚ್ಚರಿಕೆ ನೀಡಿದೆ. ವಯನಾಡಿನಲ್ಲಿ ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ. ಕಳೆದ 24 ಗಂಟೆಗಳೊಳಗೆ ಇಡುಕ್ಕಿ ಜಿಲ್ಲೆಯಲ್ಲಿ 67.2 ಮಿ.ಮೀ. ಮಳೆ ಯಾಗಿದೆ. ಮಳೆ ನೀರು ತುಂಬಿ ಹರಿಯುವುದರಿಂದಾಗಿ ಮಲಂಗರ ಡ್ಯಾಂನಲ್ಲಿ ನಾಲ್ಕು ಶಟರ್‌ಗಳನ್ನು ತೆರೆದು ಕೊಡಲಾಗಿದೆ. ಇಡುಕ್ಕಿ ಅಣೆಕಟ್ಟಿನಲ್ಲಿ 2355.86 ಅಡಿ ನೀರು ಇದೆ. ಮುಲ್ಲ ಪೆರಿಯಾರ್‌ನಲ್ಲಿ 122.2 ಅಡಿ ನೀರು ತುಂಬಿಕೊಂಡಿದೆ.
ಕಾಸರಗೋಡು ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ದಿನಗಳ ಹಿಂದೆ ನದಿ ಪರಿಸರದಲ್ಲಿ ನೆರೆ ಸೃಷ್ಟಿಯಾಗಿತ್ತು. ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್ ತೀರ್ಪು
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.