ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ
ರಸ್ತೆ ಸುರಕ್ಷೆ ಕ್ರಿಯಾ ಯೋಜನೆ : 5ರಿಂದ 31 ವರೆಗೆ ಕಡ್ಡಾಯ ವಾಹನ ತಪಾಸಣೆ
Team Udayavani, Aug 4, 2019, 5:19 AM IST
ಆಗಸ್ಟ್ 5ರಿಂದ 7 ವರೆಗೆ -ಸೀಟ್ ಬೆಲ್ಟ್, ಹೆಲ್ಮೆಟ್ ತಪಾಸಣೆ, 8ರಿಂದ 10-ಕಾನೂನು ಉಲ್ಲಂಘಿಸಿ ಪಾರ್ಕಿಂಗ್ ನಡೆಸಿದ ಸಂಬಂಧ ತಪಾಸಣೆ, 11ರಿಂದ 13-ಅತಿವೇಗ, 14ರಿಂದ 16- ಮದ್ಯಪಾನ ನಡೆಸಿ ವಾಹನ ಚಲಾವಣೆ, ರಸ್ತೆ ನಿಯಮ ಉಲ್ಲಂಘನೆ, 17ರಿಂದ 19-ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ, 20ರಿಂದ 23-ಝೀಬ್ರಾಲೈನ್, ಸಿಗ್ನಲ್ ಉಲ್ಲಂಘನೆ, 24ರಿಂದ 27-ಸ್ಪೀಡ್ ಗವರ್ನರ್, ಅತಿಭಾರ ಹೇರಿಕೆ, 28ರಿಂದ 31 ವರೆಗೆ-ಕೂಲಿಂಗಿ ಫಿಲಿಂ, ಲೈಟ್ ತಪಾಸಣೆ ನಡೆಯಲಿದೆ.
ಕಾಸರಗೋಡು: ರಸ್ತೆ ಸುರಕ್ಷೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಂಟಿ ವತಿಯಿಂದ ಆ.5ರಿಂದ 31 ವರೆಗೆ ಕಡ್ಡಾಯ ವಾಹನ ತಪಾಸಣೆ ಮತ್ತು ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ರೋಡ್ ಸೇಫ್ಟಿ ಆ್ಯಕ್ಷನ್ ಪ್ಲಾನ್ ಆಧಾರದಲ್ಲಿ ರಾಜ್ಯಾದ್ಯಂತ ನಡೆಯುವ ಕ್ರಮಗಳ ಅಂಗವಾಗಿ ಜಿಲ್ಲೆಯಲ್ಲೂ ಈ ಚಟುವಟಿಕೆಗಳು ಜರಗಲಿವೆ.
ಈ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ ರೋಡ್ ಸೇಫ್ಟಿ ಆ್ಯಕ್ಷನ್ ಪ್ಲಾನ್ ಸಮಿತಿ ಸಭೆ ಶುಕ್ರವಾರ ನಡೆದಿದ್ದು, ಈ ಕುರಿತು ಚರ್ಚಿಸಲಾಯಿತು. ಆ.5ರಿಂದ 31 ವರೆಗೆ ಒಂದೊಂದು ರೀತಿಯ ಕಾನೂನು ಉಲ್ಲಂಘನೆಗಳನ್ನು ಮುಂಗಡವಾಗಿ ನಿಗದಿಪಡಿಸಿ ಆಯಾ ದಿನಗಳಲ್ಲಿ ಕಠಿಣ ಕಾನೂನು ಕ್ರಮಗಳ ಸಹಿತ ವ್ಯಾಪಕ ತಪಾಸಣೆಗಳನ್ನು ನಡೆಸಲಾಗುವುದು ಎಂದು ಸಬೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ತಿಳಿಸಿದರು.
ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧಾರಣೆ ನಗರ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಜನಜಾಗೃತಿ ಕಾರ್ಯಕ್ರಮವೂ ನಡೆಯಲಿದೆ. ಕಾರಿನಲ್ಲಿ ಹಿಂಬದಿ ಸೀಟಿನ ಪ್ರಯಾಣಿಕರೂ ಸೀಟು ಬೆಲ್r ಧರಿಸಿದ್ದಾರೆಯೋ ಎಂದು ತಪಾಸಣೆ ನಡೆಸಲಾಗುವುದು. ಚಾಲಕರಿಗೆ, ಸಾರ್ವಜನಿಕರಿಗೆ ಉತ್ತಮ ವಾಹನ ಚಾಲನೆ ಸಂಸ್ಕಾರ ಮೂಡಿಸುವಲ್ಲಿ ಜಾಗೃತಿ ತರಗತಿ ನಡೆಸಲು ಸಭೆ ನಿರ್ಧಾರ ಕೈಗೊಂಡಿದೆ. ಹಾದಿಯಲ್ಲಿ ಅಗತ್ಯವಿರುವಲ್ಲೆಲ್ಲ ದಾರಿದೀಪ ಸ್ಥಾಪಿಸಲು ಸಂಬಂಧಪಟ್ಟವರಿಗೆ ಆದೇಶ ನೀಡಲಾಗಿದೆ.
ಹಾದಿ ಬದಿ ವ್ಯಾಪಾರಿಗಳ ತೆರವು
ರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಮಂದಿ ಆ.16ರ ಮುಂಚಿತವಾಗಿ ತೆರವುಗೊಳ್ಳಬೇಕು ಎಂದು ಶುಕ್ರವಾರ ನಡೆದ ರಸ್ತೆ ಸುರಕ್ಷೆ ಸಭೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ, ಬದಿ ಕಾನೂನು ಉಲ್ಲಂಘಿಸಿ ವ್ಯಾಪಾರ ನಡೆಸುವವರು ಸ್ವಪ್ರೇರಣೆಯಿಂದ ಈ ಅವಧಿಯಲ್ಲಿ ತೆರವುಗೊಳ್ಳಬೇಕು. ೆ. ಕಾಲ್ನಡಿಗೆ ಹಾದಿಯಲ್ಲಿ ವ್ಯಾಪಾರ ನಡೆಸುವವರ ವಿರುದ್ಧ ಕೈಗೊಳ್ಳುವ ಕ್ರಮದ ಅಂಗವಾಗಿಯೇ ಈ ಕುರಿತೂ ಕ್ರಮ ನಡೆಸಲಾಗುವುದು ಎಂದು ಸಭೆ ಹೇಳಿದೆ. ಹೆಚ್ಚುವರಿ ಅಪಘಾತ ನಡೆಯುವ 15 ಪ್ರದೇಶಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ. ಇಲ್ಲಿ ಅಗತ್ಯದ ಸಂಜ್ಞಾ ಫಲಕ (ಸೈನ್ ಬೋರ್ಡ್) ಗಳನ್ನು ಸ್ಥಾಪಿಸಲಾಗುವುದು ಮತ್ತು ರಸ್ತೆ ಸುರಕ್ಷೆ ಮಾನದಂಡಗಳನ್ನು ಸ್ವೀಕರಿಸಲಾಗುವುದು. ಈಗಾಗಲೇ ಸ್ಥಾಪಿಸಿರುವ ಫಲಕಗಳಿಗೆ ಅಡ್ಡವಾಗಿ ಬೆಳೆದ ಮರದ ಗೆಲ್ಲುಗಳು ಇತ್ಯಾದಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಪರೀಕ್ಷಾರ್ಥ ಟ್ರಾಫಿಕ್ ಪರಿಷ್ಕರಣೆ ಕೆ.ಎಸ್.ಟಿ.ಪಿ. ರಸ್ತೆಯಲ್ಲಿ ಪರೀಕ್ಷಾರ್ಥ ಲೈನ್ ಟ್ರಾಫಿಕ್ ಪರಿಷ್ಕರಣೆ ಆ.14ರಿಂದ 16 ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರ ಅಂಗವಾಗಿ ದೊಡ್ಡ ವಾಹನಗಳಿಗೆ ಸಣ್ಣವಾಹನಗಳಿಗೆ ಪ್ರತ್ಯೇಕ ಬದಿ ನಿಗದಿ ಪಡಿಸಿ ಸಂಚಾರ ನಿಯಂತ್ರಿಸಲಾಗುವುದು. ಇದು ಯಶಸ್ವಿಯಾದಲ್ಲಿ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ರೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದವರು ಹೇಳಿದರು. ಆರ್.ಟಿ.ಒ. ಎಸ್.ಮನೋಜ್, ಅಡೀಶನಲ್ ಎಸ್.ಪಿ.ಪ್ರಷೋಬ್, ಮೋಟಾರು ವಾಹನ ಇನ್ಸ್ ಪೆಕ್ಟರ್(ಎನ್‌ಫೋರ್ಸ್ ಮೆಂಟ್) ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.