ಕೇರಳ ನೆರೆ-ನೆರವು: “ಸೇವಾ ಭಾರತಿ’ಯ 50,000 ಕಾರ್ಯಕರ್ತರು
Team Udayavani, Aug 19, 2018, 11:51 AM IST
ಮುಳ್ಳೇರಿಯ: ಕೇರಳದಲ್ಲಿ ಮಳೆಯ ರುದ್ರ ನರ್ತನಕ್ಕೆ ಸಿಲುಕಿ ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿರುವ ಸಂತ್ರಸ್ತ ರಿಗೆ ನೆರವಾಗಲು ಸೇವಾ ಭಾರತಿಯ 50 ಸಾವಿರ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ.
ತರಬೇತಿ ಪಡೆದ ಮತ್ಸ ಕಾರ್ಮಿಕರೂ ಈ ತಂಡದಲ್ಲಿದ್ದು, 50 ದೋಣಿಗಳನ್ನು ರಕ್ಷಣಾ ಕಾರ್ಯದಲ್ಲಿ ಬಳಸಿಕೊಂಡಿದ್ದಾರೆ. ಸರಕಾರದ ವತಿಯಿಂದ ನಡೆಯುವ ಕಾರ್ಯಾಚರ ಣೆಗೂ ತಮ್ಮ ದೋಣಿಗಳನ್ನು ನೀಡಿ
ದ್ದಾರೆ.
ಸುಮಾರು 50ರಷ್ಟು ಶಿಬಿರಗಳನ್ನು ಸೇವಾ ಭಾರತಿಯೇ ನಡೆಸುತ್ತಿದೆ. ಇದರ ಹೊರತಾಗಿ ಸರಕಾರ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ನಿರಾಶ್ರಿತರ ಶಿಬಿರಗಳಲ್ಲಿ ಸೇವಾ ಭಾರತಿಯ ಕಾರ್ಯಕರ್ತರು ಅವಿರತ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳದ 14 ಜಿಲ್ಲೆಗಳಲ್ಲಿಯೂ ಸೇವಾ ಭಾರತಿ ಸಹಾಯ ಕೇಂದ್ರ ತೆರೆದಿದೆ.
ಪರಿಹಾರ ಸಾಮಗ್ರಿ ಸಂಗ್ರಹಕ್ಕಾಗಿತಿರುವನಂತಪುರ, ಕಾಸರಗೋಡು, ಪಾಲಕ್ಕಾಡುಗಳಲ್ಲಿ ಕೇಂದ್ರ ತೆರೆದಿದೆ.
ನೆರವು ಸಂಗ್ರಹ ಕೇಂದ್ರಗಳ ದೂರವಾಣಿ ಸಂಖ್ಯೆ:
ಕಾಸರಗೋಡು: 9207668610/ 8547043672
ಪಾಲಕ್ಕಾಡು: 9961984489/ 9447375415
ತಿರುವನಂತಪುರ: 8547618883/ 9995518852.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.