ಯಕ್ಷಗಾನದಿಂದ ಪರಂಪರೆಯ ಜಾಗೃತಿ; ಉಳಿಯಲಿ ಕನ್ನಡ ಭಾಷೆ ಸಂಸ್ಕೃತಿ


Team Udayavani, Jul 4, 2017, 3:50 AM IST

03ksde6.jpg

ಕಾಸರಗೋಡು: ಇಂಗ್ಲಿಷ್‌ ಭಾಷೆಯ ಮೂಲಕ ಜಾಗತೀಕರಣ -ಆಧುನೀಕರಣದ ಭರಾಟೆ ಒಂದೆಡೆ. ಇನ್ನೊಂದೆಡೆ ಆಡಳಿತಾನುಕೂಲತೆಯ ಹೆಸರಿನಲ್ಲಿ ತೆಂಕಣದ ಮಲಯಾಳ ಭಾಷೆ ಸಂಸ್ಕೃತಿಗಳ ಹೇರಿಕೆ. ಇವುಗಳ ನಡುವೆ ಕಾಸರಗೋಡಿನಲ್ಲಿ ಕನ್ನಡ, ತುಳು, ಸ್ಥಳೀಯ ಮಲಯಾಳ ಮೊದಲಾದ ಪ್ರಾದೇಶಿಕ ಭಾಷೆ ಸಂಸ್ಕೃತಿಗಳು ಅವನತಿಯತ್ತ ಸಾಗುತ್ತಿವೆ. ನಮ್ಮ ಜಾನಪದ, ಶಿಷ್ಟ  ಪರಂಪರೆ, ಪುರಾಣ, ಕಲೆ, ಸಾಹಿತ್ಯ, ಧಾರ್ಮಿಕತೆ, ನೈತಿಕತೆ, ಕುಟುಂಬ ಪದ್ಧತಿ, ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ಮಣ್ಣಿನ ಹೆಮ್ಮೆಯ ಕಲೆಯಾದ ಯಕ್ಷಗಾನದ ಮೂಲಕ ಕನ್ನಡ ಭಾಷೆಯನ್ನೂ ಸ್ಥಳೀಯ ಪರಂಪರಾಗತ ಸಂಸ್ಕೃತಿಯನ್ನೂ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿರುವುದು ಆಶಾದಾಯಕವಾಗಿದೆ.

ಬಹುಭಾಷೆಗಳು ಮನೆಮಾತುಗಳಾಗಿರುವ ಕಾಸರ ಗೋಡಿ ನಲ್ಲಿ ಕನ್ನಡ ಭಾಷೆಯ ಉಳಿವಿಗೆ ಎರಡು ನೆಲೆಗಳಿವೆ. ಒಂದು ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಮೂಲಕ. ಇನ್ನೊಂದು ಕಲೆ- ಸಾಹಿತ್ಯ- ಸಂಸ್ಕೃತಿಯ ಮೂಲಕ. ಇವುಗಳಲ್ಲಿ ಯಾವುದೂ ಹಿರಿದಲ್ಲ, ಯಾವುದೂ ಕಿರಿದಲ್ಲ. ಇವೆರಡು ಕಾರ್ಯಗಳು ಜತೆಜತೆಯಾಗಿ ಸಾಗಿದರೆ ಮಾತ್ರ ಪ್ರಾಕೃತಿಕ ಸಮೃದ್ಧಿಯ ಈ ದಕ್ಷಿಣದ ತುಳುನಾಡಿನ ಸಾಂಸ್ಕೃತಿಕ ವಿಶಿಷ್ಟತೆಯೂ ಉಳಿಯಬಹುದು. ಸಾಹಿತ್ಯ ಕಲೆಗಳು ಮನುಷ್ಯನಲ್ಲಿ ಸಾಂಸ್ಕೃತಿಕ ವಿಸ್ಮೃತಿಯ ಪೊರೆಯನ್ನು ಕಳಚಿ ಭಾಷಾಭಿಮಾನವನ್ನು ಉದ್ದೀಪಿಸುತ್ತವೆ. ಆಧುನಿಕ ಮಾಧ್ಯಮಗಳ ಮೂಲಕ ತೋರಿಕೆಗೆ ವರ್ಣರಂಜಿತವಾದ ಆದರೆ ನಿಜಕ್ಕೂ ಸತ್ವಹೀನವಾದ ಬದುಕಿನತ್ತ ಆಕರ್ಷಿತರಾಗಿ ಪರಂಪರೆಯತ್ತ ಬೆನ್ನು ಹಾಕಿದ ಯುವಜನತೆಯನ್ನು ಯಕ್ಷಗಾನದಂತಹ ಶಕ್ತಿಶಾಲಿ ಮಾಧ್ಯಮದ ಮೂಲಕ ಮಾರ್ಗಕ್ಕೆ ತರುವ ಅಗತ್ಯವಿದೆ, ಯಕ್ಷಗಾನದಂತಹ ಮಾಧ್ಯಮವನ್ನು ಸರಿಯಾಗಿ ದುಡಿಸಿಕೊಂಡರೆ ಅಂತಹ ಸಾಧ್ಯತೆ ವಾಸ್ತವವಾಗುವುದರಲ್ಲಿ ಸಂದೇಹವಿಲ್ಲ.

ಕನ್ನಡನಾಡು ಕಾಸರಗೋಡು ಯಕ್ಷಗಾನ ಕಲೆಯ ಹುಟ್ಟೂರು : ತೆಂಕುತಿಟ್ಟು ಯಕ್ಷಗಾನದ ತವರೂರಾದ ಕಾಸರಗೋಡಿನಲ್ಲಿ ಪಾರ್ತಿಸುಬ್ಬನಿಂದ ತೊಡಗಿ ಶೇಣಿ ಗೋಪಾಲಕೃಷ್ಣ ಭಟ್ಟರವರೆಗೆ ಹೆಸರಾಂತ ಯಕ್ಷಗಾನ ಕವಿ ಕಲಾವಿದರು ಈ ಮಣ್ಣಿನ ಸಂಸ್ಕೃತಿಯ ಸತ್ವವನ್ನು ಮೆರೆದಿದ್ದಾರೆ. ಇಂದು ಕೂಡ ಅದೆಷ್ಟೋ ಪ್ರತಿಭಾವಂತ ಜನಪ್ರಿಯ ಯಕ್ಷ ಕಲಾವಿದರು ಮನೆಮಾತಾಗಿದ್ದಾರೆ. ವೃತ್ತಿ ಹಾಗೂ ಹವ್ಯಾಸಿ ಯಕ್ಷಗಾನ ಮೇಳಗಳು, ಅಧ್ಯಯನ- ಸಂಶೋಧನ ಕೇಂದ್ರಗಳು, ಪ್ರತಿಷ್ಠಾನಗಳು, ತರಬೇತಿ ಶಾಲೆಗಳು, ಯಕ್ಷಗಾನ ಪತ್ರಿಕೆಗಳು, ಬೊಂಬೆಯಾಟ ತಂಡಗಳು ಹೀಗೆ ಯಕ್ಷ ಸಂಬಂಧಿ ಚಟುವಟಿಕೆಗಳು ಈಗಲೂ ನಡೆಯುತ್ತಿವೆ. ಪಂಡಿತ ಪಾಮರರೆನ್ನದೆ ಎಲ್ಲರನ್ನೂ ಆಕರ್ಷಿಸುವುದು ಮಾತ್ರವಲ್ಲದೆ ಅವರನ್ನು ಸಾಂಸ್ಕೃತಿಕ ಔನ್ನತ್ಯಕ್ಕೇರಿಸುವುದರಲ್ಲಿ ಯಕ್ಷಗಾನ ಕಲೆ ಪ್ರಮುಖ ಪಾತ್ರ ವಹಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದು ಕೂಡ ಯಕ್ಷಗಾನಕ್ಕೆ ಅಪಾರ ಅಭಿಮಾನಿಗಳಿದ್ದಾರೆ. 

ಆಟ ಕೂಟಗಳ ಸಂಘಟಕರು, ನೆರವೀಯುವ ಪ್ರೋತ್ಸಾಹಕರು, ದುಡ್ಡುಕೊಟ್ಟು ನೋಡುವ ಪ್ರೇಕ್ಷಕರು ಇದ್ದಾರೆ. ಮಲೆಯಾಳ, ತುಳು, ಮರಾಠಿ ಮೊದಲಾದ ಮನೆಮಾತಿನವರು ಯಕ್ಷಗಾನದಲ್ಲಿ ಕಲಾವಿದರಾಗಿ, ಅಭಿಮಾನಿಗಳಾಗಿ, ಪ್ರೇಕ್ಷಕರಾಗಿ ತೊಡಗಿಕೊಂಡು ಜೊತೆಗೆ ಕನ್ನಡ ಭಾಷೆ ಸಾಹಿತ್ಯದ ಬಗೆಗೂ ಅಸಕ್ತಿ ಬೆಳೆಸಿಕೊಂಡು ಕನ್ನಡ ಕಲಿತು ಕನ್ನಡಿಗರೇ ಆಗಿದ್ದಾರೆ. ಹೀಗೆ ಕನ್ನಡ ಭಾಷೆಯನ್ನು ಬೆಳೆಸುವುದರಲ್ಲಿ ಕನ್ನಡ ಶಾಲೆಗಳನ್ನು ಪೋಷಿಸುವುದರಲ್ಲಿ ಯಕ್ಷಗಾನ ಕಲೆ ಪ್ರಮುಖ ಪಾತ್ರ ವಹಿಸಿದೆ, ವಹಿಸುತ್ತಿದೆ.

ಯಕ್ಷಗಾನಕ್ಕೂ ಕನ್ನಡ ಭಾಷೆ ಸಾಹಿತ್ಯಕ್ಕೂ ಅವಿನಾ ಭಾವ ನಂಟು. ತುಳು, ಮಲಯಾಳ, ಹಿಂದಿ, ಇಂಗ್ಲಿಷ್‌ ಮೊದಲಾದ ವಿವಿಧ ಭಾಷೆಗಳಲ್ಲಿ ಯಕ್ಷಗಾನವನ್ನು ಪ್ರಸ್ತುತ ಪಡಿಸಲಾಗಿದೆಯಾದರೂ ಕನ್ನಡದಷ್ಟು ಬೇರೆ ಯಾವ   ಭಾಷೆಯೂ ಯಕ್ಷಗಾನಕ್ಕೆ ಹೊಂದುವುದಿಲ್ಲ ಎಂಬುದು ಹೆಚ್ಚಿನ ವಿದ್ವಾಂಸರ ಅಭಿಮತ. 

ಪೌರಾಣಿಕ ಕಥಾನಕಗಳು, ಅವುಗಳಲ್ಲಿರುವ ನಿತ್ಯ ಹಸುರಾದ ಜೀವನ ಮೌಲ್ಯಗಳು ಯಕ್ಷ ಗಾನದ ಜೀವಾಳ. ಪೌರಾಣಿಕ ಪಾತ್ರಗಳ ನಡುವಿನ ವೈಚಾರಿಕ ಸಂವಹನಕ್ಕೆ ಮನೆಮಾತಿಗಿಂತ ಭಿನ್ನವಾದ ಶಿಷ್ಟಭಾಷೆ ಯೊಂದರ ಅಗತ್ಯವಿರುತ್ತದೆ ಹಾಗೂ ಅಂತಹ ಸಾಹಿತ್ಯ ಸಂಭಾಷಣೆ ಅಲ್ಲಿಗೆ ಸಹಜವೆನಿಸುತ್ತದೆ. ಕಾಸರಗೋಡಿನಲ್ಲಿ ವಿವಿಧ ಮನೆಮಾತಿನವರು ಶಾಲೆಗಳಲ್ಲಿ ಕಲಿತ ಕನ್ನಡ ಇಂತಹ ಶಿಷ್ಟಭಾಷೆಯ ಅಗತ್ಯವನ್ನು ಸರಿದೂಗಿಸುತ್ತದೆ. 

ಬಹುಶಃಕಾಸರಗೋಡಿ ನಲ್ಲಿ ಮಾತ್ರವಲ್ಲ ಇದೇ ಭಾಷಿಕ ಸಾಂಸ್ಕೃತಿಕ  ವಾತಾವರಣವಿರುವ ಕನ್ನಡ ಕರಾವಳಿಯುದ್ದಕ್ಕೂ ಜನರಿಗೆ ಯಕ್ಷಗಾನಕ್ಕೆ ಕನ್ನಡಭಾಷೆಯೇ ಸೂಕ್ತ ವೆಂದು ಅನಿಸಲು ಇದೇ ಕಾರಣವಿರ ಬಹುದು. ಹೀಗೆ ಕನ್ನಡ ಭಾಷೆ, ಸಾಹಿತ್ಯ ದಿಂದ ಯಕ್ಷಗಾನಕ್ಕೆ ಪ್ರಯೋಜನ ವಾಗಿದೆ. ಅದಕ್ಕಿಂತ ಹೆಚ್ಚಾಗಿ ಕನ್ನಡಭಾಷೆ, ಸಾಹಿತ್ಯದ ಬೆಳವಣಿಗೆಗೆ ಯಕ್ಷಗಾನವೂ ಕೊಡುಗೆಗಳನ್ನು ನೀಡಿದೆ. ಕೇರಳದ ಅಧೀನಕ್ಕೊಳಗಾಗಿ ರಾಜ್ಯದ ಆಡಳಿತ ಭಾಷೆ ಮಲಯಾಳದ ಪ್ರಭಾವ ಬೆಳೆಯುತ್ತಿರುವ ಕೇರಳದಲ್ಲಿ ಕನ್ನಡಿಗರ ಸಂಖ್ಯೆ ಕುಂದದಂತೆ, ಕನ್ನಡ ಶಾಲೆಗಳು ಮುಚ್ಚದಂತೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಅಭಿಮಾನ ಬೆಳೆಯುವಂತೆ ಮಾಡುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ಆದುದರಿಂದ ಇಂದು ಕೂಡ ಇಲ್ಲಿ ಕನ್ನಡವನ್ನು ಉಳಿಸಿ ಬೆಳೆಸ ಬೇಕೆಂಬ ಕಾಳಜಿಗೆ ಯಕ್ಷಗಾನ ಪೂರಕವಾಗಿರುವುದರಿಂದ ಅದನ್ನು ಸಮರ್ಥವಾಗಿ ಬೆಳೆಸಿಕೊಳ್ಳಬೇಕಿದೆ. ಯಕ್ಷಗಾನದ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಪರಂಪರೆ, ಜೀವನ ಮೌಲ್ಯಗಳು ಎಲ್ಲವನ್ನೂ ಉಳಿಸಿಕೊಳ್ಳಬಹುದು.

ಯುವಜನರಲ್ಲಿ ಯಕ್ಷಗಾನದ ಪ್ರೀತಿ ಬೆಳೆಸಬೇಕು
ಪ್ರಭಾಕರನ್‌ ಆಯೋಗದ ಶಿಫಾ ರಸಿನ ಪ್ರಕಾರ ಕಾಸರಗೋಡು ಪ್ಯಾಕೇಜಿ ನಡಿ ಸರಕಾರಿ ಕಾಲೇಜಿಗೆ ಯಕ್ಷಗಾನ ಸಂಶೋಧನ ಕೇಂದ್ರ ಮಂಜೂರಾಗಿ ಈಗ ಒಂದು ತಿಂಗಳಿನಷ್ಟು ದೀರ್ಘ‌ವಾದ ಯಕ್ಷಗಾನ ತರಬೇತಿ ಯಂತಹ ಕಾರ್ಯ ಕ್ರಮ ನಡೆದಿರುವುದು ಅರ್ಥಪೂರ್ಣ ಯೋಜನೆ ಯೆಂಬುದರಲ್ಲಿ ಎರಡು ಮಾತಿಲ್ಲ. ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಭಾಷೆ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ನಾಡಿನ ಕಲೆಯಾದ ಯಕ್ಷಗಾನದ ಅಭಿ ರುಚಿ ಹಾಗೂ ತಿಳಿವಳಿಕೆ ಬೆಳೆದರೆ ಅದು ಹಾಲು ಸಕ್ಕರೆಯ ಸಂಗಮದಂತೆ ಉತ್ಕೃಷ್ಟ ಎಂಬುದು ವೇದ್ಯ. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಮಂದಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂಬುದನ್ನೂ ಮರೆಯಬಾರದು. 

ಕಾಲೇಜಿನಲ್ಲಿ ವಿದ್ವಾಂಸರಾದ ಉಪ ನ್ಯಾಸಕರ ಮಾರ್ಗದರ್ಶನವೂ ವಿದ್ಯಾರ್ಥಿ ಗಳಿಗೆ ದೊರೆಯುತ್ತದೆ. ಅದಕ್ಕೆ ಪೂರಕವಾಗಿ ಸಮರ್ಥ ಯಕ್ಷಗಾನ ಗುರುಗಳಿಂದ ಯಕ್ಷ ಶಿಕ್ಷಣವೂ ದೊರೆತು  ಪ್ರಬುದ್ಧರಾದ ಪದವೀಧರ ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದರಾಗಿ, ವಿಮರ್ಶಕರಾಗಿ, ವಿದ್ವಾಂಸರಾಗಿ ರೂಪುಗೊಳ್ಳುವಾಗ ಆ ಮೂಲಕ ಕನ್ನಡ ಭಾಷೆ ಸಾಹಿತ್ಯದ ಲಾಭ ಯಕ್ಷಗಾನ ಕಲೆಗೂ ದೊರೆಯುತ್ತದೆ. ಇದಕ್ಕಿಂತ ಹೆಚ್ಚಾಗಿ ಯಕ್ಷಗಾನದ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಅಭಿಮಾನ , ಕನ್ನಡಶಾಲೆಗಳನ್ನು ಹೇಗೆ ಉಳಿಸಿ ಬೆಳೆಸಬಹುದೆಂಬುದರ ಕಲ್ಪನೆ – ಅನುಭವ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ಮುಂದೆ ಈ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಲ್ಲಿ ಶಿಕ್ಷಕರಾದಾಗ ತಮ್ಮ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಅಭಿರುಚಿ ಯನ್ನು ಉತ್ತೇಜಿಸಲು, ಯಕ್ಷಗಾನ ಮತ್ತು ಕನ್ನಡ ಭಾಷೆಯನ್ನು ಪರಸ್ಪರ ಪೂರಕವಾಗಿ ಬೆಳೆಸಲು ಇದು ಸಹಾಯಕ ವಾಗಬಹುದು. 

ಹೆಣ್ಮಕ್ಕಳೇ ಹೆಚ್ಚು
ತರಬೇತಿ ಪಡೆಯುತ್ತಿರುವ ವರಲ್ಲಿ ಗಣನೀಯ ಸಂಖ್ಯೆಯ ವಿದ್ಯಾರ್ಥಿನಿ ಯರಿರುವುದರಿಂದ ಮುಂದಿನ ಜನಾಂಗವನ್ನು ಯಕ್ಷಪ್ರಿಯರಾಗಿ ರೂಪಿಸಲೂ ಸಾಧ್ಯವಾಗಬಹದು.ಸರಕಾರಿ ಕಾಲೇಜಿನಲ್ಲಿ ಯಕ್ಷಗಾನ ಕೇಂದ್ರ ಸ್ಥಾಪನೆಯಾದಂದಿನಿಂದ ಅದರ ಚಟುವಟಿಕೆಗಳಲ್ಲಿ ತಪಸ್ಸಿನಂತೆ ತೊಡಗಿ ಕೊಂಡು ತಮ್ಮ ವೈಯಕ್ತಿಕ ಧನ, ಶ್ರಮ, ಸಮಯ ಗಳನ್ನು ವ್ಯಯಿಸಿ ಇದೀಗ ತರಬೇತಿ ಶಿಬಿರವೊಂದನ್ನೂ ಯಶಸ್ವಿ ಯಾಗಿ ಸಂಯೋಜಿಸಿರುವ ಸರಕಾರಿ ಕಾಲೇಜು ಪ್ರಾಧ್ಯಾಪಕ  ಡಾ| ರತ್ನಾಕರ ಮಲ್ಲಮೂಲೆಯವರ ಅನಿಸಿಕೆ ಗಳು ಅವರ ಪರಿಶ್ರಮ, ತೊಡಗುವಿಕೆ, ದೂರದರ್ಶಿತ್ವಕ್ಕೆ ಮಾತ್ರವಲ್ಲ ಯಕ್ಷಗಾನವನ್ನು ಪರಂಪರೆಯ, ಕನ್ನಡದ ಬೆಳವಣಿಗೆಗಾಗಿ ಹೇಗೆ ದುಡಿಸಿಕೊಳ್ಳಬೇಕೆನ್ನುವ ಸ್ಪಷ್ಟ ಕಲ್ಪನೆಗೆ ಸಾಕ್ಷಿಯಾಗಿವೆ.

ಕ್ರೀಡೆಯನ್ನು ಬಿಟ್ಟರೆ ರಂಗಭೂಮಿ, ಸಿನಿಮಾಗಳಂತಹ ದೃಶ್ಯ ಮಾಧ್ಯಮಗಳು ಯುವಜನತೆಯನ್ನು ಹೆಚ್ಚಾಗಿ ಪ್ರಭಾವಿಸುತ್ತಿವೆ. ಆದರೆ ದುರದೃಷ್ಟಕರ ವಿಷಯವೆಂದರೆ ಕನ್ನಡದ ಮಟ್ಟಿಗೆ ಹಿಂದಿನ ಅನುಕೂಲ ಪರಿಸ್ಥಿತಿ ಈಗಿಲ್ಲ.  ಕನ್ನಡ ಸಿನಿಮಾ ನಾಟಕಗಳು ಕಾಸರಗೋಡಿನಲ್ಲಿ  ಈಗ ಅಷ್ಟಾಗಿ ಪ್ರಭಾವ ಬೀರುತ್ತಿಲ್ಲ. ಸಾಹಿತ್ಯ ಸಂಶೋಧನೆಯ ಚಟುವಟಿಕೆಗಳು, ಸಭೆಗಳು, ಸಮ್ಮೇಳನಗಳು ಕೂಡ ಲೇಖಕರು ಹಾಗೂ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಂದಾಚೆಗೆ ಜನಸಾಮಾನ್ಯರನ್ನು ಆಕರ್ಷಿಸುವುದರಲ್ಲಿ ಸಫಲವಾಗುತ್ತಿಲ್ಲ. 

ಇಂತಹ ಸನ್ನಿವೇಶದಲ್ಲಿ ವಾಟ್ಸಾಪ್‌, ಫೇಸ್‌ ಬುಕ್ಕಿನಂತಹ ಆಧುನಿಕ ಸಮೂಹ ಮಾಧ್ಯಮಗಳು,  ಗಾನಮೇಳಗಳಂತಹ ವಾಣಿಜ್ಯೋದ್ದೇಶವೇ ಮುಖ್ಯವಾಗಿರುವ ಅಗ್ಗದ ಮನರಂಜನೆಯ ಮಾಯೆಯಿಂದ ಯುವಜನರನ್ನು ಪಾರುಮಾಡಿ ಪರಂಪರೆಯ ಗಟ್ಟಿತನವನ್ನು ಪರಿಚಯಿಸಿ ಅದರ ಮೂಲಕ ಪ್ರಬುದ್ಧ ನಾಗರಿಕರನ್ನಾಗಿ ರೂಪಿಸಲು ಮಾನವೀಯ ಮೌಲ್ಯಗಳನ್ನು ಮರೆಯದ ಮನುಷ್ಯರನ್ನಾಗಿ ಬೆಳೆಸಲು ಸಾಂಪ್ರದಾಯಿಕ ಉಜ್ವಲ ಕಲೆಯಾದ ಯಕ್ಷಗಾನವನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.

ಶಿಬಿರವು ಶಿಬಿರಾರ್ಥಿಗಳಿಗೆ ನೀಡಿದ ಅನುಭವ ಅತ್ಯಪೂರ್ವ 
ಸವಾಲು ಮತ್ತು ಕಷ್ಟ  ಕಾರ್ಪಣ್ಯಗಳ ಬೆನ್ನೇರಿ ನಡೆಸಿದ ಈ ಶಿಬಿರಕ್ಕೆ  ದೇವರ ಪೂರ್ಣಾನುಗ್ರಹ ಮತ್ತು  ಎಡನೀರು ಶ್ರೀಗಳ ಆಶೀರ್ವಾದವಿದ್ದುದರಿಂದ ನಿರೀಕ್ಷಿತ ಮಟ್ಟಕ್ಕಿಂತ ಅದೆಷ್ಟೋ ಹೆಚ್ಚು ಯಶಸ್ವಿಯಾಯಿತು… ನಾಡಿನ ಗಮನ ಸೆಳೆಯಿತು. ಈ ಶಿಬಿರದಲ್ಲಿ ಯುವವಿದ್ಯಾರ್ಥಿಗಳು ಯಕ್ಷಗಾನದ ರುಚಿಯನ್ನು ತಿಳಿದದ್ದು ಮಾತ್ರವಲ್ಲ ಬದುಕಿನಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿತುಕೊಂಡರು…. ಅವರಿಗೆ ಎಡನೀರು ಮಠವನ್ನು ಬಿಡಲು ಮನಸ್ಸಿಲ್ಲ …. ಯುವಜನತೆ ದಾರಿತಪ್ಪುತ್ತಿದೆ …. ಆಧುನಿಕ ತಂತ್ರಜ್ಞಾನ ಅವರನ್ನು ದಾರಿ ತಪ್ಪಿಸುತ್ತಿವೆ ಅಂತ ಕೂಗೆಬ್ಬಿಸುವವರು ನಮ್ಮ ಶಿಬಿರದ ಒಂದು ತಿಂಗಳ ನಡೆ ನುಡಿಯನ್ನು ಗಮನಿಸಬೇಕು…. ಯುವಜನತೆ ತಪ್ಪುದಿಲ್ಲ…. ಅವರನ್ನು ಕೈಹಿಡಿದು ನಡೆಸಿ ಸರಿಯಾದ ತರಬೇತಿ ಮತ್ತು ಮಾರ್ಗದರ್ಶನ ಲಭಿಸಿದರೆ….. ಎಂಬುದಕ್ಕೆ ಈ ಶಿಬಿರ ಸಾಕ್ಷಿಯಾಯಿತು……

ಶಿಬಿರ ಮುಗಿಯುವ ಮೊದಲನೆಯ ದಿನ (1.07.2017) ಎಡನೀರು ಶ್ರೀಗಳವರಿಗೆ  ನಮ್ಮ ವಿದ್ಯಾರ್ಥಿಗಳು ವಂದನೆ ಸಲ್ಲಿಸಿ ಅವರಿಂದ ಆಶೀರ್ವಾದ ಪಡೆದರು. ಶಿಬಿರ ಇನ್ನೂ ಮುಂದುವರಿಯಲಿ … ಎಂದು ಹಾರೈಸುತ್ತಿರುವ ಶಿಬಿರಾರ್ಥಿಗಳ ಉತ್ಸಾಹ ಕಂಡಾಗ ಶಿಬಿರ ಮುಗಿದು ಹೋಯ್ತಲ್ಲಾ ಎಂದು ನೋಯುವ ಅವರ ಮನಸ್ಥಿತಿ ಅರ್ಥವಾದಾಗ ಯಾಕೋ ಲೇಖನಿ ಒಂದು ಕವನ ಗೀಚಿತು …ಶಿಬಿರದಲ್ಲಿ ಚೆನ್ನಾಗಿ ಹಾಡು ಹಾಡಬಲ್ಲ ವಿದ್ಯಾರ್ಥಿನಿ ಶ್ರದ್ಧಾ ಅವರು ಅದನ್ನು ಗುರುವಂದನೆ ಸಮಯದಲ್ಲಿ ಶ್ರೀಗಳ ಸಮ್ಮುಖದಲ್ಲಿ ಸೊಗಸಾಗಿ ಹಾಡಿದರು….

ಬಣ್ಣದ ವೇಷ
ಭಾರವಾಯ್ತು ಕಾಲು
ತೇವವಾಯ್ತು ಕಣ್ಣು
ಆದ್ರìವಾಯ್ತು 
ಹೃದಯ 
ಮುಗಿಯಿತಿಂದು ಶಿಬಿರ
ಮೂರು ಮೂರು ಸೇರಿ
ಮೂವತ್ತಮೂರು ಆಗಿ
ತಾಳ ತಟ್ಟಿ ಕುಣಿದು
ಮೇಳ ಕಟ್ಟಿ ಮಣಿದು
ನೀರ ಹರಿವಿನಂತೆ
ಕರುಳ ಬಳ್ಳಿಯಂತೆ
ಪಡೆದ ಸುಖದ ಸವಿಯ
ಮರೆಯಲೆಂತು ಮನವೇ
ಇನ್ನೆಲ್ಲಿ ಗೆಜ್ಜೆ ನಿನದ
ಮತ್ತೆಲ್ಲಿ ಗಾನ ಶಬುದ
ಕಣ್ಣಲ್ಲಿ  ನೀರು ಸತತ
ಮುಗಿದುಹೋಯ್ತು 
ಶಿಬಿರ
ಯಕ್ಷ ಲೋಕದಲ್ಲಿ
ಗಂಧರ್ವರಾಗಿ ಕುಣಿದು
ಮಿತ್ರಸೇನೆ ಕಟ್ಟಿ
ನಿತ್ಯ ದುಗುಡ ಮರೆತು
ಗುರುವಿನೊಂದು ನಡೆಗೆ
ನಮ್ಮ ನೂರು ಹೆಜ್ಜೆ
ಪ್ರೀತಿ ಭಾವದೆಡೆಗೆ
ನಮ್ಮ ತಾಳ ಗೆಜ್ಜೆ
ಕಲೆಯ ಸುಖದ ಮಿಡಿತ
ನಮ್ಮ ಹೃದಯ ಬಡಿತ
ಏರಬೇಕು ನಾವು
ಪೊರೆಯಬೇಕು ನೀವು …
– ರತ್ನಾಕರ ಮಲ್ಲಮೂಲೆ

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.