ಇಂದು ಬದಿಯಡ್ಕದಲ್ಲಿ ಬೃಹತ್‌ ಹಿಂದೂ ಸಮಾಜೋತ್ಸವ


Team Udayavani, Apr 27, 2018, 6:15 AM IST

26ksde8.jpg

ಬದಿಯಡ್ಕ: ಭರತ ಖಂಡದ ಮಣ್ಣಿನ ಶಕ್ತಿಯಾಗಿ ಪ್ರಾಚೀನ ಸಂಸ್ಕೃತಿಯಾದ ಸನಾತನ ಹಿಂದೂ ಧರ್ಮ ಸಾಗಿಬಂದ ಪಥ ಅತ್ಯಂತ ರೋಚಕವಾದುದು. ಅತ್ಯಂತ ಸಮೃದ್ಧತೆಯ ಹಿಂದೂ ಧರ್ಮದ ಸತ್ವ ಮತ್ತು ತತ್ವ ಸಹಜವಾಗಿ ಸವಾಲುಗಳನ್ನು ಸಮರ್ಥವಾಗಿಯೇ ಎದುರಿಸಿ ಸಂತರ-ಶರಣರ, ಸಾಧಕರ ಕಾಲಾಕಾಲಗಳ ಕೊಡುಗೆಗಳಿಂದ ಇಂದಿಗೂ ಪ್ರಬುದ್ಧವಾಗಿ ನೆಲೆನಿಂತಿದೆ. ರಾಷ್ಟ್ರದ ಉದ್ದಗಲ ಹರಿಯುವ ಪವಿತ್ರ ನದಿಗಳು, ದಿಕ್ಕು-ದಿಗಂತದೆಡೆಗೆ ಚಾಚಿರುವ ಪುಣ್ಯ ಪರ್ವತಗಳು, ನೆಲದ ಮೂಲೆ-ಮೂಲೆಗಳಲ್ಲಿ ಕಂಗೊಳಿಸುವ ಗುಡಿ-ಗುಡಾರಗಳು ಧರ್ಮ ಸಂರಕ್ಷಣೆಗೆ ತನ್ನದೇ ಆದಂತೂ ಮಹತ್ತರ ಕೊಡುಗೆ ನೀಡಿದೆ. ಇಂತಹ ಸತ್ವ-ಸಂಪದ್ಭರಿತ ನೆಲದ ಆಸೆಯಿಂದ ಅದನ್ನು ವಶೀಕರಿಸಲು ಹಿಂದೆ ರಾಷ್ಟ್ರದ ಹೊರಗಿಂದ ಅನೇಕಾನೇಕ ಆಕ್ರಮಣಗಳು, ಲೂಟಿಗಳು ನಮ್ಮ ಮೇಲಾಗಿದ್ದರೂ ಅಂತಹ ಸವಾಲನ್ನು ಗೆದ್ದು ಬೆಳೆದ ನೆಲ ಈ ಭರತ ಖಂಡ.

ಆದರೆ ಈಗ  ರಾಷ್ಟ್ರದೊಳಗೆಯೇ ವಿಚಲಿತಗೊಳಿಸುವ ವಿದ್ಯಮಾನಗಳು ಕಳೆದ ಕೆಲವು ದಶಕಗಳಿಂದ ವ್ಯಾಪಕಗೊಂಡು ಭೀತಿಯನ್ನು ತಂದೊಡ್ಡುತ್ತಿವೆ. ಈ ಹಿನ್ನೆಲೆಯಲ್ಲಿ ಆಧುನಿಕ ಯುಗದಲ್ಲಿ ಬದುಕುತ್ತಿರುವ  ಹಿಂದೂ ಧರ್ಮೀಯರನ್ನು ಸಂರಕ್ಷಿಸಿಕೊಳ್ಳುವ, ಜಾಗೃತಿ ಮೂಡಿಸುವ ನಿಟ್ಟಿನ ಸಮರೋಪಾದಿಯ ಕಾರ್ಯ ತಂತ್ರಗಳನ್ನು ಅನಿವಾರ್ಯವಾಗಿ ಮಾಡಲೇಬೇಕಿದೆ ಮತ್ತು ಅದಿಂದು ಅಗತ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್ತು ಬಜರಂಗದಳ, ಮಾತೃಶಕ್ತಿ ಬದಿಯಡ್ಕ ಪ್ರಖಂಡ ಮತ್ತು ಹಿಂದೂ ಸಮಾಜೋತ್ಸವ ಸಮಿತಿ ಬದಿಯಡ್ಕ ಘಟಕವು ಎಪ್ರಿಲ್‌ 27ರಂದು ಶುಕ್ರವಾರ ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಮತ್ತು ಬೃಹತ್‌ ಶೋಭಾಯಾತ್ರೆ ಆಯೋಜಿಸಿದೆ.

ಕಾರ್ಯಕ್ರಮ
ಎ.27ರಂದು ಮಧ್ಯಾಹ್ನ 2 ಗಂಟೆಗೆ ಪೆರಡಾಲ ನವಜೀವನ ಹೈಸ್ಕೂಲ್‌ ವಠಾರದಿಂದ ಶೋಭಾಯಾತ್ರೆ ಸಮಾಜೋತ್ಸವ ನಗರಿಗೆ ತೆರಳಲಿದ್ದು, 3 ಗಂಟೆಯಿಂದ ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌  ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. 

ಸಾಧ್ವಿ ಬಾಲಿಕಾ ಸರಸ್ವತೀ ಜೀ ಅವರಿಂದ ದಿಕ್ಸೂಚಿ ಭಾಷಣ
ಸಮಾರಂಭದಲ್ಲಿ ಸಾಧ್ವಿ ಬಾಲಿಕಾ ಸರಸ್ವತೀ ಜೀ ದಿಕ್ಸೂಚಿ ಭಾಷಣ ಮಾಡುವರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ವಿಶ್ವಹಿಂದೂ ಪರಿಷತ್ತು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌, ಹಿಂದೂ ಐಕ್ಯವೇದಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹರಿದಾಸ್‌ ಮುಖ್ಯ ಅತಿಥಿಗಳಾಗಿರುವರು. 

ಪ್ರಮುಖರ ಉಪಸ್ಥಿತಿ
ವಿಶ್ವಹಿಂದೂ ಪರಿಷತ್ತು ಮಂಗಳೂರು ವಿಭಾಗ ಸಂಘಟನ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ವಿಶ್ವಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಪಿ.ಅಂಗಾರ ಶ್ರೀಪಾದ, ಪ್ರಧಾನ ಕಾರ್ಯದರ್ಶಿ ಶಂಕರ ಭಟ್‌ ಉಳುವಾನ, ಮಾತೃಶಕ್ತಿ ಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ, ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಸುರೇಶ್‌ ಶೆಟ್ಟಿ ಪರಂಕಿಲ, ಗೋರûಾ ಪ್ರಮುಖ್‌ ಅರಿಬೈಲು ಗೋಪಾಲ ಶೆಟ್ಟಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಮಧುಕರ ರೈ  ಕೊರೆಕ್ಕಾನ, ಬಿ.ನಿತ್ಯಾನಂದ ಶೆಣೈ ಉಪಸ್ಥಿತರಿರುವರು.

ಉದ್ದೇಶ
ವಿಶ್ವಹಿಂದೂ ಪರಿಷತ್‌-ಭಜರಂಗದಳ ಸಂಘಟನೆಗಳ ವಿಸ್ತಾರ, ಸನಾತನ ಹಿಂದೂ ಧರ್ಮದ ಆಚರಣೆಗಳ ಕುರಿತು ಅರಿವು ಮೂಡಿಸುವುದು, ಸಮಾಜ ಕಲ್ಯಾಣ ನಿಧಿಗೆ ಚಾಲನೆ ನೀಡಿ ಅಶಕ್ತರಿಗೆ ನೆರವು, ಮತಾಂತರ ಹಾಗೂ ಜಿಹಾದಿಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಧಕ್ಕೆ, ಅವಮಾನಗಳಿಗೆ ತಕ್ಕ ಪ್ರತ್ಯುತ್ತರ, ಗೋಹತ್ಯಾ ನಿಷೇಧಕ್ಕಾಗಿ ಸಹಿ ಸಂಗ್ರಹ ಅಭಿಯಾನ ನಡೆಸುವ ಉದ್ದೇಶದಿಂದ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮುಖ್ಯಾಂಶಗಳು
– ವಿಶ್ವಹಿಂದೂ ಪರಿಷತ್‌ ಭಜರಂಗದಳ ಹಿಂದೂ ಸಮಾ ಜೋತ್ಸವ ಸಮಿತಿ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಎ.27 ರಂದು ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 50,000ಕ್ಕೂ ಮಿಕ್ಕ ಜನರು ಭಾಗವಹಿಸುವ ನಿರೀಕ್ಷೆಯಿರಿಸಿದೆ.
– ಬದಿಯಡ್ಕ ಪ್ರಖಂಡದ 5 ಪಂಚಾಯತ್‌ಗಳಲ್ಲಿ ಮನೆ ಮನೆ ಸಂಪರ್ಕವನ್ನು ನಡೆಸಲಾಗಿದೆ. ಪ್ರತಿ ಹಿಂದೂ ಮನೆಯಿಂದ ಕಾರ್ಯಕರ್ತರು ಅತ್ಯುತ್ಸಾಹ ದಿಂದ ಭಾಗವಹಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ಹಗಲಿರು ಳೆನ್ನದೆ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ.
– ಎ.22ರಂದು ವಿವಿಧ ಪಂಚಾಯತ್‌ ಸಮಿತಿಗಳ ನೇತೃತ್ವ ದಲ್ಲಿ ಆಗಮಿಸಿದ ವಾಹನ ಜಾಥಾವು ಬದಿಯಡ್ಕದಲ್ಲಿ  ಸಂಗಮಿಸಿ, ಬದಿಯಡ್ಕ ಪೇಟೆಯಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಿತು. ಸುಮಾರು 600ಕ್ಕೂ ಮಿಕ್ಕಿ ದ್ವಿಚಕ್ರವಾಹನಗಳು ಭಾಗವಹಿಸಿವೆ.
– 10,000 ಮಂದಿಗೆ ಆಸನ  ಹಾಗೂ ಉಳಿದವರಿಗೆ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಮಾಡಲಾಗಿದೆ.
– ಶೋಭಾಯಾತ್ರೆಯಲ್ಲಿ  ಚೆಂಡೆ ಮೇಳ, ಸಿಂಗಾರಿ ಮೇಳ, ಬ್ಯಾಂಡ್‌ ಸೆಟ್‌, ಸ್ಥಬ್ದ ಚಿತ್ರಗಳು, ಭಜನಾ ತಂಡಗಳು, ರಾಷ್ಟ್ರಪ್ರೇಮ ಬಿಂಬಿಸುವ ವೇಷಭೂಷಣಗಳು ಇರುವುದು.
– ಕಾರ್ಯಕ್ರಮದುದ್ದಕ್ಕೂ “ಚಲಿಸುವ ಗೋ ಆಲಯ’ದಲ್ಲಿ ಸವತ್ಸ ಗೋವಿಗೆ ಪೂಜೆ, ಆರತಿ ಬೆಳಗುವಿಕೆ.
– ವೇದಿಕೆಯೇರಲಿರುವ ಕಾಸರಗೋಡು ಗಿಡ್ಡ ತಳಿಯ ಅತೀ ಗಿಡ್ಡ ಅಪೂರ್ವ ಹಸು.
– ಗೋಹತ್ಯಾ ನಿಷೇಧಕ್ಕಾಗಿ ಸಹಿ ಸಂಗ್ರಹ ಅಭಿಯಾನ.
– ಗೋ ಉತ್ಪನ್ನ, ಸ್ವದೇಶೀ ಉತ್ಪನ್ನ ಮಾರಾಟ ಮಳಿಗೆ.
– ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ 2000 ಮಂದಿ ಸ್ವಯಂಸೇವಕರ ತಂಡ
– ಪಾನೀಯಗಳನ್ನು ವಿತರಿಸಲು ಮಾತೃ ಮಂಡಳಿ, ವಿವಿಧ ಸಂಘಟನೆಗಳ ಕಾರ್ಯಕರ್ತರು
– ಗೋಪೂಜೆ.

ಟಾಪ್ ನ್ಯೂಸ್

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.