ಸೈಂಟ್‌ಲಾರೆನ್ಸ್ ಇಗರ್ಜಿ: ಕ್ರೈಸ್ತರ ಪವಿತ್ರಸಪ್ತಾಹಕ್ಕೆ ಚಾಲನೆ
Team Udayavani, Mar 27, 2018, 9:55 AM IST
ಕಾಸರಗೋಡು: ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ರವಿವಾರ ಪಾಮ್ ಸಂಡೇ ಆಚರಣೆಯೊಂದಿಗೆ ಪವಿತ್ರ ಸಪ್ತಾಹಕ್ಕೆ ಚಾಲನೆಯಾಯಿತು.
ಪಾಸ್ಖ ಹಬ್ಬದ ಹಿಂದಿನ ರವಿವಾರವನ್ನು ಪಾಮ್ ಸಂಡೇ ಎಂದು ಆಚರಿಸಲಾಗುತ್ತದೆ. ಯೇಸು ಶಿಲುಬೆಗೇರುವ ಮುನ್ನ ಶಿಷ್ಯರೊಂದಿಗೆ ಜೆರುಸಲೇಂ ಶಹರಕ್ಕೆ ಹೊರಟರು. ಓಲಿವ್ ಗುಡ್ಡದ ಬಳಿಯಿರುವ ಬೆತಗೆ ಮತ್ತು ಬೆಥಾನಿಗೆ ಬಂದಾಗ ಯೇಸು ತಮ್ಮ ಶಿಷ್ಯಂದಿರಲ್ಲಿ ಇಬ್ಬರನ್ನು ಕರೆದು ನಿಮ್ಮೆದುರಿಗಿರುವ ಆ ಹಳ್ಳಿಗೆ ಹೋಗಿರಿ. ಅಲ್ಲಿ ಕಟ್ಟಿ ಹಾಕಿರುವ ಕತ್ತೆಯ ಮರಿಯನ್ನು ಬಿಚ್ಚಿ ತನ್ನಿ ಎಂದರು. ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದರು. ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಿದರು. ಯೇಸು ಅದನ್ನು ಹತ್ತಿ ಕುಳಿತರು. ಅನೇಕರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಕಿದರು. ಇನ್ನೂ ಕೆಲವು ತೋಟಗಳಿಂದ ಮರದ ರೆಂಬೆಗಳನ್ನು ಕಡಿದು ಹಾಕಿದರು. ಯೇಸುವಿನ ಹಿಂದೆ ಹಾಗೂ ಮುಂದೆ ಇದ್ದವರು ಜಯವಾಗಲಿ. ಸರ್ವೇಶ್ವರನ ನಾಮದಲ್ಲಿ ಬರುವವರಿಗೆ ಮಂಗಳವಾಗಲಿ. ಪೂರ್ವಜ ದಾವೀ ದನ ಸಾಮ್ರಾಜ್ಯ ಉದಯವಾಗಲಿ. ಅಶುಭವಾಗಲಿ. ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ ಎಂದು ಘೋಸಿದರು. ಯೇಸು ಕತ್ತೆಯ ಮೇಲೆ ಕುಳಿತು ಜೆರುಸಲೇಂಗೆ ಪ್ರವೇಶಿಸಿದಾಗ ಹೋಸನ್ನಾ ಸ್ತುತಿ ಹಾಡಿದ ಆ ಘಟನೆಯ ನೆನಪಿಗೆ ಪಾಮ್ ಸಂಡೆ ಆಚರಿಸಲಾಗುತ್ತದೆ.
ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ರವಿವಾರ ಪಾಮ್ ಸಂಡೇ ಆಚರಿಸಲಾಯಿತು. ದ್ವಾರದ ಬಳಿ ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್ ಆಶೀರ್ವಚನ ನೀಡಿದರು. ಬಳಿಕ ಕ್ರೈಸ್ತ ಬಾಂಧವರು ತೆಂಗಿನ ಗರಿಗಳನ್ನು ಹಿಡಿದು ಹೋಸನ್ನಾ ಸ್ತುತಿಯೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಪ್ರವೇಶಿಸಿದರು. ಫಾಙ ಮೆಲ್ವಿನ್ ಫೆರ್ನಾಂಡಿಸ್ ದಿವ್ಯಬಲಿಪೂಜೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.