ಕಡಪ್ಪು ಶ್ರೀಕೃಷ್ಣ ಶರ್ಮ ಅವರಿಗೆ ಗೌರವ ಪುರಸ್ಕಾರ
Team Udayavani, Apr 21, 2019, 6:30 AM IST
ಕಾಸರಗೋಡು: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀಕೃಷ್ಣ ಶರ್ಮ ಅವರನ್ನು ಮಾತಾಪಿತೃ ಕಡಪ್ಪು ಶ್ರೀ ಸುಬ್ರಹ್ಮಣ್ಯ ಭಟ್ ಶಾರದಾ ದಂಪತಿ ಮತ್ತು ಮನೆಯವರ ಉಪಸ್ಥಿತಿಯಲ್ಲಿ ಪೆರಡಾಲ ಹವ್ಯಕ ವಲಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಕಡಪ್ಪು ನಿವಾಸದಲ್ಲಿ ಜರಗಿದ ಸಭೆಯಲ್ಲಿ ಪೆರಡಾಲ ವಲಯ ಅಧ್ಯಕ್ಷರಾದ ಹರಿಪ್ರಸಾದ್ ಪೆರ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ ಅಭಿನಂದನಾ ಮಾತುಗಳನ್ನಾಡಿ ಶ್ರೀಕೃಷ್ಣ ಶರ್ಮ ಅವರ ವಿಶೇಷ ಸಾಧನೆ ಮನೆಯವರಿಗೆ ಸತ್ಕಿàರ್ತಿಯನ್ನು ತಂದಂತೆ ವಿದ್ಯಾಭ್ಯಾಸಮಾಡಿದ ಶಾಲೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ, ಅಳಿಕೆ ಸತ್ಯ ಸಾಯಿ ಲೋಕಸೇವಾ ವಿದ್ಯಾ ಸಂಸ್ಥೆ ಪೆರಡಾಲ ವಲಯ, ಮುಳೇÛರಿಯಾ ಹವ್ಯಕ ಮಂಡಲ, ಗೋಕರ್ಣ ಮಹಾಮಂಡಲ ಹಾಗೂ ಸರ್ವ ಸಮಾಜಕ್ಕೇ ಸ್ಮರಣೀಯವಾಗಿ ಹರ್ಷವನ್ನು ತಂದಿದೆ. ಇವರ ಮುಂದಿನ ಸಾಧನೆಯ ಪಥದಲ್ಲಿ ಶ್ರೇಷ್ಠ ಹಂತವನ್ನು ತಲಪಿ ಯಶಸ್ಸು ದೊರೆಯಲಿ ಎಂಬುದಾಗಿ ಶುಭ ಹಾರೈಸಿದರು.
ಮಹಾಮಂಡಲ ಅಧ್ಯಕ್ಷೆ ಶ್ರೀಮಾತಾ ಪ್ರಶಸ್ತಿ ವಿಜೇತೆ ಈಶ್ವರಿ ಬೇರ್ಕಡವು ವಿಶೇಷ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಶರ್ಮ ಮಾತನಾಡಿ ಈ ಸ್ಥಾನ ಗಳಿಸಲು ಮುಖ್ಯ ಕಾರಣ ಶ್ರೀ ಮಠದ ಅನುಗ್ರಹ, ವಿದ್ಯಾಪೀಠದಲ್ಲಿ ಕಲಿಕೆ, ಪರೀಕ್ಷೆಗೆ ಬರೆಯುವ ಮೊದಲು ಶ್ರೀ ಗುರುಗಳ ಭೇಟಿ ಅನುಗ್ರಹ, ಮಹಾಪಾದುಕಾ ಪೂಜೆ ಮಾಡಿಸುವ ಭಾಗ್ಯ ಆಗಿರುತ್ತದೆ. ಇನ್ನು ಮುಂದೆಯೂ ಶ್ರೀ ಗುರುಗಳ ಅನುಗ್ರಹ ಇರಬೇಕು. ಮುಂದೆ ಮಹತ್ಸಾಧನೆ ಮಾಡಲು ಆತ್ಮವಿಶ್ವಾಸವನ್ನು ತುಂಬಿಸಿದ್ದೀರಿ. ಎಲ್ಲರಿಗೂ ಚಿರ ಋಣಿ ಎಂಬುದಾಗಿ ಕೃತಜ್ಞತಾ ನುಡಿಗಳನ್ನಾಡಿದರು.
ಮುಳ್ಳೇರಿಯಾ ಹವ್ಯಕ ಮಂಡಲ ಪದಾಧಿ ಕಾರಿಗಳಾದ ಮಹೇಶ್ ಸರಳಿ, ಕೇಶವ ಪ್ರಸಾದ ಎಡಕ್ಕಾನ, ಕುಸುಮಾ ಪೆರ್ಮುಖ, ಪೆರಡಾಲ ವಲಯ ಪದಾ ಧಿಕಾರಿಗಳಾದ ಶ್ರೀಕೃಷ್ಣ ಭಟ್ ಮಡಿಪ್ಪು, ಜಯಶಂಕರ ಕುಳಮರ್ವ, ಗುರಿಕ್ಕಾರರಾದ ಗೋಪಾಲಕೃಷ್ಣ ಭಟ್ ಅಳಂಬಿನಮೂಲೆ, ಶಾಮ ಭಟ್ ಬೇರ್ಕಡವು ಅವರು ಉಪಸ್ಥಿತರಿದ್ದರು. ವಲಯ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ ಮಡಿಪ್ಪು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.