ಹೊಸಂಗಡಿ: ರಾಜ್ಯ ಲೈಬ್ರರಿ ಕೌನ್ಸಿಲ್ ಕಾರ್ಯಾಗಾರ
Team Udayavani, Mar 14, 2017, 2:12 PM IST
ಹೊಸಂಗಡಿ: ರಾಜ್ಯ ಲೈಬ್ರರಿ ಕೌನ್ಸಿಲ್ ಗ್ರಂಥಾಲಯಗಳ ವರ್ಗೀಕರಣಗಳ ಕುರಿತಾಗಿ ಹೊಸ ಮಾನದಂಡಗಳನ್ನು ರೂಪೀಕರಿಸಿದ್ದು, ಈ ಬಗ್ಗೆ ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ಗ್ರಂಥಾಲಯಗಳ ಕಾರ್ಯದರ್ಶಿಗಳಿಗೆ ಮಂಜೇಶ್ವರದಲ್ಲಿ ಕಾರ್ಯಾಗಾರ ನಡೆಯಿತು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ, ಹಿರಿಯ ಸಾಹಿತಿ ಪಿ.ವಿ.ಕೆ. ಪನೆಯಾಲ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಎ. ಮೊಹಮ್ಮದ್ ಮಾಸ್ತರ್, ಎ.ಬಿ. ರಾಧಾಕೃಷ್ಣ ಬಲ್ಲಾಳ್, ಶ್ರೀಕುಮಾರಿ ಟೀಚರ್ ಮೊದಲಾ ದವರು ಉಪಸ್ಥಿತರಿದ್ದರು.
ರಾಮಚಂದ್ರ ಭಟ್ ಧರ್ಮತ್ತಡ್ಕ, ತಾಜುದ್ದೀನ್ ಮಾಸ್ತರ್, ಸುರೇಶ್ ಬಂಗೇರ, ಉಮೇಶ್ ಅಟ್ಟೆಗೋಳಿ, ಎಚ್.ವಿ. ಆಚಾರ್, ಪದ್ಮಪ್ರಿಯ ಕೂಳೂರು, ರಾಮಕೃಷ್ಣ ಭಟ್ ಆನೆಕಲ್ಲು ಮೊದಲಾದವರು ಕಾರ್ಯಾಗಾರದ ಚರ್ಚೆಗಳಲ್ಲಿ ಮಾತನಾಡಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ. ಮಾಸ್ತರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕಮಲಾಕ್ಷ ದೇರಂಬಳ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.