ಬೃಹತ್‌ ಮರಗಳು: ಯಾವುದೇ ಕ್ಷಣ ರೆಂಬೆಗಳು ಮುರಿದು ಬೀಳುವ ಸ್ಥಿತಿ!


Team Udayavani, Jun 17, 2018, 6:00 AM IST

16ksde1.jpg

ಕಾಸರಗೋಡು: ಜಿಲ್ಲೆಯಲ್ಲಿ ಮುಂಗಾರು ಮಳೆಯ ರುದ್ರ ನರ್ತನ ಒಂದೆಡೆಯಾದರೆ, ಅಲ್ಲಲ್ಲಿ ಬೆಳೆದು ನಿಂತಿರುವ ಮರಗಳು ಅಪಾಯಕಾರಿಯಾಗಿ ನಿಂತಿದೆ. ಕಾಸರಗೋಡು ನಗರದ ಬ್ಯಾಂಕ್‌ ರಸ್ತೆಯ ತಾಲೂಕು ಕಚೇರಿ ಪರಿಸರದಲ್ಲಿ ಬೆಳೆದು ನಿಂತಿರುವ ಬೃಹತ್‌ ಮರಗಳು ಯಾವುದೇ ಕ್ಷಣದಲ್ಲೂ ಅಪಾಯವನ್ನು ತರಬಹುದು ಎಂಬಂತೆ ಮರದ ರೆಂಬೆಗಳು ಎಲ್ಲೆಡೆ ವಾಲಿಕೊಂಡಿದೆ. ರಸ್ತೆಗೂ ವಾಲಿಕೊಂಡಿದ್ದು ಇದರಿಂದ ಈ ರಸ್ತೆಯಲ್ಲಿ ಸಾಗುವ ವಾಹನಗಳಿಗೂ, ಪಾದಚಾರಿಗಳಿಗೂ ಅಪಾಯಕಾರಿಯಾಗಿದೆ.

ನೂರು ವರ್ಷ ಹಳಮೆಯ ಕಾಸರಗೋಡು ಸಬ್‌ರಿಜಿಸ್ಟ್ರಾರ್‌ ಕಟ್ಟಡ ಇಂದೋ ನಾಳೆಯೋ ಬೀಳುವ ದುಸ್ಥಿತಿಗೆ ತಲುಪಿದೆ. ಕಟ್ಟಡ ಮೇಲೆ ಆವರಿಸಿದ ಬೃಹತ್‌ ಮರದ ರೆಂಬೆಗಳು ಭಯಾಂತಕವನ್ನು ಹೆಚ್ಚಿಸಿವೆ. ಇನ್ನೊಂದೆಡೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಚೇರಿ ಒಳಭಾಗ ನೀರು ಆವರಿಸಿ ಕೃತಕ ಕೊಳದಂತಾಗಿತ್ತು. ಕಾಸರಗೋಡು ತಾಲೂಕು ಆಫೀಸು ಕಚೇರಿ ಪರಿಸರದಲ್ಲಿ ಶತಮಾನದಷ್ಟು ಹಳೆಯದಾದ ಕಟ್ಟಡದಲ್ಲಿ ಸಬ್‌ರಿಜಿಸ್ಟ್ರಾರ್‌ ಕಚೇರಿ ಇದ್ದು, 11 ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕಾಸರಗೋಡು ತಾಲೂಕು ಪರಿಧಿಯ 17 ಗ್ರಾಮಗಳ ನೋಂದಣಿ ಕಾರ್ಯಗಳಿಗಾಗಿ ದಿನವೊಂದಕ್ಕೆ ನೂರಕ್ಕು ಹೆಚ್ಚಿನ ಜನರು ಕಚೇರಿಗೆ ಆಗಮಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಕಚೇರಿಯಲ್ಲಿ ದಾಖಲೆಗಳನ್ನು ಕೂಡಾ ಸಂರಕ್ಷಿಸಿಡಲು ಕಷ್ಟಸಾಧ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿಯೋರ್ವರು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಅಗತ್ಯ ಕ್ರಮಜಾರಿಯಾಗಲಿಲ್ಲ ಎನ್ನುತ್ತಾರೆ ಸಿಬ್ಬಂದಿ.

ಕಚೇರಿ ಪರಿಸರದಲ್ಲಿರುವ ಬೃಹತ್‌ ಮರಗಳು ಅಪಾಯವನ್ನು ಸೂಚಿಸುತ್ತಿವೆ. ಮರಗಳ ರೆಂಬೆಗಳು ಕಚೇರಿ ಮೇಲ್ಭಾಗದ ಹೆಂಚಿನ ಮೇಲ್ಛಾವಣಿ ಮೇಲೆ ಹಬ್ಬಿದ್ದು ಯಾವುದೇ ಸಮಯದಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಎಚ್ಚರಿಕೆಯಗಂಟೆಯಾಗಿವೆ. ಕಚೇರಿ ಆವರಣದ ಹೊರಗಿನ ರಸ್ತೆ ಮೇಲೂ ಚಾಚಿರುವ ಮರದ ರೆಂಬೆ, ಆವರಣದ ಒಳಗಡೆ ಇರುವ ಬೃಹತ್‌ ಮರಗಳ ರೆಂಬೆಗಳನ್ನು ಕತ್ತರಿಸದಿರುವ ಕಾರಣ ಮಳೆಗಾಲದ ವೇಳೆ ಅಪಾಯಕಟ್ಟಿಟ್ಟ ಬುತ್ತಿಯಾಗಿದೆ.

ನೋಂದಣಿ ಕಾರ್ಯಕ್ಕೆ ಆಗಮಿಸುವ ಪ್ರತಿಯೊಬ್ಬನೂ ಭಯಭೀತಿಯೊಂದಿಗೆ ಕಚೇರಿ ಒಳಗೆ ತೆರಳುವ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಮರದ ರೆಂಬೆಗಳನ್ನು ಕಡಿದು ತೆಗೆಯಬೇಕು ಎಂದು ವರಿಷ್ಠ ಅಧಿಧಿಕಾರಿಗಳಿಗೆ ಸೂಚಿಸಿದ್ದರೂ ಫಲಕಾಣಲಿಲ್ಲ ಎನ್ನಲಾಗಿದೆ.

ಹೊಸ ಕಟ್ಟಡವೆ ಎಂದು?
ಜಿಲ್ಲಾ ಕಚೇರಿ ಸೇರಿದಂತೆ 10 ಉಪ ನೋಂದಣಿ ಕಚೇರಿಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ ಕಾಸರಗೋಡು ಸಬ್‌ರಿಜಿಸ್ಟ್ರಾರ್‌ ಕಚೇರಿ ಕಟ್ಟಡವು ಬಹಳ ಹಳೆಯದಾಗಿದ್ದು ಚಿಂತಾಜನಕ ಸ್ಥಿತಿಯ ಮೂಲಕ ಭಯದ ವಾತಾವರಣ ಸೃಷ್ಟಿಸಿದೆ. ಉದುಮದಲ್ಲಿ ಸಬ್‌ರಿಜಿಸ್ಟ್ರಾರ್‌ ಕಚೇರಿಯನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಹೊಸ ಕಟ್ಟಡಗಳಿವೆ.
ಬೃಹತ್‌ ಮರದ ರೆಂಬೆಗಳೂ ತಾಲೂಕು ಕಚೇರಿ ಮೇಲ್ಭಾಗಕ್ಕೂ ಚಾಚಿಕೊಂಡಿದ್ದು, ಹೊರಾವರಣಕ್ಕೂ ಹಬ್ಬಿದೆ. ಹೆಚ್ಚಿನ  ಗಾಳಿ, ಮಳೆ ಬೀಸಿದಲ್ಲಿ ಮರದ ರೆಂಬೆಗಳು ತುಂಡಾಗಿ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

ಕಚೇರಿಯೊಳಗೆ ಮಳೆ ನೀರು 
ಸಾವಿರಾರು ಜನರ ಭೂದಾಖಲೆ ಸಹಿತ ರೇಖಾಚಿತ್ರಗಳನ್ನು ಒಳಗೊಂಡಿರುವ ಕಚೇರಿಯ ಒಳಗೆ ಮಳೆ ನೀರು ಸೋರುತ್ತಿದೆ. ಜನರು ಕಚೇರಿಗೆ ಆಗಮಿಸಿ ಕಾದು ಕುಳಿತುಕೊಳ್ಳುವ ಸ್ಥಳದಲ್ಲಿ ಮಳೆ ನೀರು ತುಂಬಿಕೊಳ್ಳುತ್ತದೆ. ಕಚೇರಿಯ ಹೆಂಚುಗಳು ಅಲ್ಲಲ್ಲಿ ಒಡೆದ ಪರಿಣಾಮ ಮಳೆ ನೀರು ಕಚೇರಿಯೊಳಗೆ ಬೀಳುತ್ತಿದ್ದು, ಕಡತಗಳು ನೀರಿನಲ್ಲಿ ಹಾನಿಗೀಡಾಗುವ ಸಾಧ್ಯತೆಗಳು ಹೆಚ್ಚಾಗಿವೆ.

 ಸ್ಪಂದನೆ ಸಿಗಲಿಲ್ಲ
ತೃಕ್ಕರಿಪುರ ಮತ್ತು ಮಂಜೇಶ್ವರದಲ್ಲಿನ ಹೊಸ ಸಬ್‌ ರಿಜಿಸ್ಟ್ರಾರ್‌ ಕಚೇರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾಸರಗೋಡು ಉಪ ನೋಂದಣಿ ಕಚೇರಿಗೆ ಹೊಸ ಕಟ್ಟಡದ ಆವಶ್ಯಕತೆ ಇದೆ ಎಂದು ಹಲವು ಬಾರಿ ಸರಕಾರಕ್ಕೆ ಮನವಿ ನೀಡಿದ್ದರೂ ಯಾವುದೇಧನಾತ್ಮಕ ಸ್ಪಂದನೆ ಸಿಗಲಿಲ್ಲ  
– ಎನ್‌.ಎ.ನೆಲ್ಲಿಕುನ್ನು 
ಶಾಸಕ ರು, ಕಾಸರಗೋಡು

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

cr

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.