Illegal Sand Mining; ಮರಳು ಅಕ್ರಮ ಸಾಗಾಟ ದಂಧೆ; ಕಡಿವಾಣ ಹಾಕಲು ಅಧಿಕಾರಿಗಳು ವಿಫಲ
Team Udayavani, Sep 17, 2023, 10:19 PM IST
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ವಿವಿಧೆಡೆಗಳಲ್ಲಿ ಶಿರಿಯಾ ಹೊಳೆಯಿಂದ ಅಕ್ರಮ ಮರಳು ಸಾಗಾಟ ದಂಧೆ ನಿತ್ಯ ನಡೆಯುತ್ತಿದೆ. ಆದರೆ ಇದು ಅಕ್ರಮವಾದರೂ, ಸಕ್ರಮವಾಗಿ ಸಾಗುತ್ತಿದೆ. ಕೆಲವೊಂದು ಪೊಲೀಸರ ತೆರೆಮರೆಯ ಅಭಯವೂ ಇದಕ್ಕೆ ಇದೆ. ಅನೇಕ ವರ್ಷಗಳಿಂದ ನಡೆಯುತ್ತಿರುವ ಈ ದಂಧೆಗೆ ಕೆಲವು ಬಾರಿ ಕಾಟಾಚಾರಕ್ಕೆ ಪೊಲೀಸರು ದಾಳಿ ನಡೆಸಿದರೂ, ಮತ್ತೆ ಮರಳು ಸಾಗಾಟ ಆಗುತ್ತಲೇ ಇದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಗಾಟಕ್ಕಾಗಿ ಬಳಸಿದ ರಸ್ತೆಯನ್ನು ಜೆಸಿಬಿಯಲ್ಲಿ ಮುಚ್ಚಿ ದೋಣಿಗಳನ್ನು ಪುಡಿಗೈದರೂ, ಈ ದಂಧೆ ಕೆಲವು ದಿನಗಳ ಬಳಿಕ ಮತ್ತೆ ಎಗ್ಗಿಲ್ಲದೆ ನಡೆಯುತ್ತಿದೆ.
ಕೆಲವೊಂದು ರಾಜಕೀಯ ನಾಯಕರ ಕೃಪಾಕಟಾಕ್ಷ ಮತ್ತು ಪೊಲೀಸರಿಗೆ ಮಾಮೂಲು ಕಾಂಚಾಣ ನೀಡುವುದರಿಂದ ಇದನ್ನು ತಡೆಯಲಾಗುತ್ತಿಲ್ಲ. ಈ ದಂಧೆಯಲ್ಲಿ ಜಾತಿ, ಮತ, ರಾಜಕೀಯ ಸಾಮರಸ್ಯ ಇರುವುದರಿಂದ ಇದರ ನಿಗ್ರಹ ಕಷ್ಟವಾಗಿದೆ. ಮನೆ ಇನ್ನಿತರ ಕಟ್ಟಡ ನಿರ್ಮಿಸಲು ಕಾನೂನಿನ ತೊಡಕು ಇದ್ದರೂ, ಅಕ್ರಮ ಮರಳು ಸಾಗಾಟಕ್ಕೆ ಯಾವುದೇ ಕಾಯಿದೆ ಭಾದಕವಲ್ಲವೆಂಬುದಾಗಿ ಸಾರ್ವಜನಿಕರ ಆರೋಪವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.