ಮಡಿಕೇರಿ: ಮರಗಳ ಅಕ್ರಮ ದಾಸ್ತಾನು; ಮೂವರ ಬಂಧನ
Team Udayavani, Sep 22, 2022, 6:47 PM IST
ಮಡಿಕೇರಿ: ವೀರಾಜಪೇಟೆ ತಾಲ್ಲೂಕಿನ ಕುಂಬೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಸಿಡಲಾಗಿದ್ದ 2 ಲಕ್ಷ ರೂ. ಮೌಲ್ಯದ ಮರದ ನಾಟಾಗಳನ್ನು ವಿರಾಜಪೇಟೆ ಆರಣ್ಯ ವಲಯದ ಸಿಬ್ಬಂದಿಗಳು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಅಮ್ಮತ್ತಿ ಬಳಿಯ ಆನಂದಪುರ ಗ್ರಾಮದ ಚರಣ್ ರಾಜ್, ನೆಲ್ಯಹುದಿಕೇರಿ ಗ್ರಾಮದ ರಶೀದ್ ಹಾಗೂ ಹಸೆನಾರ್ ಈ.ಕೆ. ಬಂಧಿತ ಆರೋಪಿಗಳು.
ಅಮ್ಮತ್ತಿ ಬಳಿಯ ಕುಂಬೇರಿ ಗ್ರಾಮದ ಕಾಫಿ ತೋಟದಲ್ಲಿ ಅಕ್ರಮವಾಗಿ ಹಲಸು ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ನಾಟಾಗಳಾಗಿ ಪರಿವರ್ತಿಸಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಆರಣ್ಯ ವಲಯದ ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿ, ಮರದ ನಾಟಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
ವಿರಾಜಪೇಟೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮ್ ಬಾಬು.ಎಂ. ಹಾಗೂ ವಿರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು ಇವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕೆ.ಎಂ.ದೇವಯ್ಯ, ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಮೋನಿ?ಾ ಎಂ.ಎಸ್. ಶ್ರೀಶೈಲ ಮಲ್ಲಪ್ಪ ಮಾಲಿಗೌಡ್ರ, ಆನಂದ ಕೆ.ಆರ್, ಸಚಿನ ನಿಂಬಾಳ, ಎನ್.ಎನ್ ಅಕ್ಕಮ್ಮ, ಅನಿಲ್ ಸಿಟಿ, ಅರಣ್ಯ ರಕ್ಷಕರಾದ ಆರುಣ ಸಿ, ಚಂದ್ರಶೇಖರ ಅಮರಗೋಳ, ನಾಗರಾಜ ರಡರಟ್ಟಿ, ಮಾಲತೇಶ ಬಡಿಗೇರ, ಟಿ.ಎನ್.ಪ್ರಶಾಂತ್ ಕುಮಾರ್, ವಾಹನ ಚಾಲಕರಾದ ಅಚ್ಚಯ್ಯ, ಆಶೋಕ ಹಾಗೂ ವಿರಾಜಪೇಟೆ ವಲಯ ಆರ್.ಆರ್.ಟಿ ತಂಡದ ಸಿಬ್ಬಂದಿಗಳಾದ ಮೊಣ್ಣಪ್ಪ ಹಾಗೂ ಪ್ರಕಾಶ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.