ಅಕ್ರಮ ಮತದಾನ ಶಿಕ್ಷಾರ್ಹ ಅಪರಾಧ
Team Udayavani, Apr 23, 2019, 6:00 AM IST
ಕಾಸರಗೋಡು: ಮಗದೊಬ್ಬನ ಮತದಾನವನ್ನು ಅಕ್ರಮವಾಗಿ ನಡೆಸಲು (ಅಕ್ರಮ ಮತದಾನ)ಯತ್ನಿಸಿದವರ ಮತ್ತು ಒಮ್ಮೆ ಮತದಾನ ನಡೆಸಿದ ವಿಚಾರವನ್ನು ಗುಟ್ಟಾಗಿರಿಸಿ ಮತ್ತೂಮ್ಮೆ ಮತ ಚಲಾಯಿಸಲು ಯತ್ನಿಸುವುದು ಜನಪ್ರಾತಿನಿಧ್ಯ ಕಾನೂನು ಪ್ರಕಾರ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅಂಥ ಆರೋಪಿಗಳಿಗೆ ಐ.ಪಿ.ಸಿ. 171 ಎಫ್. ಪ್ರಕಾರ ಒಂದು ವರ್ಷದ ವರೆಗೆ ಸಜೆ ಮತ್ತು ದಂಡ ವಿಧಿಸಲಾಗುವುದು.
ಯಾರದ್ದಾದರೂ ಪ್ರೇರಣೆ ಯಿಂದ ಅಕ್ರಮ ಮತದಾನ ನಡೆಸಿದರೂ ಅದು ಶಿûಾರ್ಹ ವಾಗಿದ್ದು, ಶಿಕ್ಷೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇನ್ನೊಬ್ಬರ ಗುರುತು ಚೀಟಿಯನ್ನು ಅಕ್ರಮವಾಗಿ ಸಿದ್ಧಪಡಿಸಿ ಅಕ್ರಮ ಮತದಾನ ನಡೆಸಲು ಯತ್ನಿಸಿದರೆ ಅಕ್ರಮ ದಾಖಲೆ ನಿರ್ಮಾಣ ನಡೆಸಿದ ಮತ್ತು ಇನ್ನೊಬ್ಬರ ಮತವನ್ನು ಅಕ್ರಮವಾಗಿ ಚಲಾಯಿಸಿದ ಆರೋಪದಲ್ಲಿ ಕೇಸು ದಾಖಲಿಸಲಾಗುವುದು. ನೆರೆ ರಾಜ್ಯಗಳಲ್ಲಿ ಈಗಾಗಲೇ ಮತದಾನ ನಡೆಸಿ, ಜಿಲ್ಲೆಯ ಗಡಿಪ್ರದೇಶದಲ್ಲಿ ವಾಸವಾಗಿರುವ ಮಂದಿ ಮತ್ತೆ ಕಾಸರಗೋಡಿನಲ್ಲಿ ಮತದಾನ ನಡೆಸಲು ಯತ್ನಿಸಿದರೆ ಅಂಥವರ ಬಗ್ಗೆ ನಿಗಾ ಇರಿಸಲು ಪ್ರತ್ಯೇಕ ನಿರೀಕ್ಷಕರನ್ನು ನೇಮಿಸಲಾಗಿದೆ. ಇಂಥಾ ಯತ್ನವನ್ನು ಯಾರಾದರೂ ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವಿದೇಶದಲ್ಲಿರುವ, ಬೇರೆ ರಾಜ್ಯದಲ್ಲಿರುವ ವ್ಯಕ್ತಿಗಳ ಮತದಾತರ, ಮತದಾತರ ಪಟ್ಟಿಯಲ್ಲಿ ಹೆಸರು ಹೊಂದಿರುವ, ಆದರೆ ನಿಧನರಾಗಿರುವ ವ್ಯಕ್ತಿಗಳ ಹೆಸರಲ್ಲಿ ಅಕ್ರಮವಾಗಿ ದಾಖಲೆ ನಿರ್ಮಿಸಿ, ಮತದಾನ ನಡೆಸಲು ಯತ್ನಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ನಿಜವಾದ ಮತದಾತರನ್ನು ಗುರುತಿಸಲು ಕರ್ತವ್ಯದಲ್ಲಿರುವ ಸಿಬಂದಿ ಯತ್ನಿಸಬೇಕು. ಮತದಾತರ ಗುರುತು ಸಂಬಂಧ ದೂರುಗಳಿದ್ದಲ್ಲಿ ಕಾನೂನು ರೀತ್ಯಾ ಕ್ರಮಗಳು ಪೂರ್ಣಗೊಂಡ ನಂತರವಷ್ಟೇ ಮತದಾನ ನಡೆಸಲು ಅನುಮತಿ ನೀಡಬೇಕು. ಟೆಂಡರ್ ಮತ ಚಲಾಯಿಸುವುದಿದ್ದರೆ, ಮತಯಂತ್ರದಲ್ಲಿ ನಡೆಸಲು ಅನುಮತಿ ನೀಡಕೂಡದು.
ಯಾವುದೇ ಅಭ್ಯರ್ಥಿಗೆ ಮತದಾನ ನಡೆಸುವ ನಿಟ್ಟಿನಲ್ಲಿ ಹಣ ಯಾ ಇನ್ನಿತರ ಕೊಡುಗೆ ನೀಡಿಕೆ, ಬೆದರಿಕೆ ಇನ್ನಿತರ ರೂಪದಲ್ಲಿ ಪ್ರೇರೇಪಣೆ ನೀಡಿದರೆ, ಯಾವುದಾದರೂ ರೂಪದಲ್ಲಿ ಮತದಾನ ನಡೆಸುವುದಕ್ಕೆ ತಡೆಮಾಡಿದರೆ, ಮತಗಟ್ಟೆ ಬಳಿ ತಡೆಮಾಡುವುದು, ಸಂಘರ್ಷಕ್ಕೆ ಯತ್ನಿಸಿದರೆ ಕ್ರಮ ಕೈಗೊಳ್ಳಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.