ಧಾರ್ಮಿಕ ಆಚರಣೆ ಅನುಷ್ಠಾನ ಅಗತ್ಯ : ಹಿರಣ್ಯ ಭಟ್
Team Udayavani, Mar 8, 2017, 2:52 PM IST
ಕುಂಬಳೆ: ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಆಚಾರ್ಯತ್ವದಲ್ಲಿ ಮಾ. 9ರಂದು ಜರಗಲಿರುವುದು.
ಧಾರ್ಮಿಕ ಕ್ಷೇತ್ರಗಳು ತನ್ನವೇ ಆದ ಮಹತ್ವದಿಂದ ಪ್ರಸಿದ್ಧಿ ಪಡೆಯುತ್ತವೆ. ಇಲ್ಲಿ ಸಂಪ್ರದಾಯ, ಅನುಷ್ಠಾನ, ಆಚರಣೆ ಇವುಗಳು ಕೂಡ ಅತಿ ಪ್ರಮುಖವಾಗಿದೆ ಇವುಗಳನ್ನು ನಾವು ಆಚರಣೆಗೆ ತರುವುದು ಮತ್ತು ರೂಢಿಯಲ್ಲಿರಿಸಿಕೊಳ್ಳುವುದು ಅಗತ್ಯ ವೆಂದು ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಬಾಯಾರು ಅವರು ನುಡಿದರು. ಅವರು ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪುನಃ ಪ್ರತಿಷ್ಠಾ
ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸ್ತುಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ವಹಿಸಿದ್ದರು.
ಸಭೆಯಲ್ಲಿ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನಶೆಟ್ಟಿ ಕಜೆ, ಯು. ಶಂಕರ ಗಟ್ಟಿ ಹೊಸಮನೆ, ಕಲ್ಲಂಗಡಿ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಮಂಜುನಾಥ ರೈ ಕೋಟೆಕುಂಜ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೋಟೆಕುಂಜ ಪ್ರಬಾಕರ ಆಳ್ವ ಅವರು ಭಾಗವಹಿಸಿ ಮಾನತಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಜಿತ್ ಶೆಟ್ಟಿ ಕಜೆ ಸ್ವಾಗತಿಸಿ, ಜಗದೀಶ್ ಆಚಾರ್ಯ ಕಂಬಾರು ವಂದಿಸಿದರು. ರಾಮಚಂದ್ರ ಬೆದ್ರಡ್ಕ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ಹಾಗೂ ಶ್ರೀಜಾ ಪ್ರಾರ್ಥಿಸಿದರು.
ಮಾ. 7ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ವಿವಿಧ ತಂಡಗಳಿಂದ ಭಜನೆ. ಅಪರಾಹ್ನ ಜಗದೀಶ್ ಕೋರಿಕ್ಕಾರು ಅಗಲ್ಪಾಡಿ ಮತ್ತು ಬಳಗದವರಿಂದ ವಯಲಿನ್ ಸಂಗೀತ ಕಛೇರಿ, ಸಂಜೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ ಸಂಗೀತ ವಿದ್ಯಾನಿಧಿ ಡಾ|
ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿಗಾನ ಸುಧಾ ಜರಗಿತು.
ಮಾ. 8ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಶ್ರೀ ಶಕ್ತಿ ಭಜನಾ ಮಂದಿರ ಉಳಿಯತ್ತಡ್ಕ, ಶ್ರೀ ಧೂಮಾವತೀ ಭಜನಾ ಸಂಘ ಪುತ್ತೂರುಕೊಟ್ಯ, ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಸಂಘ ದೇಶಮಂಗಲ ಇವರಿಂದ ಭಜನೆ. ಅಪರಾಹ್ನ ಗಂಟೆ 2.30ಕ್ಕೆ ಸರಸ್ವತೀ ಸಂಗೀತ ವಿದ್ಯಾಲಯ ಜಯಭಾರತೀ ಪ್ರಕಾಶ ಕಾವು ಮಠ ಚೌಕಿ ಇವರ ಶಿಷ್ಯರಿಂದ ಸಂಗೀತಾರ್ಚನೆ, ಸಂಜೆ ಗಂಟೆ 7ರಿಂದ ಜರಗುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಮೊಕ್ತೇಸರ ಅನಂತ ವಿಷ್ಣು ಹೇರಳ ವಹಿಸುವರು.
ಹಿಂದೂ ಐಕ್ಯವೇದಿ ಪ್ರಾಂತ್ಯ ಸದಸ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡಲಿರುವರು. ಉದ್ಯಮಿ ಸುರೇಶ್ ಕಾಸರಗೋಡು, ಪಿಲಾಡ್ಕತ್ತಾಯ ದೈವಸ್ಥಾನ ಬದಿಯಾರು ಬಳ್ಳೂರು ಇದರ ಆಡಳಿತ ಮಂಡಳಿಯ ನಾರಾಯಣ ನಾಯ್ಕ ಬಳ್ಳೂರು ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ ಗಂಟೆ 8ರಿಂದ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದಿಂದ ನ್ರತ್ಯ ಸಂಗಮ “ನಾಟೊಲ್ಲಾಸಂ’ ನಡೆಯಲಿದೆ. ಮಾ. 9ರಂದು ಬೆಳಗ್ಗೆ 10.58ರ ವೃಷಭ ಲಗ್ನದಲ್ಲಿ ಶ್ರೀ ಪೂಮಾಣಿ ಕಿನ್ನಿಮಾಣಿ ದೆ„ಗಳ ನೂತನ ಬಿಂಬ ಪ್ರತಿಷ್ಠೆ, ಶ್ರೀ ಬೀರಣ್ಣಾಳ್ವ ದೈವದ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.