ಕೆಎಸ್‌ಆರ್‌ಟಿಸಿಯಲ್ಲಿ ಮಕ್ಕಳಿಗೆ ಬಸ್ ಪಾಸ್ ದರ ವಿನಾಯಿತಿಗೆ ಸೂಚನೆ
Team Udayavani, Jun 11, 2018, 6:20 AM IST
ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲಾ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿಯು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಕಾರ್ಡ್ ಮಂಜೂರು ಮಾಡಲಿದೆ. ಈ ಕುರಿತು ಕಾಸರಗೋಡು ಆರ್‌ಟಿಓ ಬಾಬು ಜೋಸ್ ಅವರು ಕೆಎಸ್‌ಆರ್‌ಟಿಸಿಯ ಡಿಟಿಓ ಅವರಿಗೆ ಸೂಚನೆ ನೀಡಿದ್ದಾರೆ.
ಕಾಸರಗೋಡಿನಲ್ಲಿ ಜರಗಿದ ಜಿಲ್ಲಾ ಸ್ಟೂಡೆಂಟ್ ಟ್ರಾವೆಲ್ ಫೆಸಿಲಿಟಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ಮುಂದೆ ಕೆಎಸ್‌ಆರ್‌ಟಿಸಿಯ ಎಲ್ಲಾ ರೂಟ್‌ಗಳಲ್ಲಿ ಸಿಟಿ, ಟೌನ್, ಲಿಮಿಟೆಡ್ ಸ್ಟಾಫ್, ಆರ್ಡಿನರಿ ಸರ್ವೀಸ್‌ಗಳ ಬಸ್ ಸಂಖ್ಯೆಯನ್ನು ಪರಿಗಣಿಸದೆ 40 ಕಿಲೋ ಮೀಟರ್ ವರೆಗಿನ ಪ್ರಯಾಣಕ್ಕೆ ವಿನಾಯಿತಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.
ಇದುವರೆಗೆ ರಾಷ್ಟ್ರೀಕೃತ ರೂಟ್ ಆಗಿರುವ ಕಾಞಂಗಾಡು – ಕಾಸರಗೋಡು ಕರಾವಳಿ ಹೆದ್ದಾರಿಯಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ರಿಯಾಯಿತಿ ಮಜೂರುಗೊಳಿಸಲಾಗಿತ್ತು. ಇತರ ಎಲ್ಲಾ ರೂಟ್‌ಗಳಲ್ಲಿ ವಿನಾಯಿತಿ ದರದ ಕಾರ್ಡ್‌ಗಳನ್ನು ಯಾಕೆ ನೀಡುತ್ತಿಲ್ಲ ಎಂಬ ಜಿಲ್ಲಾಧಿಕಾರಿಯವರ ಪ್ರಶ್ನೆಗೆ ಇದೇ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಂದ ಧನಾತ್ಮಕ ಉತ್ತರ ಲಭಿಸಿದೆ.
ಅಲ್ಲದೆ ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಹೊಸ ನಿರ್ಧಾರವನ್ನು ಅಂಗೀಕರಿಸಲಾಯಿತು.ಒಂದೇ ಒಂದು ಕೆಎಸ್‌ಆರ್‌ಟಿಸಿ ಬಸ್ ಮಾತ್ರ ಸರ್ವೀಸ್ ನಡೆಸುವ ಹಲವಾರು ಸ್ಥಳಗಳು ಜಿಲ್ಲೆಯಲ್ಲಿವೆ. ಅಲ್ಲೆಲ್ಲಾ ಫುಲ್ ಚಾರ್ಜ್ ನೀಡಿ ವಿದ್ಯಾರ್ಥಿಗಳು ಪ್ರಯಾಣ ನಡೆಸಬೇಕಾದ ಪರಿಸ್ಥಿತಿ ಇರುವುದಾಗಿಯೂ ಅಲ್ಲದೆ ಮುಂದಿನ ದಿನಗಳಲ್ಲಿ ಅದನ್ನು ಪರಿಹರಿಸುವುದಾಗಿಯೂ ಆರ್‌ಟಿಓ ಸಭೆಯಲ್ಲಿ ತಿಳಿಸಿದರು.
ಜೂನ್ 15ರ ವರೆಗೆ ಈಗಿರುವ ಪಾಸ್ ಬಳಸಿಕೊಂಡು ಬಸ್‌ಗಳಲ್ಲಿ ಮಕ್ಕಳಿಗೆ ಉಚಿತ ಪ್ರಯಾಣ ಮಂಜೂರುಗೊಳಿಸಲು ಸಭೆಯಲ್ಲಿ ಮಹತ್ವದ ನಿಧಾರಕ್ಕೆ ಬರಲಾಯಿತು.
ಖಾಸಗಿ ಸಂಸ್ಥೆಗಳು, ಪ್ಯಾರಲಲ್ ಕಾಲೇಜುಗಳು, ಅಂಗೀಕೃತ ಖಾಸಗಿ ಶಿಕ್ಷಣ ಸಂಸ್ಥೆಗಳು ಮೊದಲಾದವುಗಳನ್ನು ಹೊರತುಪಡಿಸಿ ಎಲ್ಲಾ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರು ನೀಡುವ ಉಚಿತ ಪ್ರಯಾಣ ಕಾರ್ಡ್, ಐಡೆಂಟಿಂಟಿ ಕಾರ್ಡ್ ಬಳಸಿಕೊಂಡು ಬಸ್‌ಗಳಲ್ಲಿ ಪ್ರಯಾಣ ವ್ಯವಸ್ಥೆ ಮಾಡಿಕೊಡಲು ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಡ್ಮಿಶನ್ ಪೂರ್ಣಗೊಂಡ ಬಳಿಕ 15 ದಿನಗಳೊಳಗೆ ನೂತನ ಪಾಸ್‌ಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಜಾದಿನ ಉಚಿತ ಪ್ರಯಾಣ
ಶೈಕ್ಷಣಿಕ ಅಗತ್ಯಗಳಿಗಾಗಿ ರಜಾದಿನಗಳಂದು ಕೂಡ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಮಂಜೂರುಗೊಳಿಸಲಾಗುವುದು. ಬಸ್‌ಗೆ ಹತ್ತಲು ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಸರತಿ ಸಾಲಿನಲ್ಲಿ ನಿಲ್ಲಿಸಿ ತೊಂದರೆ ಕೊಡಬಾರ ದೆಂದು ನಿರ್ದೇಶಿಸಲಾಗಿದೆ. ಯಾವುದೇ ದೂರುಗಳಿದ್ದಲ್ಲಿ ಆರ್‌ಟಿಓ ಅವರ ಮೊಬೈಲ್ ನಂಬರ್ (8547639014) ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾ ಸ್ಟೂಡೆಂಟ್ಸ್ ಟ್ರಾವೆಲ್ ಫೆಸಿಲಿಟಿ ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ತಿಳಿಸಿದ್ದಾರೆ. ಶಾಲೆಗಳಲ್ಲಿ ಮಾದಕವಸ್ತುಗಳ ಬಳಕೆ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಬಲವಾಗಿ ಪ್ರತಿಭಟಿಸಬೇಕು ಎಂದು ಜಿಲ್ಲಾ ಕಲೆಕ್ಟರ್ ಇದೇ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.