ಭಾರತೀಯ ಕಲೆ ಸಂಸ್ಕೃತಿಯ ವಾಹಕ: ಗಣಪತಿ ಭಟ್
Team Udayavani, May 15, 2019, 6:20 AM IST
ಕುಂಬಳೆ: ಭಾರತೀಯ ಕಲೆ ಎಂಬುದು ಸಂಸ್ಕೃತಿಯ ಪ್ರವಾಹಕ. ಯಾವುದೇ ಕಲೆಗೆ ಅದರದ್ದೇ ಆದ ಮಹತ್ವವಿದೆ.ಕಲೆಯನ್ನು ಪೋಷಿಸಿ ರಕ್ಷಿಸುವ ಕಾರ್ಯ ನಮ್ಮಿಂದಾಗಬೇಕಿದೆ ಎಂದು ಆವಳಮಠ ಕ್ಷೇತ್ರದ ಪ್ರಭಾರಿ ಮೊಕ್ತೇಸರ ಗಣಪತಿ ಭಟ್ ಹೇಳಿದರು.
ಆವಳಮಠ ಶ್ರೀ ದುರ್ಗಾಸದನದಲ್ಲಿ ನಡೆದ ಶ್ರೀ ದುರ್ಗಾ ಸಪ್ತಸ್ವರ ಸಿಂಗಾರಿ ಮೇಳದ ಪಾದಾರ್ಪಣೆ ಕಾರ್ಯಕ್ರಮದಂಗವಾಗಿ ನಡೆದ ಸಭಾ ಕಾರ್ಯಕ್ರಮ ಮತ್ತು ಕಲಾವಿದರನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಎಳೆ ವಯಸ್ಸಿನಲ್ಲೇ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಲ್ಲಿ ಕಲೆಗಳು ಪ್ರಬುದ್ಧವಾಗಿ ಬೆಳೆಯುತ್ತವೆ. ಕಳೆದ ನಾಲ್ಕು ತಿಂಗಳಿನಿಂದ ದೇವಸ್ಥಾನದ ಪರಿಸರದಲ್ಲಿ ಕೇರಳ ಚೆಂಡೆಯನ್ನು ಅಭ್ಯಸಿಸಿ,ಹಲವು ಆಯಾಮಗಳಲ್ಲಿ ಪಳಗಿದ ವಿದ್ಯಾರ್ಥಿಗಳನ್ನು ಮತ್ತು ತರಬೇತುದಾರ ಶ್ರಮವನ್ನು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ರಿಸರ್ವ್ ಬ್ಯಾಂಕಿನ ವಿಶ್ರಾಂತ ಅಧಿಕಾರಿ ಲಕ್ಷ್ಮೀನಾರಾಯಣ ಭಟ್ ಮಾತನಾಡಿ ಸತತ ಪ್ರೋತ್ಸಾಹ ಮತ್ತು ಪರಿಶ್ರಮದ ಮೂಲಕ ಕಲೆಯನ್ನು ಗುರುವಿನ ಮೂಲಕ ತಮ್ಮದಾಗಿಸಿಕೊಂಡವರಿಗೆ ಶುಭಹಾರೈಸಿದರು. ವಿಭಿನ್ನ ಮತ್ತು ಅಪರೂಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ಸಾûಾತ್ಕರಿಸಲು ಸಾಧ್ಯವಾಗಬೇಕಿದೆ ಎಂದರು. ಸಿಂಗಾರಿ ಮೇಳದ ಮುಖ್ಯ ತರಬೇತುದಾರ ರಾಜೇಶ್ ಪಾಂಡಿ, ಯಕ್ಷಗಾನ ಹಿಮ್ಮೇಳ ಕಲಾವಿದ ಶೇಣಿ ಸುಬ್ರಹ್ಮಣ್ಯ ಭಟ್, ಪಾರಂಪರಿಕ ಕೊಂಬು ವಾದಕ ಲಕ್ಷ್ಮಣ ಆವಳ ಸಾಗು ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮ್ಮಾನಿತ ಸಿಂಗಾರಿ ಮೇಳದ ತರಬೇತುದಾರ ರಾಜೇಶ್ ಪಾಂಡಿ ಮಾತನಾಡಿ ಕೇರಳದ ಹಲವು ಸಾಂಸ್ಕೃತಿಕ ಹಾಗೂ ಜನಪದ ಕಲೆಗಳು ಇಂದು ವಿಶ್ವವಿಖ್ಯಾತಿ ಹೊಂದಿವೆ. ಇಂತಹ ಕಲೆಗಳಲ್ಲಿ ಒಂದು ಸಿಂಗಾರಿ ಮೇಳವಾಗಿದ್ದು ಹಲವು ರಾಜ್ಯಗಳ ಸಹಿತ ಹೊರದೇಶಗಳಲ್ಲಿ ಸಿಂಗಾರಿ ಮೇಳಗಳು ಮೇಳೈಸಿವೆ ಎಂದರು.
ಶರೀರಕ್ಕೆ ಉತ್ತಮ ವ್ಯಾಯಾಮ ಸಹಿತ ಮನಸ್ಸಿಗೆ ಮುದ ನೀಡುವ ಸಿಂಗಾರಿ ಮೇಳದ ಚೆಂಡೆ ವಾದನವು ಹೊಸತನದ ಮೂಲಕ ಜನರ ಮನಸ್ಸನ್ನು ಗೆದ್ದಿದೆ ಎಂದರು.
ಸುಮಾರು 25 ವರ್ಷಗಳ ಹಿಂದೆ ಆರಂಭಗೊಂಡ ಸಿಂಗಾರಿ ಮೇಳವು ತಮಿಳುನಾಡಿನ ನೆಯ್ನಾಂಡಿ ಮೇಳದಿಂದ ಪ್ರಭಾವಿತವಾಗಿದೆ. ವಿಜಯನ್ ಮಾರಾರ್ ಅವರು ಎರ್ನಾಕುಳಂನ ಪರವೂರಿನಲ್ಲಿ ಆರಂಭಿಸಿದ ಸಿಂಗಾರಿ ಮೇಳ ಪ್ರದರ್ಶನಗಳು ಸಮಾನತೆಯ ಅಂಶವನ್ನು ಸಾರುವುದೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.