ಕೃಷಿ ಅಭಿವೃದ್ಧಿಯಲ್ಲಿ ಸಮಗ್ರ ತರಕಾರಿ ಬೆಳೆ ಯೋಜನೆ
Team Udayavani, Jun 5, 2019, 6:10 AM IST
ಕಾಸರಗೋಡು: ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆಯ ಸಮಗ್ರ ತರಕಾರಿ ಅಭಿವೃದ್ಧಿ ಯೋಜನೆಯ ಪ್ರಕಾರ ಹಂತಗಳಲ್ಲಿ ಜಿಲ್ಲೆಗೆ 2.50 ಕೋಟಿ ರೂ. ಮಂಜೂರು ಮಾಡಲಾಗಿದೆ.
“ಓಣತ್ತಿನ್ ಒರು ಮುರ ಪಚ್ಚಕ್ಕರಿ (ಓಣಂ ಹಬ್ಬಕ್ಕೆ ಒಂದಷ್ಟು ಜೈವಿಕ ತರಕಾರಿ)’ ಎಂಬ ಯೋಜನೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಓಣಂ ಹಬ್ಬಕ್ಕಾಗಿ ವಿಷರಹಿತ ತರಕಾರಿ ಬೆಳೆಯುವ ಉದ್ದೇಶದಿಂದ ಹಿತ್ತಿಲಲ್ಲೇ ನೆಟ್ಟು ಬೆಳೆಸುವ ಈ ಯೋಜನೆಗಾಗಿ 2,35,000 ತರಕಾರಿ ಬೀಜಗಳನ್ನು ಶಾಲೆಯ ಮಕ್ಕಳಿಗೆ, ಕೃಷಿಕರಿಗೆ ಮತ್ತು ಸ್ವಯಂಸೇವಾ ಸಂಘಟನೆಗಳಿಗೆ ಜಿಲ್ಲೆಯಲ್ಲಿ ವಿತರಿಸಲಾಗಿದೆ. ಇದಲ್ಲದೆ 7 ಲಕ್ಷ ತರಕಾರಿ ಸಸಿಗಳನ್ನು ಜಿಲ್ಲೆಯಲ್ಲಿ ಉಚಿತವಾಗಿ ವಿತರಣೆ ನಡೆಸಲಾಗಿದೆ. ವಾಣಿಜ್ಯೀ ಕರಣದ ಹಿನ್ನೆಲೆಯಲ್ಲಿ ತರಕಾರಿ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ 5 ಹೆಕ್ಟೇರ್ ಕ್ಲಸ್ಟರ್‌ಗಳನ್ನು ಕೃಷಿ ಭವನ ಮಟ್ಟದಲ್ಲಿ ರಚಿಸಲಾಗಿದೆ. ಕ್ಲಸ್ಟರ್ ಒಂದಕ್ಕೆ 75 ಸಾವಿರ ರೂ. ಆರ್ಥಿಕ ಸಹಾಯ ಒದಗಿಸಲಾಗುವುದು. ಜಿಲ್ಲೆಯಲ್ಲಿ ಈ ವರ್ಷ ಇಂಥ 75 ಕ್ಲಸ್ಟರ್‌ಗಳಿಗೆ ಆರ್ಥಿಕ ಸಹಾಯ ಲಭಿಸಲಿದೆ.
ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ನಡೆಸುವ ನಿಟ್ಟಿನಲ್ಲಿ ಹೆಕ್ಟೇರ್‌ಗೆ 30 ಸಾವಿರ ರೂ. ಆರ್ಥಿಕ ಸಹಾಯ ನೀಡಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 70 ಹೆಕ್ಟೇರ್ ಬಂಜರು ಭೂಮಿಯಲ್ಲಿ ಕೃಷಿ ನಡೆಸಲು ಸಹಾಯ ನೀಡಲಾಗುವುದು. ಜಿಲ್ಲೆ ಯಲ್ಲಿ 25 ಸೆಂಟ್ಸ್‌ಗಿಂತ ಕಡಿಮೆಯಲ್ಲದ ಜಾಗದಲ್ಲಿ ತರಕಾರಿ ಬೆಳೆಯುವ ಎಲ್ಲ ಕೃಷಿಕರಿಗೆ ಹೆಕ್ಟೇರ್‌ಗೆ 15 ಸಾವಿರ ರೂ. ಆರ್ಥಿಕ ಸಹಾಯ ನೀಡಲಾಗುವುದು. 283 ಹೆಕ್ಟೇರ್‌ಗೆ 42.45 ಲಕ್ಷ ರೂ. ಈ ಘಟಕಕ್ಕೆ ಜಿಲ್ಲೆಗಾಗಿ ಮಂಜೂರು ಮಾಡಲಾಗಿದೆ.
ಬೇಸಗೆ ಮತ್ತು ಮಳೆಗಾಲದಲ್ಲಿ ಬೆಳೆ ಸಂರಕ್ಷಣೆ ನಡೆಸುವ ನಿಟ್ಟಿನಲ್ಲಿ ರಚಿಸಲಾದ ರೀತಿಯಾಗಿರುವ ಮಳೆ ಮರ ಕೃಷಿ ಮೂಲಕ ವರ್ಷವಿಡೀ ತರಕಾರಿ ಕೃಷಿ ಸಾಧ್ಯವಾಗಿದ್ದು, ಉತ್ಪಾದನೆ ಹೆಚ್ಚಳವೂ ಸಾಧ್ಯವಾಗಲಿದೆ. 100 ಚ. ಮೀ. ವಿಸ್ತೀರ್ಣದ ಮಳೆಮರಕ್ಕೆ ಗರಿಷ್ಠ 50 ಸಾವಿರ ರೂ.ನ ಸಹಾಯ ದೊರೆಯಲಿದೆ. ಜಿಲ್ಲೆಯಲ್ಲಿ ಈ ವರ್ಷ ಇಂತಹ 35 ಮಳೆಮರ ಯೂನಿಟ್‌ಗಳಿಗೆ ಸಬ್ಸಿಡಿ ದೊರೆತಿದೆ.
ತರಕಾರಿ ಕೃಷಿಗೆ ಪ್ರೋತ್ಸಾಹ ನಿಡುವ ನಿಟ್ಟಿನಲ್ಲಿ ಕನಿಷ್ಠ ವೆಚ್ಚದಲ್ಲಿ, ಅತ್ಯುತ್ತಮ ನೀರಾವರಿ ಒದಗಿಸುವ ಬಗ್ಗೆ ಕಳೆದ ಆರ್ಥಿಕ ವರ್ಷ ಆರಂಭಿಸಲಾದ ಫ್ಯಾಮಿಲಿ ಡ್ರಿಪ್ ಇರಿಗೇಷನ್ ಸಿಸ್ಟಂ ಈ ವರ್ಷವೂ ಮುಂದುವರಿಸಲಾಗುವುದು. ಇಂತಹ ಕಿರು ನೀರಾವರಿ ಯೂನಿಟ್‌ಗಳಿಗೆ 7,500 ರೂ.ನಂತೆ ಸಬ್ಸಿಡಿ ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಇಂಥಾ 16 ಯೂನಿಟ್‌ಗಳನ್ನು ಸ್ಥಾಪಿಸಲಾಗುವುದು.
ತರಕಾರಿಗಳು ಹಾನಿಯಾಗದಂತೆ ಸುರಕ್ಷಿತವಾಗಿ ಇರಿಸುವ ವಿಧಾನವೇ ಕೂಲ್ ಚೇಂಬರ್. ಹೊರಗಡೆಯ ತಾಪಮಾನಕ್ಕಿಂತ 10-15 ಡಿಗ್ರಿ ಸೆಲಿÏಯಸ್ ಕಡಿಮೆ ತಾಪಮಾನ ಉಳಿಸಿಕೊಂಡು ಇದು ಒಂದು ವಾರದ ವರೆಗೂ ತರಕಾರಿ ಹಾಳಾಗದಂತೆ ಇರಿಸುತ್ತದೆ. ಇಂತಹ 38 ಯೂನಿಟ್‌ಗಳನ್ನು ಇರಿಸಲು ಉದ್ದೇಶಿಸಲಾಗಿದೆ.
ಆಯಾ ಪಂಚಾಯತ್‌ಗಳು ತಮಗೆ ಬೇಕಾದ ತರಕಾರಿ ಸಸಿಗಳನ್ನು ತಮ್ಮಲ್ಲೇ ಉತ್ಪಾದಿಸುವ ಕಿರು ತರಕಾರಿ ನರ್ಸರಿಗಳ ಸ್ಥಾಪನೆಗಾಗಿ 1.25 ಲಕ್ಷ ರೂ. ಮಂಜೂರು ಮಾಡಲಾಗುದೆ. 50 ಚ. ಮೀಟರ್ ಯೂನಿಟ್‌ಗೆ 70 ಸಾವಿರ ರೂ. ಸಬ್ಸಿಡಿ ಮಂಜೂರು ಮಾಡಲಾಗಿದೆ. ಶಾಲೆಗಳ ಸಹಿತ ಕಡೆಗಳಲ್ಲಿ 10 ಸೆಂಟ್ಸ್ ಗಿಂತ ಕಡಿಮೆಯಲ್ಲದ ಜಾಗದಲ್ಲಿ ತರಕಾರಿ ಕೃಷಿ ನಡೆಸಲು 5 ಸಾವಿರ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ 100 ಸಂಸ್ಥೆಗಳಿಗೆ ಈ ರೀತಿ ಆರ್ಥಿಕ ಸಹಾಯ ವಿತರಣೆ ಮಾಡಲಾಗು ವುದು. ಇದಲ್ಲದೆ ಸರಕಾರಿ, ಖಾಸಗಿ ಸಂಸ್ಥೆàಗಳ 25 ಸೆಂಟ್ಸ್‌ಗಿಂತ ಕಡಿಮೆಯಲ್ಲದ ತರಕಾರಿ ಕೃಷಿ ನಡೆಸಲು ಮೂಲಭೂತ ಸೌಲಭ್ಯ ಏರ್ಪಡಿಸುವ ನಿಟ್ಟಿನಲ್ಲಿ ಒಂದು ಲಕ್ಷ ರೂ. ವರೆಗೆ ಆರ್ಥಿಕ ಸಹಾಯ ನೀಡಲಾಗುವುದು. ಜಿಲ್ಲೆಗೆ ಈ ಘಟಕಕ್ಕೆ 8 ಲಕ್ಷ ರೂ. ಮಂಜೂರು ಮಾಡಲಾಗಿದೆ.
ವಾಣಿಜ್ಯ ಸಂಸ್ಥೆಗಳಲ್ಲಿ ತರಕಾರಿ ಕೃಷಿ ನಡೆಸುವ ಕೃಷಿಕರಿಗೆ ನೀರಾವರಿ ಸೌಲಭ್ಯಕ್ಕಾಗಿ ಪಂಪ್ ಸೆಟ್ ಖರಿದಿಗೆ ಶೇ.50 ಸಬ್ಸಿಡಿ ಸಹಿತ ಗರಿಷ್ಠ 10 ಸಾವಿರ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ 125 ಪಂಪ್ ಸೆಟ್ ಖರೀದಿಗೆ ಈ ರೀತಿಯ ಸಬ್ಸಿಡಿ ನೀಡಲಾಗುವುದು.
ರೋಗಬಾಧೆಗೆ ಜೈವಿಕ ಕೀಟನಾಶಕ ಸಿಂಪಡಣೆ ನಡೆಸುವ ನಿಟ್ಟಿನಲ್ಲಿ 160 ಸ್ಪ್ರೆàಯರ್‌ಗಳು 1500 ರೂ. ಸಬ್ಸಿಡಿ ರೂಪದಲ್ಲಿ ವಿತರಣೆ ನಡೆಸಲಾಗುವುದು. ನೂತನ ತಾಂತ್ರಿಕ ವಿದ್ಯೆ ಕೃಷಿ ತಾಣಗಳಲ್ಲಿ ಬಳಸುವ ನಿಟ್ಟಿನಲ್ಲಿ ಪ್ರೊಜೆಕ್ಟ್ ಹಿನ್ನೆಲೆಯಲ್ಲಿ 3 ಲಕ್ಷ ರೂ. ವರೆಗೆ ಮಂಜೂರು ಮಾಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.