‘ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವದ್ದು’
ಚಿನ್ಮಯ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ
Team Udayavani, Jun 22, 2019, 6:09 AM IST
ಕಾಸರಗೋಡು: ಭಾರತೀಯ ಪರಂಪರೆಯಲ್ಲಿ ಇಂದಿಗೂ ಉಳಿದು ವಿಶ್ವ ವಿಖ್ಯಾತಿ ಹೊಂದಿದ ಅತಿ ಶ್ರೇಷ್ಠ ಸಂಪತ್ತಾಗಿದೆ ಯೋಗ. ಯಮ, ನಿಯಮ, ಆಸನ, ಪ್ರಾಣಾ ಯಾಮ, ಪ್ರತ್ಯಾಸಾರ, ಧಾರಣ ಧ್ಯಾನ, ಸಮಾಧಿಗಳ ಮೂಲಕ ಬಾಹ್ಯ ಹಾಗೂ ಆಂತರ್ಯ ಸಾಧನಗಳಲ್ಲಿ ಶಿಸ್ತನ್ನು ಅಳವಡಿಸಿ ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವವಾದುದು ಎಂದು ಯೋಗಾಚಾರ್ಯ ಶಿವರಾಮ ಭಟ್ ಅಭಿಪ್ರಾಯಪಟ್ಟರು.
ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 25 ವರ್ಷಗಳ ತನ್ನ ಯೋಗಾಭ್ಯಾಸದ ಅನುಭವವನ್ನು ಹೇಳುತ್ತಾ ಜೀವನದಲ್ಲಿ ಎಲ್ಲ ಸುಖಗಳನ್ನು ಅನುಭವಿಸುತ್ತಾ ಅನಾರೋಗ್ಯಕ್ಕೆ ದಾಸರಾಗುವವರು ಕೊನೆಗೆ ಮೊರೆ ಹೋಗುವುದು ಯೋಗಕ್ಕೆ. ಈಗ ವರ್ಷದಿಂದ ವರ್ಷಕ್ಕೆ ಯೋಗಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ ಯೋಗವನ್ನು ಅಭ್ಯಸಿಸುವವರಿಗೆ ಮಾತ್ರ ಶಾರೀರಿಕ, ಮಾನಸಿಕ ಆಧ್ಯಾತ್ಮಿಕತೆಗಳ ಸಮ್ಮಿಲನವನ್ನು ಪತಂಜಲಿಯ ಯೋಗ ಸೂತ್ರದಿಂದ ಗಳಿಸಬಹುದು ಎಂಬುದು ಸ್ವತ: ಅನುಭವಕ್ಕೆ ಬರುವುದು ಎಂದರು.
ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಸಭೆಯನ್ನುದ್ದೇಶಿಸಿ ಮಾತನಾಡಿ, ಜೂನ್ 21ನ್ನೇ ಯೋಗ ದಿನವನ್ನಾಗಿ ನಮ್ಮ ಪ್ರಧಾನ ಮಂತ್ರಿಗಳು ಆಯ್ಕೆ ಮಾಡಿದುದರ ಹಿನ್ನೆಲೆಯ ಬಗ್ಗೆ ತಿಳಿಸಿದರು. ಮೊದಲನೆಯದಾಗಿ ಅಂದು ಮಹರ್ಷಿ ಪತಂಜಲಿಯ ಜನ್ಮದಿನ ಜೂನ್ 21 ರಂದು. ಅತ್ಯಂತ ದೀರ್ಘ ದಿನವೂ ಆಗಿದೆ. ಪ್ರಾಚೀನ ಭಾರತೀಯರು ಮನಸ್ಸು ಶರೀರಗಳಿಗೆ ಸಂಬಂಧವಿಲ್ಲ. ಅವು ಪರಸ್ಪರ ಸಂಧಿಸಿದರೆ ಸಂದಿಗ್ಧಗಳಿಗೆ ಎಡೆಯಾಗುವುದೆಂಬುದನ್ನು ನಿರಾಕರಿಸಿದ ಸಂಶೋಧಕರು ಮನಸ್ಸು ಹಾಗೂ ಶರೀರಕ್ಕೆ ನಿಕಟವಾದ ಸಂಬಂಧವಿದೆ. ಅವೆರಡು ಪರಸ್ಪರ ಜೊತೆಯಾಗಿ ಕಾರ್ಯ ಪ್ರವೃತ್ತಗೊಂಡರೆ ಮಾನಸಿಕ ಶಾರೀರಿಕ ಹಾಗೂ ಬೌದ್ಧಿಕ ಸಮೀಕರಣ ಏರ್ಪಡುವುದು ಎಂದು ಸಾಧಿಸಿ ತೋರಿಸಿದರು. ಆದುದರಿಂದಲೇ ಭಾರತೀಯ ಪರಂಪರೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಯೋಗವನ್ನು ಪತಂಜಲಿಯವರು ಶಾಸ್ತ್ರೀಕರಿಸಿ ಜಗತ್ತಿಗೆ ಯೋಗ ಶಾಸ್ತ್ರವನ್ನು ಅದರಿಂದಾಗುವ ಪ್ರಯೋಜನಗಳನ್ನೂ ಪರಿಚಯಿಸಿದರು. ಇದನ್ನು ಮನಗಂಡು ಯೋಗ ಶಿಕ್ಷಣವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದರು. ಸಿ.ಬಿ.ಎಸ್. ಇ. ಪಠ್ಯ ಪದ್ಧತಿಯಲ್ಲಿ ಯೋಗಕ್ಕೆ ಒಂದು ಪ್ರತ್ಯೇಕ ವೇಳೆಯನ್ನೇ ನಿಗದಿ ಪಡಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಶಾರೀರಿಕ ಮಾನಸಿಕ ಬೌದ್ಧಿಕ ಬೆಳವಣಿಗೆಗಾಗಿ ಯೋಗಾಭ್ಯಾಸ ಅನಿವಾರ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಯೋಗಾಸನದ ವಿವಿಧ ಭಂಗಿಗಳನ್ನು ಅಷ್ಟಾಂಗ ಯೋಗದ ಮಹತ್ವವನ್ನು ಸಾರುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಆಯಿಷತ್ ಹುದ ನಿರೂಪಿಸಿ. ಆಯಿಷ ಅಫ್ನ ಸ್ವಾಗತಿಸಿದರು. ಸಾಹಿಲ್ ಫರ್ದೀನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.