ಅಂತರಂಗದ ದೀಪ ಪ್ರಜ್ವಲಿಸುವುದು ಧರ್ಮ: ಒಡಿಯೂರು ಶ್ರೀ
Team Udayavani, Apr 9, 2019, 6:30 AM IST
ಕಾಸರಗೋಡು: ದೇಗುಲಗಳೆಂದರೆ ಶಾಶ್ವತವಾದ ನಂದಾದೀಪವಿದ್ದಂತೆ. ದೀಪ ಬೆಳಗಿಸುವುದೆಂದರೆ ದೇವರ ಕಾರ್ಯಕ್ಕೆ ಚಾಲನೆ ಸಿಕ್ಕಿತು ಎಂದರ್ಥ. ಹಾಗೆಯೇ ಪ್ರತಿಯೊಬ್ಬರೂ ಬಹಿರಂಗದ ದೀಪವನ್ನು ಬೆಳಗಿಸುವಂತೆ ಅಂತರಂಗದ ದೀಪವನ್ನು ಸದಾ ಪ್ರಜ್ವಲಿಸುವಂತೆ ಮಾಡುವುದು ಧರ್ಮ. ನಮಗೆಲ್ಲ ಬೇಕಾಗಿರುವುದು ಆಧ್ಯಾತ್ಮದ ಬೆಳಕು. ಈ ಬೆಳಕು ನಿರಂತರ ಬೆಳಗುವಂತಾದರೆ ನಮ್ಮಿಂದ ಸತ್ಕಾರ್ಯ ಮಾಡಲು ಪ್ರೇರಣೆ ಲಭಿಸಿದಂತೆ. ನಮ್ಮ ಸಂಪತ್ತಿನ ಒಂದು ಪಾಲು ದೇವರ ಕಾರ್ಯಕ್ಕೆ ದಾನ ಮಾಡುವ ಮನಸ್ಸು ಇದರಿಂದ ಸೃಷ್ಟಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.
ಪಿಲಿಕುಂಜೆಯ ಶ್ರೀ ಜಗದಂಬಾ ದೇವೀ ಕ್ಷೇತ್ರದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ನೂತನ ಗೋಪುರ ಸಮರ್ಪಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೈದು ಉದ್ಘಾಟಿಸಿ ಸ್ವಾಮೀಜಿ ಅವರು ಮಾತನಾಡಿದರು.
ಕ್ಷೇತ್ರ ಜೀರ್ಣೋದ್ಧಾರ ಹಾಗೂ ಇಂತಹ ಗೋಪುರ ನಿರ್ಮಾಣಗಳಿಗೆ ದಾನಿಗಳ ಉದಾರತೆಯೇ ಕಾರಣ. ದಾನಿಗಳೊಂದಿಗೆ ಸೇವಾ ತತ್ಪರರು ಕೈಜೋಡಿಸುವಾಗ ಅಲ್ಲಿ ಸಾರ್ಥಕ ಕಾರ್ಯಗಳು ನೆರವೇರಲು ಸಾಧ್ಯ. ಇದರ ಪ್ರತ್ಯಕ್ಷ ಉದಾಹರಣೆಯನ್ನು ಈ ಜಗದಂಬಾ ದೇವಿ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ.
ಧರ್ಮದ ಆಚರಣೆಯ ಸಂದೇಶ ನೀಡುವ ದೇವಾಲಯಗಳನ್ನು ಸಂರಕ್ಷಿಸುವುದು ಕೂಡ ನಮ್ಮ ಕರ್ತವ್ಯ. ಭಕ್ತಿ ಭಾವದ ಎಣ್ಣೆಯಿಂದ ಧರ್ಮವೆಂಬ ದೀಪವನ್ನು ಸದಾ ಸಮಾಜದಲ್ಲಿ ಬೆಳಗಿಸುವ ಕಾರ್ಯಕ್ಕೆ ಇಂತಹ ಕಾರ್ಯಕ್ರಮದಿಂದ ಪ್ರೇರಣೆ ಲಭಿಸಲಿ ಎಂದು ಸ್ವಾಮೀಜಿಯವರು ಆಶೀರ್ವದಿಸಿದರು.
ಸಮರ್ಪಣೆಯಿಂದ ಜೀವನ ಸಾರ್ಥಕ. ಭಕ್ತರ ಸಮರ್ಪಣೆಯ ಮನೋಭಾವ ವೃದ್ಧಿಗೊಂಡಿರುವುದರಿಂದಲೇ ಇಂದು ಕ್ಷೇತ್ರಗಳ ಪುನರ್ ನಿರ್ಮಾಣಗಳು ಯಶಸ್ವಿ ಯಾಗಲು ಕಾರಣವಾಗಿದೆ. ಕ್ಷೇತ್ರಗಳ ವ್ಯವಸ್ಥಿತ ನಿರ್ವಹಣೆಗೆ ಇಂತಹ ಗೋಪುರಗಳು ಪೂರಕವಾಗಿವೆೆ. ಇದಕ್ಕಾಗಿ ದುಡಿದ ಶ್ರೀದೇವಿಯ ಭಕ್ತರು ಅಭಿನಂದನಾರ್ಹರು ಎಂದು ಆರ್‌ಎಸ್‌ಎಸ್ ಮುಖಂಡ ಗೋಪಾಲ ಚೆಟ್ಟಿಯಾರ್ ಹೇಳಿದರು.
ಸರ್ವ ಭಾಷೆಯ ಮಾತೃ ರೂಪವೇ ಸಂಸ್ಕೃತ. ಆದ ಕಾರಣ ನಾನು ಸಂಸ್ಕೃತ ಭಾಷೆಯಿಂದಲೇ ಭಾಷಣ ಆರಂಭಿಸಿದ್ದೇನೆ ಎಂದ ಸನಲ್ ಕುಮಾರ್ ಅವರು ಅನಂತರ ಮಲಯಾಳದಲ್ಲಿ ಭಾಷಣ ಮಾಡಿದರು.
ಲೆಕ್ಕಪರಿಶೋಧಕ ಸಂದೀಪ್, ಶ್ರೀ ಜಗದಂಬಾ ದೇವಿ ಕ್ಷೇತ್ರದ ಗೌರವಾಧ್ಯಕ್ಷ ಯು.ಎಸ್. ಬಾಲನ್ ಉಪಸ್ಥಿತರಿದ್ದರು. ಜಗದಂಬಾ ದೇವೀ ಕ್ಷೇತ್ರ ಅಧ್ಯಕ್ಷ ಎಸ್.ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿದರು.
ಕೆ.ಎನ್. ವೇಣುಗೋಪಾಲ್ ಸ್ವಾಗತಿಸಿ ದರು. ಸುಜಿತ್ ಪಿಲಿಕುಂಜೆ ವಂದಿಸಿದರು. ಪಯಸ್ವಿನಿ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.