“ಮೌಲ್ಯಯುತ ಶಿಕ್ಷಣ ಜತೆ ಸಂಸ್ಕಾರ ರೂಢಿಸಲು ಕಲಿಸುವುದು ಅಗತ್ಯ
Team Udayavani, Jun 9, 2019, 5:50 AM IST
ಕುಂಬಳೆ: ಮೀಯಪದವು ವಿದ್ಯಾ ವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಾಲಿ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಸಂಭ್ರಮದಿಂದ ಜರಗಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಪ್ರೇಮಾ.ಕೆ.ಭಟ್ ತೊಟ್ಟೆತ್ತೋಡಿ ನೂತನವಾಗಿ ದಾಖಲಾತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಶಿಕ್ಷಣ ಸ್ಥಾನಮಾನಗಳ ಜತೆಗೆ ಮೌಲ್ಯಯುತ ಸಂಸ್ಕಾರಗಳನ್ನು ರೂಢಿಸಲು ಕಲಿಸಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಹೊಳಪು ಕಾಣಬಹುದು. ಎಂದರು. ಕಾರ್ಯಕ್ರಮದಲ್ಲಿ ಎಸ್.ಪಿ.ಜಿ ಕನ್ವೀನರ್ ಇಬ್ರಾಹಿಂ ಹೊನ್ನಕಟ್ಟೆ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಲೇಕಳ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹಾಗೂ ಹಿರಿಯ ಅಧ್ಯಾಪಕ ಶಿವಶಂಕರ ಭಟ್ ಮತ್ತು ಲಲಿತಾ.ಬಿ ಉಪಸ್ಥಿತರಿದ್ದರು. ಸ,ಆರಂಭದ ಬಳಿಕ ಬಾಲಸುಬ್ರಹ್ಮಣ್ಯ ಭಟ್ ಕಡೆಂಕೋಡಿ ಹಾಗೂ ತೇಜಸ್ವಿನಿ ನಡೆಸಿಕೊಟ್ಟ ಮ್ಯಾಜಿಕ್ ಶೋ ವಿದ್ಯಾರ್ಥಿಗಳಲ್ಲಿ ಹುರುಪನ್ನು ಮೂಡಿಸಿತು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು.ಪ್ರಾಂಶುಪಾಲ ರಮೇಶ್.ಕೆ.ಎಸ್ ವಂದಿಸಿದರು.
“ಹೆತ್ತವರ ಪ್ರೋತ್ಸಾಹ ಮುಖ್ಯ’
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ.ಮಕ್ಕಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಶಿಕ್ಷಕರ ಶ್ರಮದೊಂದಿಗೆ ಹೆತ್ತವರ ಪ್ರೋತ್ಸಾಹವು ಮುಖ್ಯ ಲವಲವಿಕೆಯಿಂದ ಇರಲು ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದು ಎಸ್.ಪಿ.ಜಿ ಕನ್ವೀನರ್ ಇಬ್ರಾಹಿಂ ಹೊನ್ನಕಟ್ಟೆ, ಹೇಳಿದರು. ವಿದ್ಯಾರ್ಥಿಗಳು ಹೆತ್ತವರು ಮತ್ತು ಶಾಲಾ ಹಿತೆ„ಷಿಗಳನ್ನು ಸೇರಿಸಿಕೊಂಡು ಶಆಲೆಯನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.