ಕೌಟುಂಬಿಕ ಹಾಕಿ ಉತ್ಸವ ನಡೆಸದೆ ಇರುವುದು ಸರಿಯಲ್ಲ
Team Udayavani, Apr 26, 2019, 6:07 AM IST
ಮಡಿಕೇರಿ :ಪ್ರಕೃತಿ ಕೋಪದ ನೆಪದಿಂದ 22 ವರ್ಷಗಳ ಕೊಡವ ಕುಟುಂಬಗಳ ನಡುನ ಕೌಟುಂಬಿಕ ಹಾಕಿ ಹಬ್ಬವನ್ನು ಕೊಡವ ಹಾಕಿ ಅಕಾಡು ಕೈಬಿಟ್ಟಿರುವುದು ಉತ್ತಮ ಬೆಳವಣಿಗೆಯಲ್ಲ, ಇದರಿಂದ ಲಾಭವಾಗುವ ಬದಲು ಕೌಟುಂಬಿಕ ಹಾಕಿ ಉತ್ಸವದಲ್ಲಿ ರೆಕಾರ್ಡ್ ನಷ್ಟವಾಗಿದೆ ಎಂದು ಕೊಡಗು ಪ್ರಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಳೆಹಾನಿ ಸಂತ್ರಸ್ತ ಪ್ರದೇಶದ 14 ಕುಟುಂಬಗಳಲ್ಲಿ ಹೊಸ ಭರವಸೆಯನ್ನು ಮೂಡಿಸುವ ಉದ್ದೇಶದಿಂದ ಕಕ್ಕಬ್ಬೆಯ ಹೈಲ್ಯಾಂಡ್ ಕ್ಲಬ್ ನಾಪೆೊàಕುನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಇನ್ವಿಟೇಷನ್ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಹಾಕಿ ಅಕಾಡು ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಕೊಡಗು ಹಾಕಿ ಹಬ್ಬದ ತವರೂರು ಮಾತ್ರವಲ್ಲ ಹಾಕಿ ಕಲಿಗಳ ನಾಡು ಎಂದು ಖ್ಯಾತಿ ಗಳಿಸಿದೆ. ರಾಷ್ಟ್ರ ಹಾಗೂ ಅಂತರರಾóàಯ ಮಟ್ಟದ ಆಟಗಾರರನ್ನು ಜಿಲ್ಲೆ ಕೊಡುಗೆಯನ್ನಾಗಿ ನೀಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಭಾಗಮಂಡಲ ಮತ್ತು ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸುತಿಯ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಅವರು ಹೈಲ್ಯಾಂಡ್ ಕ್ಲಬ್ ನ ಪ್ರಯತ್ನವನ್ನು ಶ್ಲಾ ಸಿದರು. ನಡಿಕೇರಿಯಂಡ ತೇಜ್ ಪೂವಯ್ಯ ಮಾತನಾಡಿ ಕೊಡಗಿನ ಅಭಿವೃದ್ಧಿಯ ಕುರಿತು ಗಮನ ಸೆಳೆದರು.
ಹೈಲ್ಯಾಂಡ್ ಕ್ಲಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಸಿದ್ದರು. ಪ್ರಮುಖರಾದ ಕುಲ್ಲೇಟಿರ ಶಂಭು ಮಂದಪ್ಪ, ಹರೀಶ್ ಪೂವಯ್ಯ, ಕಾಡ್ಯಮಡ ಮನು ಸೋಮಯ್ಯ, ಕುಲ್ಲೇಟಿರ ಅರುಣ ಬೇಬ, ಡಾ|| ಪೂವಯ್ಯ, ಅದೇಂಗಡ ತೇಜ, ರಘು ಸೋಮಯ್ಯ, ನಾಟೋಳಂಡ ಶಂಭು, ಕಲಿಯಂಡ ನàನ್, ಚಕ್ಕೇರ ಸಚಿನ್, ಚೋಟೆರ ಅಯ್ಯಪ್ಪ, ಅಪ್ಪಾರಂಡ ಅಪ್ಪಯ್ಯ, ಕೇಟೋಳಿರ ಕುಟ್ಟಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.