ಬೇಸಗೆ ಧಗೆಗೆ ದಣಿವಾರಿಸುವ ಈರೋಳ್‌


Team Udayavani, Apr 26, 2019, 6:25 AM IST

erol

ಕಾಸರಗೋಡು: ದಿನದಿಂದ ದಿನಕ್ಕೆ ಬೇಸಗೆಯ ಕಾವು ಅಧಿಕಗೊಳ್ಳುತ್ತಿದ್ದು, ಬೇಸಗೆಯ ಧಗೆಯಿಂದ ದಣಿವಾರಿಸಿಕೊಳ್ಳಲು ಮತ್ತು ದೇಹವನ್ನು ತಂಪು ಮಾಡಿಕೊಳ್ಳಲು ಕಲ್ಲಂಗಡಿ ಎಷ್ಟು ನೆರವು ನೀಡುತ್ತದೋ ಅದೇ ರೀತಿಯಲ್ಲಿ “ಈರೋಳ್‌’ ಕೂಡ ಅಷ್ಟೇ ಪ್ರಯೋಜನಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಈರೋಳ್‌ಗೆ ಭಾರೀ ಬೇಡಿಕೆ ಕಂಡು ಬರುತ್ತಿದೆ. ತಾಳಿಕೊಳ್ಳಲಾಗದಷ್ಟು ಬಿಸಿಲ ಧಗೆಯಿಂದ ಬಸವಳಿದ ಜನರು ತಂಪು ಪಾನೀಯ, ಹಣ್ಣಿನ ರಸವನ್ನು ಸೇವಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬೇಸಗೆಯ ಬೇಗೆಗೆ ತಂಪು ನೀಡಬಲ್ಲ ಈರೋಳ್‌ಗೆ ಬೇಡಿಕೆ ಕುದುರಿದೆ.

ರಾಶಿ ರಾಶಿ ಈರೋಳ್‌
ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಬೇಸಗೆಯಿಂದ ತಾಳಿಕೊಳ್ಳಲಾಗದಷ್ಟು ಬೇಗೆ ಗೋಚರಿಸುತ್ತಿದೆ. ಇದರಿಂದ ದಣಿವಾರಿಸಲು ತಂಪು ಪಾನೀಯಗಳನ್ನು ಹೆಚ್ಚೆಚ್ಚು ಸೇವಿಸುವಂತಾಗಿದೆ. ಕಲ್ಲಂಗಡಿಯೂ ಬೇಡಿಕೆ ಕುದುರಿಸಿಕೊಂಡಿದೆ. ಈಗ ಇದರ ಜತೆಯಲ್ಲಿ ಈರೋಳ್‌ ಕೂಡಾ ಬೇಡಿಕೆಯನ್ನು ಪಡೆದುಕೊಂಡಿದೆ. ಕಾಸರಗೋಡು ನಗರದ ವಿವಿಧೆಡೆ ರಸ್ತೆ ಬದಿಗಳಲ್ಲಿ ಈರೋಳ್‌ ರಾಶಿ ಹಾಕಿ ಮಾರಾಟ ಬಿರುಸಿನಿಂದ ನಡೆಯುತ್ತಿದೆ.

ದಕ್ಷಿಣ ಕನ್ನಡದ ಈರೋಳ್‌; ತಮಿಳುನಾಡಿನ ವ್ಯಾಪಾರಿ
ತಮಿಳುನಾಡಿನ ಮುರುಗನ್‌ ಕರ್ನಾಟಕದಿಂದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯಿಂದ ಈರೋಳ್‌ ಸಂಗ್ರಹಿಸಿ ಕಾಸರಗೋಡಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಈ ವ್ಯಕ್ತಿ ಭಾಷಾ ಸಾಮರಸ್ಯದ ದ್ಯೋತಕವಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ಭಾಷೆಗಳನ್ನು ಸಲೀಸಾಗಿ ಮಾತನಾಡಬಲ್ಲ ಮುರುಗನ್‌ ಅವರನ್ನು ಒಂದರ್ಥದಲ್ಲಿ ಭಾಷಾ ಮೈತ್ರಿಯ ಪ್ರತಿನಿಧಿ ಎಂಬಂತೆಯೂ ಕಾಣಬಹುದು. ಈರೋಳು ಒಂದಕ್ಕೆ ರೂ. 10-20ರ ವರೆಗೆ ವಸೂಲಿ ಮಾಡುತ್ತಿದ್ದು, ಸಾಕಷ್ಟು ಬೇಡಿಕೆ ಇದೆ ಎಂದು ಮುರುಗನ್‌ ಹೇಳುತ್ತಿದ್ದಾರೆ.

ನಮ್ಮ ಕರಾವಳಿ ಪ್ರದೇಶದಲ್ಲಿ ಹಿಂದೆ ಕತ್ತೆತ್ತಿ ಎತ್ತ ನೋಡಿದರೂ ತಾಳೆ ಮರಗಳ ಸಾಲುಗಳು ಬಾನೆತ್ತರ ಚಾಚಿಕೊಂಡಿರುವುದನ್ನು ಕಾಣ ಬಹುದಿತ್ತು. ಆದರೆ ಇಂದು ಬಹುತೇಕ ಕಡೆಗಳಲ್ಲಿ ತಾಳೆ ಮರಗಳು ಅವಸಾನದ ಹಂತದಲ್ಲಿವೆ ಅಥವಾ ಅವಸಾನಗೊಂಡಿವೆಯೆಂದೇ ಹೇಳಬೇಕು.

ಹಿಂದೆ ಸಾಮಾನ್ಯವಾಗಿ ಗುಡ್ಡ ಪ್ರದೇಶ, ತೋಟಗಳ ಬದಿಗಳಲ್ಲಿ, ಗದ್ದೆಗಳ ಅಂಚಿನಲ್ಲಿ ಬೆಳೆಯುತ್ತಿದ್ದ ತಾಳೆ ಮರಗಳು ಸರಿಸುಮಾರು 35ರಿಂದ 50-60 ಅಡಿಗಳ ವರೆಗೆ ಬೃಹತ್‌ ಗಾತ್ರದಲ್ಲಿ ನೇರವಾಗಿ ಬೆಳೆಯುತ್ತಿದ್ದವು. ಇಂದು ವಿಶ್ವ ಮಾರುಕಟ್ಟೆಯಲ್ಲಿ ತಾಳೆಗೆ ಬಹು ಬೇಡಿಕೆ ಇದೆ. ಆದರೆ ನಮ್ಮ ಕರಾವಳಿ ಪ್ರದೇಶ ದಲ್ಲಿ ತಾಳೆ ಹಿಂದಿನ ಕಾಲದಿಂದಲೂ ಹೆಚ್ಚು ಬಳಕೆ ಯಲ್ಲಿದ್ದುದು ಭಟ್ಟಿ ಇಳಿಸಿದ ನಶೆ ಬರಿಸುವ ಮದ್ಯ ತಯಾರಿಗಾಗಿ. ಆದರೆ ಇಂದು ತಾಳೆಯಿಂದ ಭಟ್ಟಿ ಇಳಿಸುವ ಅನುಭವಿಗಳು ಮತ್ತು ಅದರ ಅಗತ್ಯದ ಸಾಧ್ಯತೆಗಳ ಕೊರತೆಯಿಂದ ಮದ್ಯಕ್ಕೆ ಬಳಸುವುದಿಲ್ಲ. ಇಂದು ಏನಿದ್ದರೂ ವಿಷಪೂರಿತ ಸರಕಾರಿ ಮದ್ಯ ಅಗ್ಗದಲ್ಲಿ ಲಭಿಸುವಾಗ ಶುದ್ಧ ಕೆಡುಕುಗಳಿಲ್ಲದ ಮದ್ಯದ ಬಗ್ಗೆ ಜನರಿಗೆ ಅರಿವಿಲ್ಲದಿರುವುದು ಆಶ್ಚರ್ಯವಲ್ಲ.

ಸ್ವಾತಂತ್ರಾನಂತರ ಉಂಟಾದ ಆಹಾರ ಕ್ರಾಂತಿಯ ವೇಳೆ ತಾಳೆ ಉತ್ಪನ್ನಗಳಿಂದ ತೈಲ ತೆಗೆದು ಬಳಸುವ ದೊಡ್ಡ ಕ್ರಾಂತಿಯೇ ನಡೆಯಿತು. ಆದರೆ ನಮ್ಮ ಕರಾವಳಿ ಭಾಗಗಳಲ್ಲಿ ತೈಲಕ್ಕೆ ಅನುಗುಣವಾದ ಮಟ್ಟದ ತಾಳೆ ಉತ್ಪನ್ನಗಳು ಕಂಡುಬಾರದ ಕಾರಣ ನಮ್ಮಲ್ಲಿನ ತಾಳೆಗೆ ಮಹತ್ವವಿಲ್ಲದಾಗಿ ಹಿಂದೆ ಸರಿಯುವಂತಾಯಿತು.

ತಾಳೆ ಮರ ತೀವ್ರ ಗಟ್ಟಿ ಸ್ವಭಾವದವು. ಆದ್ದರಿಂದ ನಮ್ಮ ಹಿರಿಯರು ಮನೆ, ಕೊಟ್ಟಿಗೆ ಸಹಿತ ವಿವಿಧ ಪೀಠೊಪಕರಣಗಳ ತಯಾರಿಗೆ ತಾಳೆ ಮರವನ್ನು ಬಳಸುತ್ತಿದ್ದರು. ಆದರೆ ಇಂದು ಕಂಡುಬರುತ್ತಿಲ್ಲ. ನೇರವಾಗಿ ಸ್ಥೂಲ ರೂಪದಲ್ಲಿ ಬೆಳೆಯುವುದರಿಂದ ತಾಳೆ ಮರಗಳ ಬಳಕೆ ಹಿಂದಿನ ಮನೆ ನಿರ್ಮಾಣಗಳಲ್ಲಿ ಅನುಕೂಲಕರವಾಗಿತ್ತು. ಇಂದು ತಾರಸಿಯ ಕಾರುಬಾರಿನ ನಡುವೆ ತಾಳೆ ಮರಗಳ ಬಳಕೆ ಅರಿವಿಲ್ಲದಾಗಿದೆ. ಮಳೆ ನೀರಿನ ಕೊರೆತ ತಡೆಯುವಲ್ಲಿ ಮತ್ತು ನೀರಿಂಗಿಸುವಿಕೆಯಲ್ಲಿ ತಾಳೆ ಮರಗಳು ಮಹತ್ವ ಪಡೆದಿವೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಜತೆಗೆ ನೆಟ್ಟು ಬೆಳೆಸುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ.

ಅವನತಿಯ ಹಂತದಲ್ಲಿ
ಮಳೆ ನೀರಿನ ಕೊರೆತ ತಡೆಯುವಲ್ಲಿ ಮತ್ತು ನೀರಿಂಗಿಸುವಿಕೆಯಲ್ಲಿ ತಾಳೆ ಮರಗಳು ಮಹತ್ವ ಪಡೆದಿವೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಆದರೆ ತಾಳೆ ಮರಗಳು ಅವನತಿಯ ಹಂತದಲ್ಲಿರುವುದು ಮಾತ್ರ ವಿಪರ್ಯಾಸ.

–  ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.