ಕಾಸರಗೋಡು ಮತ ಎಣಿಕೆಯ ಚಿಂತೆಯಲ್ಲಿ ಜನಪ್ರತಿನಿಧಿ..ಮೂಲೆಗುಂಪಾಯಿತೇ ಜಲನಿಧಿ.!?


Team Udayavani, May 18, 2019, 4:02 PM IST

1

ಬದಿಯಡ್ಕ : ನೆರೆ ಹಾವಳಿಯ ನಂತರ ಬಂದೊದಗಿದ ಇನ್ನೊಂದು ಕಂಟಕ ನೀರಿನ ಕ್ಷಾಮ..! ನೆರೆ ಹಾವಳಿಯಿಂದ ಮುಕ್ತಗೊಂಡು ಸಾವಿರದ ಒಂದು ದಿನ ಪೂರ್ತಿಗೊಳಿಸಿದ ಬೆನ್ನಲ್ಲೇ ಪ್ರಕೃತಿಯ ಇನ್ನೊಂದು ಪರೀಕ್ಷೆ…! ಕಡು ಬೇಸಗೆಯಲ್ಲಿ ನೀರಿಗಾಗಿ ಪರದಾಡುತ್ತಿರುವ ಜನತೆ, ಸುಡುವ ಬಿಸಿಲಿಗೆ ನೀರಿಲ್ಲದೆ ಗಂಟಲು ಒಡೆದು ಹೋಗುವ ಸ್ಥಿತಿ. ಇದು ಜಿಲ್ಲೆಯ ಪ್ರತಿಯೊಂದು ಗ್ರಾಮದ ಈಗಿನ ಅವಸ್ಥೆ.

ಅರ್ಧದಲ್ಲೇ ಮೊಟಕುಗೊಳ್ಳುವ ಯೋಜನೆಗಳು ಮಳೆಯ ಸುಳಿವಿಲ್ಲದಾಗ ವರ್ಷಗಳ ಹಿಂದೆ ಆರಂಭಿಸಿದ ಯೋಜನೆಗಳು ಸಕಾಲದಲ್ಲಿ ಪೂರ್ತಿಯಾಗಿರುತ್ತಿದ್ದಲ್ಲಿ ಅದೇ ಒಂದು ಆಶ್ವಾಸನೆಯಾಗುತ್ತಿತ್ತು. ಆದರೆ ಯಾಕಾಗಿಯೋ ಈ ಯೋಜನೆಗಳು ಎಲ್ಲಿಯೂ ತಲುಪದೆ ಹಾಗೇ ಉಳಿದಿವೆ. ಮತ ಯಾಚನೆಗಾಗಿ ಮನೆ ಮನೆಗಳಲ್ಲೂ ಭರವಸೆಯ ಹೊಸ್ತಿಲು ತುಳಿದವರು ಇಂದು ನಿರಾಸೆಯ ಕೂಪಕ್ಕೆ. ಮತ ಎಣಿಕೆಗೆ ದಿನ ಬಾಕಿಯಿದ್ದಂತೇ ಪಕ್ಷದ ನಾಯಕರಾಗಲೀ ಜನಪ್ರತಿನಿಧಿಗಳಾಗಲೀ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಸುಮ್ಮಗಾಗಿದ್ದಾರೆ. ಕಾಮಗಾರಿ ಪೂರ್ತಿಗೊಂಡ ಜಲನಿಧಿ ಯೋಜನೆಗಳು ಬಿಕೋ ಎನ್ನುತ್ತಿವೆ. ಪದೇ ಪದೇ ನಡೆಯುತ್ತಿರುವ ಉದ್ಯೋಗಸ್ಥರ ಸ್ಥಳಾಂತರ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳುವುದು, ಅಧಿಕಾರಿಗಳ ಅವಗಣನೆ ಮುಂತಾದವುಗಳು ಯೋಜನೆಗಳು ಅರ್ಧದಲ್ಲೇ ಮೊಟಕುಗೊಳ್ಳಲು ಮುಖ್ಯ ಕಾರಣಗಳಾಗಿವೆ.

ಬೋವಿಕ್ಕಾನ:- ವಿಳಂಬಗೊಳ್ಳುತ್ತಿರುವ ದೇಶೀಯ ಗ್ರಾಮೀಣ ಯೋಜನೆ
ಚೆಂಗಳ, ಮಧೂರು, ಮುಳಿಯಾರ್‌, ಮೊಗ್ರಾಲ್‌ ಪುತ್ತೂರು ಪಂಚಾಯತ್‌ ಗಳಿಗಿಗಾಗಿ ನೀರು ವಿತರಿಸಲು ದೇಶೀಯ ಗ್ರಾಮೀಣ ಯೋಜನೆ ಕಾಮಗಾರಿ ಪ್ರಾರಂಭಿಸಿ 6 ವರ್ಷಗಳೇ ಕಳೆಯಿತು. ಈವರೆಗೂ ನೀರು ವಿತರಿಸಲಾಗಲಿಲ್ಲ. ಪೂರ್ಣವಾಗಿ ಕಾಮಗಾರಿ ಪೂರ್ತಿಗೊಂಡರೂ ನಿಶ್ಚಿತ ಸಮಯದಲ್ಲಿ ಕಾಮಗಾರಿ ತೊಡಗದೇ ಇರುವುದರಿಂದ ಜಲಶುದ್ದಿಕರಣ ಘಟಕ ನಾಶವಾದುದು ಯೋಜನೆಗೆ ದೊಡ್ಡ ಹೊಡೆತ ಬಿದ್ದಂತಾಯಿತು. 2013 ರಲ್ಲಿ ಕಾಮಗಾರಿ ಪ್ರಾರಂಭಿಸಿ 2015 ರಲ್ಲಿ ಪೂರ್ತಿಗೊಳಿಸಬೇಕೆಂದು ಕರಾರಿನಲ್ಲಿ ತಿಳಿಸಲಾಗಿತ್ತು. ಪ್ಲಾಂಟೇಷನ್‌ ಕೋರ್ಪರೇಶನ್‌ನಿಂದ ಸ್ಥಳ ಖರೀದಿಸಲು ವಿಳಂಬವಾದುದು ಒಂದು ಕಾರಣವಾದರೆ ಕರಾರು ಸ್ವೀಕರಿಸಿದ ವ್ಯಕ್ತಿ ಹೆಚ್ಚಿನ ಮೊತ್ತ ಪಡೆದು ಕಾಮಗಾರಿಯನ್ನು ಅರ್ಧಕ್ಕೆ ಉಪೇಕ್ಷಿಸಿದುದರಿಂದ ನಬಾರ್ಡಿನ ಸಹಾಯವು ಸಿಗದಂತಾಯಿತು. ನುಸ್ರತ್‌ ನಗರದಲ್ಲಿ ನಿರ್ಮಿಸುವ 55 ದಶಲಕ್ಷ ಲೀಟರ್‌ ನೀರನ್ನು ಹಿಡಿದಿಡಲು ಸಾಧ್ಯವಿರುವ ಜಲಶುದ್ದೀಕರಣ ಘಟಕದ ಕಾಮಗಾರಿ ಪೂರ್ತಿಯಾದರೆ ಮಾತ್ರ ಈ ನಾಲ್ಕು ಪಂಚಾಯತುಗಳಲ್ಲಿ ನೀರು ವಿತರಿಸಲು ಸಾಧ್ಯ. 10 ತಿಂಗಳಿಗೆ ಈ ಕರಾರನ್ನು ಮುಂದೂಡಲಾಗಿದೆ.

ಚಟ್ಟಂಚಾಲ್‌:- ಯೋಜನೆಗೆ ಸ್ಥಳವೆಲ್ಲಿ..?
ಜಲನಿಧಿ ಯೋಜನೆಗೆ ಸ್ಥಳ ಇದುವರೆಗೂ ಲಭಿಸದ ಚೆಮ್ಮನ್ನಾಡ್‌ ಪಂಚಾಯತಿನ ಶುದ್ದಜಲ ಯೋಜನೆಯ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಇದರ ಜೊತೆಗೆ ಕಾಸರಗೋಡಿನ ನಗರಸಭೆಯ ಕಾಮಗಾರಿ ಭರದಿಂದ ಸಾಗುತ್ತಿರುವಾಗ ಚೆಮ್ಮನ್ನಾಡ್‌ ಪಂಚಾಯತ್‌ನಲ್ಲಿ ಮಾತ್ರ ಯೋಜನೆಗೆ ಸ್ಥಳ ಸಿಗದೇ ಇರುವುದು ವಿಪರ್ಯಾಸ. 26 ಲಕ್ಷ ಲೀಟರ್‌ನ, 17 ಲಕ್ಷ ಲೀಟರ್‌ನ ಎರಡು ಟ್ಯಾಂಕುಗಳನ್ನು ಚೆಮ್ಮನ್ನಾಡಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಮೊದಲ ಟಾಂಕಿ ದೇಳಿಯಲ್ಲಿಯೂ, ಎರಡನೆಯ ಟಾಂಕಿ ಚಟ್ಟಂಚಾಲ್‌ನಲ್ಲಿಯೂ ಸ್ಥಳ ನಿಗದಿ ಪಡಿಸಲಾಗಿದೆ. ಆದರೂ ಅಧಿಕಾರಿಗಳಿಂದ ಅನುಮತಿ ಲಭಿಸಿಲ್ಲ. ದೇಳಿಯಲ್ಲಿ ಸರಕಾರ ಸ್ಥಳವನ್ನು ಯೋಜನೆಗಾಗಿ ಮೀಸಲಿಡಲಾಗಿದೆ. ಇಲ್ಲಿಯ ಭೂ ಸಂಬಂಧಿ ದಾಖಲೆ ಪತ್ರಗಳಿಗಾಗಿ ಜಲ ಅಥೋರಿಟಿ ಕಾಯುತ್ತಿದೆ. ಇದರ ಕರಾರಿನ ಕಾಲಾವಧಿಯು ಕಳೆದ ಮಾರ್ಚಿನಲ್ಲಿ ಕೊನೆಗೊಂಡಿದೆ. ಪುನಃ 10 ತಿಂಗಳಿಗಾಗಿ ಕರಾರನ್ನು ಮುಂದೂಡಲಾಗಿದೆ ಹಾಗೂ ಇನ್ನೂ ಪೂರ್ತಿಗೊಳಿಸಲಾಗದಿದ್ದಲ್ಲಿ ಚೆಮ್ಮನ್ನಾಡನ್ನು ಬಿಟ್ಟು ಉಳಿದಲ್ಲಿಗೆ ನೀರು ವಿತರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದೇ ಯೋಜನೆಯಲ್ಲಿ ವಿದ್ಯಾನಗರದಲ್ಲೂ ಪುಲಿಕುನ್ನುವಿನಲ್ಲೂ ನಿರ್ಮಿಸುತ್ತಿರುವ ಟ್ಯಾಂಕುಗಳ ಕಾಮಗಾರಿ ಶೇ. ಅರ್ಧದಷ್ಟು ಪೂರ್ತಿಗೊಂಡಿದೆ. ನಗರ ಸಭೆ ಹಾಗೂ ಚೆಮ್ಮನ್ನಾಡ್‌ ಪಂಚಾಯತ್‌ಗಳಲ್ಲೂ ನೀರಿನ ಕ್ಷಾಮ ಬಗೆಹರಿಸಲು ಕಿಫ್‌ºನಲ್ಲಿ (ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ ಬೋರ್ಡ್‌) 76 ಕೋಟಿ ರೂ.ಯ ಅನುಮತಿ ಲಭಿಸಿದೆ.


ಬೆಳ್ಳೂರು :- ಬರಿದಾದ ಜಲನಿಧಿ ಯೋಜನೆ

ನೀರಿರುವಾಗ ಕೆಲಸ ಪೂರ್ತಿಕರಿಸಲಿಲ್ಲ, ಕೆಲಸ ಪೂರ್ತಿಯಾದಗ ನೀರಿಲ್ಲ..! ಇದು ಬೆಳ್ಳೂರು ಪಂಚಾಯತಿನ ಜಲ ನಿಧಿ ಯೋಜನೆಯ ದುಸ್ಥಿತಿ…! 2015 ರಲ್ಲಿ ಪ್ರಾರಂಭಿಸಿದ ಜಲ ನಿಧಿ ಯೋಜನೆಯ ಕಾಮಗಾರಿಯೂ ಆಮೆ ನಡಿಗೆಯಂತೆ ಸಾಗಿ 2019 ರಲ್ಲಿ ಪೂರ್ತಿಗೊಂಡಿತು. ಆದರೆ ನದಿ, ತೋಡುಗಳು ಬತ್ತಿ ಹೋದ ಕಾರಣ ವಿತರಿಸಲು ನೀರಿಲ್ಲದಾಯಿತು. ಯೋಜನೆ ವಿಜಯಕರವಾಗಿದ್ದರೂ ನೀರು ವಿತರಣೆಗೆ ಮಳೆರಾಯನೇ ಕರುಣಿಸಬೇಕು. 2014 ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಒಂದು ವರ್ಷದಲ್ಲಿ ಪೂರ್ತಿಗೊಳಿಸಲು ನಿರ್ಣಯಿಸಲಾಗಿತ್ತು. ಆದರೆ ಟೆಂಡರ್‌ ಕೋರಿದ್ದು ಮಾತ್ರ 2015 ರಲ್ಲಿ. ಮೊದಲು ಟೆಂಡರ್‌ ಸ್ವೀಕರಿಸಿದ ವ್ಯಕ್ತಿ ಅರ್ಧದಲ್ಲೇ ಕೆಲಸ ನಿಲ್ಲಿಸಿದ ಕಾರಣ ಕಾಮಗಾರಿ ಮೊಟಕುಗೊಂಡಿತು. ರೀಟೆಂಡರ್‌ ನೀಡಲು ಒಂದು ವರ್ಷವೇ ಬೇಕಾಗಿ ಬಂತು. ಇದೀಗ ಯೋಜನೆ ಪೂರ್ತಿಗೊಂಡಾಗ ನೀರಿನ ಮೂಲವಾದ ಕುಂಟಾರಿನ ಪಯಶ್ವಿ‌ನಿ ನದಿಯೂ ಬತ್ತಿ ಹೋಯಿತು. ಇಲ್ಲಿಯೂ ಚೆಕ್‌ಡಾಮಿನ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಇದು ಪೂರ್ತಿಗೊಂಡರೆ ಮಾತ್ರವೇ ನೀರು ವಿತರಿಸಲು ಸಾಧ್ಯ. 75% ಸರಕಾರದ ಮೊತ್ತ, 15% ಪಂಚಾಯತಿನ ಮೊತ್ತ, 10% ಮೊತ್ತ ಸೇರಿಸಿ 7.37 ಕೋಟಿ ರೂ. ಇದಕ್ಕಾಗಿ ವ್ಯಯಿಸಲಾಗಿದೆ.

ಅಡೂರು :- ಬಗೆ ಹರಿಯದ ಸಮಸ್ಯೆ..
ಸಮಸ್ಯೆಗಳು ಒಂದರ ಹಿಂದೆ ಒಂದಾಗಿ ಬರುತ್ತಿರುವಾಗಲೂ ಅಡೂರಿನಲ್ಲಿ ನೀರಿಗಾಗಿ ಊರವರು ನಿರೀಕ್ಷಿಸುತ್ತಿದ್ದಾರೆ. 5 ಚರ್ಷಗಳಿಂದೀಚೆಗೆ ಇಲ್ಲಿನ ಸಾರ್ವಜನಿಕರು ನೀರಿನ ಬರವಿಗಾಗಿ ಕಾಯುತ್ತಿದ್ದಾರೆ. ಅಡೆತಡೆಗಳನ್ನು ದಾಟಿ ಕಾಮಗಾರಿ ಪೂರ್ತಿಗೊಳಿಸಿದಾಗ ನದಿನೀರು ಕೈಕೊಟ್ಟಿತು. ಅಡೂರಿನ ಪೇಟೆ ಹಾಗೂ ಸುತ್ತುಮುತ್ತಲ ಪರಿಸರದಲ್ಲಿ ನೀರು ಸಿಗದೇ 300 ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿವೆ. 2014 ರಲ್ಲಿ ಜಲನಿಧಿ ಯೋಜನೆ ಕಾಮಗಾರಿ ಪ್ರಾರಂಭಿಸಿದೆ. ಪಯಶ್ವಿ‌ನಿ ನದಿಯಲ್ಲಿ ಬಾವಿ ತೋಡಿ ಅದರಿಂದ ನೀರು ತೆಗೆಯಲು ತೀರ್ಮಾನಿಸಲಾಗಿತ್ತು. ಮೊದಲ ಮಳೆಗೆ ಬಾವಿಯು ಸಂಪೂರ್ಣ ನಾಶವಾಯಿತು. ಪುನಃ ಬಾವಿಯ ಕೆಸರು ತೆಗೆಯುವಲ್ಲಿ ನಿರತರಾದಾಗ ತಲಭಾಗದಲ್ಲಿ ಕೋರೆಕಲ್ಲು ಪ್ರತ್ಯಕ್ಷಗೊಂಡಿತು. ಈ ಕಾರಣದಿಂದ ಬಾವಿಯನ್ನು ಉಪೇಕ್ಷಿಸಬೇಕಾಯಿತು. ನಂತರ ಹೊಸತೊಂದು ಬಾವಿ ತೋಡಿದರು. ಶಕ್ತಿಯುತವಾದ ಮೋಟರ್‌ ಉಪಯೋಗಿಸಲು ಅಲ್ಲಿ ವಿದ್ಯುತ್‌ನ ಕೊರತೆ ಕಂಡು ಬಂತು. ಆದ ಕಾರಣ ಹೊಸ ಟ್ರಾನ್ಸ್‌ಫಾರ್ಮರ್‌ ನಿರ್ಮಿಸಲಾಯಿತು. ಅಷ್ಟಾಗುವಾಗ 2 ವರ್ಷ ಮೊದಲು ಹಾಕಿದ ಪೈಪ್‌ಗ್ಳು ಒಡೆಯಲು ಪ್ರಾರಂಭಿಸಿತು. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿಗೆ ಮಳೆಗಾಲದ ಆಗಮನವಾಯಿತು. ಈ ಮಳೆಗೆ ಮೋಟರ್‌ ಸಂಪೂರ್ಣವಾಗಿ ನೀರಿನಡಿಯಲ್ಲಿ ಮುಳುಗಿತು. ಫಲಾನುಭವಿಗಳು ನೀಡಬೇಕಾದ ಹಣ ಸಿಗದಾಗ ಜಲನಿಧಿ ಯೋಜನೆಯ ಹಣವು ಸಿಗದಂತಾಯಿತು. ಕೊನೆಗೂ ನಿರ್ಮಾಣ ಪೂರ್ತಿಗೊಂಡರೂ ಮಳೆ ಬರದೇ ಬಾವಿಯಲ್ಲಿ ನೀರು ಸಿಗಲಿಕ್ಕಿಲ್ಲ. ಬರುವ ವರ್ಷದಲ್ಲಿ ಯೋಜನೆ ಕಾರ್ಯಪ್ರವೃತ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೇಳಿಕೆ ಸಾಕಾರವಾಗುವದೇ ಅಥವಾ ಮುಂಗಾರು ಮಳೆಯಲ್ಲಿ ಕೊಚ್ಚಿಹೋಗುವುದೇ ಕಾದು ನೋಡಬೇಕು….

ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.