Fraud: ಉದ್ಯೋಗ ಭರವಸೆ ನೀಡಿ ವಂಚನೆ; ಶಿಕ್ಷಕಿ ವಿರುದ್ಧ ಇನ್ನೆರಡು ದೂರು


Team Udayavani, Oct 19, 2024, 8:06 PM IST

Fraud: ಉದ್ಯೋಗ ಭರವಸೆ ನೀಡಿ ವಂಚನೆ; ಶಿಕ್ಷಕಿ ವಿರುದ್ಧ ಇನ್ನೆರಡು ದೂರು

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಮಾಜಿ ಡಿವೈಎಫ್‌ಐ ನೇತಾರೆ, ಬಾಡೂರು ಎಎಲ್‌ಪಿ ಶಾಲೆಯ ಅಧ್ಯಾಪಕಿ ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸರಿಗೆ ಮತ್ತೆ ಎರಡು ದೂರುಗಳು ಲಭಿಸಿವೆ.

ನಾರಂಪಾಡಿ ಗೋಸಾಡದ ರಕ್ಷಿತಾ, ಉಕ್ಕಿನಡ್ಕ ಕಂಗಿಲದ ಸುಜಾತಾ ದೂರು ನೀಡಿದವರು. ರಕ್ಷಿತಾರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರೂ, ಕೇಸು ದಾಖಲಿಸಿಲ್ಲವೆಂದು ಆರೋಪ ಉಂಟಾಗಿದೆ. ವಂಚನೆಗೆ ಸಂಬಂಧಿಸಿ ಈ ಹಿಂದೆ ದಾಖಲಿಸಿಕೊಂಡ ಕೇಸುಗಳೊಂದಿಗೆ ರಕ್ಷಿತಾರ ದೂರಿನ ಕುರಿತು ತನಿಖೆ ನಡೆಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.

ದೂರು ನೀಡಿದ ರಕ್ಷಿತಾ ಹಾಗೂ  ಹಣ ಲಪಟಾಯಿಸಿದ ಸಚಿತಾ ಒಂದೇ ತರಗತಿಯಲ್ಲಿ ಕಲಿತವರಾಗಿದ್ದಾರೆ. ಈ ಪರಿಚಯದ ಮೇಲೆ ಹಣ ನೀಡಿರುವುದಾಗಿ ರಕ್ಷಿತಾ ತಿಳಿಸಿದ್ದಾರೆ. ಸಿಪಿಸಿಆರ್‌ಐಯಲ್ಲಿ ಕ್ಲಾರ್ಕ್‌ ಕೆಲಸ ದೊರಕಿಸಿಕೊಡುವುದಾಗಿ ತಿಳಿಸಿ 2022ರ ಡಿಸೆಂಬರ್‌ ಮೊದಲ ವಾರ ಒಂದು ಲಕ್ಷ ರೂ. ಅನ್ನು ಸಚಿತಾ ರೈ ತನ್ನ ಖಾತೆಗೆ ಪಡೆದುಕೊಂಡಿದ್ದಾಳೆಂದೂ, ಬಾಕಿ 4 ಲಕ್ಷ ರೂ.ಗಳನ್ನು ಮೂರು ಕಂತುಗಳಲ್ಲಿ ಆಕೆಗೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಕರ್ನಾಟಕದಲ್ಲಿ ಕ್ಲಾರ್ಕ್‌ ಕೆಲಸ ದೊರಕಿಸಿ ಕೊಡುವುದಾಗಿ ತಿಳಿಸಿದ್ದಾಳೆಂದು ರಕ್ಷಿತಾ ಹೇಳಿದ್ದಾರೆ. ಈ ಮಧ್ಯೆ ತನ್ನ ಬದಲಿಗೆ ಸಹೋದರ ಆಕಾಶ್‌ಗೆ ಉದ್ಯೋಗ ದೊರಕಿಸಬೇಕೆಂದು ತಿಳಿಸಲಾಯಿತು. ಇದಕ್ಕೆ ಒಪ್ಪಿದ ಸಚಿತಾಳಿಂದ ಹಲವು ತಿಂಗಳ ಕಾಲ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೆ ಸಂಪರ್ಕಿಸಿದಾಗ ಕರ್ನಾಟಕದ ಸಂಸ್ಥೆಯೊಂದರಿಂದ ಇಂಟರ್‌ವ್ಯೂ ಕಾರ್ಡ್‌ ಕಳುಹಿಸಲಾಗಿದೆಯೆಂದೂ ಅದರಲ್ಲಿ ಭಾಗವಹಿಸಬಹುದೆಂದೂ ತಿಳಿಸಿದ್ದಳು. ಸಚಿತಾ ತಿಳಿಸಿದಂತೆ ಕೆಲವು ದಿನಗಳೊಳಗೆ ಪೋಸ್ಟ್‌ ಕಾರ್ಡ್‌ ಲಭಿಸಿವೆ. 2024ರ ಫೆ. 22ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬೇಕೆಂದು ಕಾರ್ಡ್‌ನಲ್ಲಿ ತಿಳಿಸಲಾಗಿತ್ತು. ಆದರೆ ಸಂದರ್ಶನ ನಡೆಯುವುದಾಗಿ ತಿಳಿಸಿದ ದಿನದಂದು ಮಧ್ಯಾಹ್ನ ಬಳಿಕವೇ ಇಂಟರ್‌ವ್ಯೂ ಕಾರ್ಡ್‌ ಲಭಿಸಿದೆ.

ಈ ಕುರಿತು ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ ಕಾರ್ಡ್‌ ಕಳುಹಿಸಿರುವುದು ಹುಬ್ಬಳ್ಳಿಯಿಂದಲ್ಲ. ಕಾಸರಗೋಡಿನಿಂದ ಕಾರ್ಡ್‌ ಕಳುಹಿಸಲಾಗಿರುವುದು ದೂರುದಾತೆಗೆ ತಿಳಿದು ಬಂದಿದೆ. ಮಾತ್ರವಲ್ಲ ಸಂದರ್ಶನ ನಡೆಯುವ ಸಂಸ್ಥೆಯ ಸೀಲ್‌ ಕೂಡ ಕಾರ್ಡ್‌ನಲ್ಲಿ ಇರಲಿಲ್ಲ ಎಂದಿದ್ದಾರೆ.

ಕಂಗಿಲದ ಸುಜಾತಾ ಕೂಡ ಸಚಿತಾ ವಿರುದ್ಧ ದೂರು ನೀಡಿದ್ದಾರೆ. ಕಾಸರಗೋಡಿನ ಸರಕಾರಿ ಕಚೇರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ 50 ಸಾವಿರ ರೂ. ಪಡೆದು ಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರಿಗೆ ಹಲ್ಲೆ: ಬಂಧನ: 

ಕಾಸರಗೋಡು: ಪಡನ್ನಕಾಡ್‌ನ‌ಲ್ಲಿ ಪೊಲೀಸರಿಗೆ ಹಲ್ಲೆ ಮಾಡಿ ಮೊಬೈಲ್‌ ಫೋನ್‌ ಹಿಡಿದೆಳೆದ ಪ್ರಕರಣಕ್ಕೆ ಸಂಬಂಧಿಸಿ ಪಡನ್ನಕ್ಕಾಡ್‌ ಟಿ.ಎಂ. ಕ್ವಾರ್ಟರ್ಸ್‌ನ ಕೆ.ಪಿ. ಶಹಾದ್‌ (23)ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಟಾಪ್ ನ್ಯೂಸ್

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

1-navyaa

BJP; ವಯನಾಡ್ ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಕಣಕ್ಕೆ

13

Job Fair : ಶಿರೂರು ಗುಡ್ಡ ಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ

cOurt

Mangaluru: ಅಪ್ರಾಪ್ತೆಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಆರೋಪ ಸಾಬೀತು, ಶಿಕ್ಷೆ ಪ್ರಕಟ

BJP 2

By-Election; ಶಿಗ್ಗಾವಿಗೆ ಭರತ್, ಸಂಡೂರಿಗೆ ಬಂಗಾರು ಹನುಮಂತು: ಬಿಜೆಪಿ ಘೋಷಣೆ

JMM-Congress

Jharkhand Polls: ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಮೈತ್ರಿ ಅಂತಿಮ

1-a-vasu

Vasundhra Oswal; ಭಾರತೀಯ ಬಿಲಿಯನೇರ್ ನ ಪುತ್ರಿ ಉಗಾಂಡಾದಲ್ಲಿ ವಶಕ್ಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri: ಕಾಫಿ ತೋಟದಲ್ಲಿ ಗಾಂಜಾ ಬೆಳೆೆದ ಆರೋಪಿಯ ಬಂಧನ

Madikeri: ಕಾಫಿ ತೋಟದಲ್ಲಿ ಗಾಂಜಾ ಬೆಳೆೆದ ಆರೋಪಿಯ ಬಂಧನ

fraudd

Kasaragod: ಉದ್ಯೋಗ ಭರವಸೆ ನೀಡಿ ವಂಚನೆ; ಸಚಿತಾ ರೈ

de

Kasaragod: ಬೋಟ್‌ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್‌ ಮೃತದೇಹ ಪತ್ತೆ

8

Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟಿದ್ದ ಮದ್ದೂರಿನ ಮಹಿಳೆ 15 ವರ್ಷ ಬಳಿಕ ಕುಟುಂಬ ಸೇರಿದರು! 

ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟಿದ್ದ ಮದ್ದೂರಿನ ಮಹಿಳೆ 15 ವರ್ಷ ಬಳಿಕ ಕುಟುಂಬ ಸೇರಿದರು! 

16

Ayanur Manjunath: ಕೇಂದ್ರ ಸಚಿವ ಸ್ಥಾನಕ್ಕೆ ಜೋಶಿ ರಾಜೀನಾಮೆ ನೀಡಲಿ: ಆಯನೂರು

1-navyaa

BJP; ವಯನಾಡ್ ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಕಣಕ್ಕೆ

pub

Pub ನಲ್ಲಿ ಅಶ್ಲೀ*ಲ ನೃತ್ಯ; 42 ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಜನರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.