ಐಸಿಸ್‌ಗೆ ಸೇರ್ಪಡೆ: ಉಗ್ರರಿಗೆ ಕೊಲ್ಲಿಯಿಂದ ಆರ್ಥಿಕ ನೆರವು

Team Udayavani, Dec 21, 2017, 9:45 AM IST

21-14.jpg

ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌)ಗೆ ಕೇರಳದಿಂದ ಯುವಕ-ಯುವತಿಯರನ್ನು ಆಕರ್ಷಿಸಲು ಶಾರ್ಜಾ, ದುಬಾೖ ಮೊದಲಾದ ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ ಹೇರಳ ಹಣ ಹರಿದು ಬರುತ್ತಿದೆ ಎಂಬ ಆತಂಕಕಾರಿ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೇರಳದಲ್ಲಿ ಐಸಿಸ್‌ ಬಗ್ಗೆ ತನಿಖೆ ನಡೆಸುತ್ತಿರುವ ಕಣ್ಣೂರು ಡಿವೈಎಸ್‌ಪಿ ಪಿ.ಪಿ. ಸದಾನಂದನ್‌ ಈ ಮಾಹಿತಿ ಹೊರಗೆಡಹಿದ್ದಾರೆ.

ಐಸಿಸ್‌ಗೆ ಸೇರಲೆಂದು ಕೊಲ್ಲಿಗೆ ಹೋಗಿ ಅಲ್ಲಿಂದ ತುರ್ಕಿ ಮೂಲಕ ಸಿರಿಯಾ ದಲ್ಲಿರುವ ಐಸಿಸ್‌ ಶಿಬಿರಕ್ಕೆ ಹೋಗಲೆತ್ನಿಸಿದ್ದ ಕಣ್ಣೂರಿನ ನಾಲ್ವರನ್ನು ತುರ್ಕಿ ಪಡೆ ಸೆರೆ ಹಿಡಿದು ಭಾರತಕ್ಕೆ ಗಡೀಪಾರು ಮಾಡಿತ್ತು. ಅವರನ್ನು ಬಳಿಕ ವಳಪಟ್ಟಣಂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದ ತನಿಖೆ ಈಗ ಡಿವೈಎಸ್‌ಪಿ ಪಿ.ಪಿ. ಸದಾನಂದನ್‌ ನೇತೃತ್ವದಲ್ಲಿ ನಡೆಯುತ್ತಿದೆ.

ತಸ್ಲಿಂ ಮೂಲಕ ಹಣ: ದುಬಾೖಯಲ್ಲಿರುವ ಕಣ್ಣೂರು ನಿವಾಸಿ ತಸ್ಲಿಂ ಮೂಲಕ ಕೇರಳದಿಂದ ಐಸಿಸ್‌ಗೆ ಸೇರುವವರಿಗೆ ಹಣ ಪೂರೈಕೆಯಾಗುತ್ತಿದೆ. ಕಣ್ಣೂರು ಅಂಜರಕಂಡಿಯ ಮಿಥಿಲಾಜ್‌ನ ಬ್ಯಾಂಕ್‌ ಖಾತೆ ಮೂಲಕ ಹಣ ಪೂರೈಕೆಯಾಗುತ್ತಿದೆ. ತುರ್ಕಿಯಿಂದ ಗಡೀಪಾರಾದ ಕಣ್ಣೂರಿನ ಐವರಲ್ಲಿ ಮಿಥಿಲಾಜ್‌ ಕೂಡ ಇದ್ದಾನೆ. ಆತನನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಕೊಲ್ಲಿ ಉದ್ಯೋಗಿಯಾಗಿರುವ ಕಣ್ಣೂರಿನ ತಸ್ಲಿಂ ಬಡ ಕುಟುಂಬಕ್ಕೆ ಸೇರಿದವ ನಾಗಿದ್ದು ಆತನಿಗೆ ಎಲ್ಲಿಂದ ಹಣ ಲಭಿಸುತ್ತಿದೆ ಎಂಬ ಬಗ್ಗೆಯೂ ಎನ್‌ಐಎ ತನಿಖೆ ನಡೆಸು ತ್ತಿದೆ. ಐಸಿಸ್‌ಗಾಗಿ ತಸ್ಲಿಂ ದೇಣಿಗೆ ವಸೂಲು ಮಾಡುತ್ತಿರುವ ಬಗ್ಗೆಯೂ ತನಿಖಾ ತಂಡಕ್ಕೆ ಸ್ಪಷ್ಟ ಪುರಾವೆಗಳು ಲಭಿಸಿವೆ. ಕಣ್ಣೂರು ನಗರದ ಜವುಳಿ ಅಂಗಡಿ ಯೊಂದರ ಮಾಲಕ ಹಣ ವ್ಯವಹಾರದಲ್ಲಿ ಒಳಗೊಂಡಿದ್ದಾನೆ. ಆತನ ಮೂಲಕ ಹಣ ವ್ಯವಹಾರ ನಡೆಯುತ್ತಿದೆ. ಆತನನ್ನೂ ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ನಾಪತ್ತೆಯಾದ 21 ಮಂದಿ ಐಸಿಸ್‌ ಶಿಬಿರದಲ್ಲಿ : ಕಾಸರಗೋಡು ಜಿಲ್ಲೆಯ ತೃಕ್ಕರಿಪುರ ಮತ್ತು ಚಂದೇರಾ ಪರಿಸರದ 21 ಮಂದಿ ನಾಪತ್ತೆಯಾಗಿ ಈಗ ಅವರು ಅಪಾ^ನಿಸ್ಥಾನದಲ್ಲಿ ಐಸಿಸ್‌ ಶಿಬಿರದಲ್ಲಿದ್ದಾರೆಂಬ ಮಾಹಿತಿ ಎನ್‌ಐಎಗೆ ಈ ಹಿಂದೆಯೇ ಲಭಿಸಿದೆ. ಇಂತಹ ತಂಡದ ಸದಸ್ಯರು ಕಾಸರಗೋಡಿನಲ್ಲಿ ರಹಸ್ಯವಾಗಿ ಕಾರ್ಯವೆಸಗುತ್ತಿದ್ದಾರೆ.

ಟಾಪ್ ನ್ಯೂಸ್

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.