ಕೈಕಂಬ ಬಸ್ ತಂಗುದಾಣದಲ್ಲಿ ಕಸದ ರಾಶಿ
Team Udayavani, Apr 15, 2018, 7:05 AM IST
ಕಾಸರಗೋಡು: ಇದು ರಾಷ್ಟ್ರೀಯ ಹೆದ್ದಾರಿ 66ರ ಕೈಕಂಬದ ಬಸ್ ತಂಗುದಾಣದ ದುರವಸ್ಥೆ. ಕೈಕಂಬಕ್ಕೆ ಬಾಯಾರು, ಕುರುಡಪದವು, ಬಳ್ಳೂರು ಕಡೆಯಿಂದ ಮಂಗಳೂರಿಗೆ ದಿನನಿತ್ಯ ನೂರಾರು ಪ್ರಯಾಣಿಕರು ಇದೇ ಬಸ್ ನಿಲ್ದಾಣದಿಂದಲೇ ಮಂಗಳೂರಿನ ಬಸ್ಸಿಗೆ ಕಾಯಬೇಕಿದೆ. ಇಲ್ಲಿ ಅಕ್ಷರಶ: ಕಸದ ತೊಟ್ಟಿಯ ಮಧ್ಯೆ ಕುಳಿತಂತೆ ನಿಮಗೆ ಅನಿಸದೆ ಇರದು.
ಅಕಸ್ಮತ್ತಾಗಿ ನಿಮ್ಮಲ್ಲಿದ್ದ ಕಸವನ್ನು ಹಾಕಬೇಕೆಂದು ಕಸದ ತೊಟ್ಟಿಯನ್ನು ನೀವೇನಾದರು ಹುಡುಕಿದರೆ ದುರ್ಬೀನು ಬಳಸಿ
ದರೂ ಕಸದ ತೊಟ್ಟಿ ಇಲ್ಲಿ ಕಾಣಸಿಗದು. ಮಳೆಗಾಲದಲ್ಲಿ ಈ ಕಸಗಳ ಜೊತೆ ಮರದ ಎಲೆಗಳು ಸೇರಿ ಕೊಳೆತು ಬಸ್ ತಂಗು
ದಾಣವನ್ನು ದುರ್ಗಂಧಮಯವಾಗಿಸುತ್ತದೆ. ಈ ಮೊದಲೇ ಹೇಳಿದಂತೆ ಸಾಕಷ್ಟು ಮಹಿಳೆಯರು, ಮಕ್ಕಳು ಬರುವ ಈ ತಂಗುದಾಣದ ಸ್ವತ್ಛತೆಯ ಜೊತೆ ಒಂದು ಸಾರ್ವಜನಿಕ ಶೌಚಾಲಯ ನಿರ್ಮಾಣ ಕೂಡ ಆಗಬೇಕೆಂದು ಸಾರ್ವಜನಿಕರು ವ್ಯಾಪಕವಾಗಿ ಆಗ್ರಹಿಸುತ್ತಿದ್ದಾರೆ.
ದೇಶದ ಪ್ರಧಾನಿ ಸ್ವಚ್ಛ ಭಾರತ ನಿರ್ಮಾಣದ ಕರೆ ಕೊಟ್ಟಾಗ ಅದನ್ನು ಸ್ಥಳೀಯ ಆಡಳಿತ ನಿರ್ಲಕ್ಷಿಸುವುದು ಸರಿಯಲ್ಲ. ಆದ್ದರಿಂದ ಕೂಡಲೇ ಸ್ಥಳೀಯ ಆಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.