ಕಾಂಞಂಗಾಡು-ಕಾಣಿಯೂರು ರೈಲು ಹಳಿ ಯೋಜನೆ ಅನಿಶ್ಚಿತ

Team Udayavani, May 15, 2018, 6:10 AM IST

14ksde9.jpg

ಕಾಸರಗೋಡು: ಬಹುನಿರೀಕ್ಷಿತ ಮಹತ್ವಾಕಾಂಕ್ಷೆಯ ಕಾಂಞಂಗಾಡು – ಕಾಣಿಯೂರು ರೈಲು ಹಳಿ ಸಂಬಂಧಿಸಿ ಅನುದಾನ ನೀಡುವುದಾಗಿ ತಿಳಿಸುವ ಒಪ್ಪಿಗೆ ಪತ್ರವನ್ನು  ಇದುವರೆಗೆ ಕೇರಳ ಸರಕಾರ ಕೊಡದೆ ಸತಾಯಿಸುತ್ತಿದೆ ಎಂದು ವ್ಯಾಪಕ ಆರೋಪ ಕೇಳಿ ಬಂದಿದೆ.

ಕೇರಳ ಸರಕಾರದ ಅನುಮತಿ ಪತ್ರ ಸಿಗದಿರುವುದರಿಂದ ಮಹತ್ವಾಕಾಂಕ್ಷೆಯ ಕಾಂಞಂಗಾಡ್‌-ಕಾಣಿಯೂರು ರೈಲು ಹಳಿ ಕಡತದಲ್ಲೇ ಉಳಿದುಕೊಳ್ಳಲು ಕಾರಣವಾಗಿದೆ ಎಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌ ಹೇಳಿದ್ದಾರೆ. ಅವರು ಐಎನ್‌ಟಿಯುಸಿ ನೇತಾರರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಈ ಯೋಜನೆಯ ನನೆಗುದಿಗೆ ಬೀಳಲು ರಾಜ್ಯ ಸರಕಾರದ ಅಸಡ್ಡೆ ಕಾರಣವೆಂದಿದ್ದಾರೆ.

2015ರ ಮಾರ್ಚ್‌ 31ರಂದು ಈ ಕುರಿತು ಅಂತಿಮ ವರದಿ ಸಲ್ಲಿಸಲಾಗಿತ್ತು. ಈ ಬೃಹತ್‌ ಯೋಜನೆಗೆ ಸಂಬಂಧಿಸಿ 1300 ಕೋಟಿ ರೂ. ಒಟ್ಟು  ವೆಚ್ಚ  ಅಂದಾಜಿಸಲಾಗಿದೆ. ಇದರಲ್ಲಿ  ಅರ್ಧದಷ್ಟನ್ನು  ಕೇಂದ್ರ ಸರಕಾರ ಹಾಗೂ ಉಳಿದ ಅರ್ಧ ಭಾಗವನ್ನು  ಕೇರಳ ಮತ್ತು  ಕರ್ನಾಟಕ ಸರಕಾರಗಳು ನೀಡಬೇಕಾಗಿದೆ.

ಕೇರಳ ರಾಜ್ಯ ಸರಕಾರದ ಒಪ್ಪಿಗೆ ಪತ್ರ ದೊರಕಿ ರೈಲ್ವೇ ಮಂಡಳಿಯಿಂದ ಅಂಗೀಕಾರವಾದರೆ ಕಾಂಞಂಗಾಡು – ಕಾಣಿಯೂರು ರೈಲು ಹಳಿಯ ಲೊಕೇಶನ್‌ ಸಮೀಕ್ಷೆ  ಶೀಘ್ರದಲ್ಲೇ ಆರಂಭಗೊಳ್ಳಬಹುದು. ಇದರಿಂದ ರೈಲು ಮಾರ್ಗ ಹಾದು ಹೋಗುವ ಭಾಗವನ್ನು  ನಿಖರವಾಗಿ ಗುರುತಿಸಬಹುದಾಗಿದೆ. ಈ ಸರ್ವೇ ಕಾಣಿಯೂರು ಭಾಗಕ್ಕೆ ತಲುಪುವಾಗ ಕರ್ನಾಟಕದ ಒಪ್ಪಿಗೆ ಪತ್ರ ಲಭಿಸಲಿದೆ ಎಂದು ರೈಲ್ವೇಯ ಉನ್ನತಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರದ ಕೇರಳ ಭಾಗದಿಂದ ಆರು ಗಂಟೆಯೊಳಗೆ ಬೆಂಗಳೂರಿಗೆ ತಲುಪಲು ಸಾಧ್ಯವಾಗುವ ರೈಲು  ಮಾರ್ಗ ಇದಾಗಿದೆ. ಅಲ್ಲದೆ ಈ ಯೋಜನೆಯು ವಿದ್ಯುತ್‌ ಇಲಾಖೆಯ ಅಧಿಕಾರಿಯಾಗಿದ್ದ  ಜೋಸ್‌ ಕೊಚ್ಚಿಕುನ್ನೇಲ್‌ ಅವರ ಆಶಯವಾಗಿತ್ತು. ರೈಲು ಮಾರ್ಗದ ದೂರ 90 ಕಿಲೋ ಮೀಟರ್‌ ಆಗಿದ್ದು, ಉಭಯ ರಾಜ್ಯಗಳ ಗಡಿ ಪ್ರದೇಶಗಳನ್ನು ಹಾದುಹೋಗಲಿದೆ.

ಕಾಂಞಂಗಾಡಿನಿಂದ ಪಾಣತ್ತೂರಿಗೆ 41 ಕಿಲೋ ಮೀಟರ್‌ ದೂರವಿದೆ. ಕೇರಳ ಮತ್ತು  ಕರ್ನಾಟಕ ಗಡಿ ಭಾಗದಿಂದ ಕಾಣಿಯೂರು ವರೆಗೆ 49 ಕಿಲೋ ಮೀಟರ್‌ ಅಂದರೆ ಕಾಣಿಯೂರು ಸಮೀಪದ ಎಡಮಂಗಲ ಎಂಬ ಸ್ಥಳದ ತನಕ ಈ ರೈಲು ಮಾರ್ಗವನ್ನು  ಅಧ್ಯಯನ ನಡೆಸಲಾಗಿದೆ.ಕಾಂಞಂಗಾಡಿನಿಂದ ಪಾಣತ್ತೂರಿಗೆ ಕೇವಲ 20 ನಿಮಿಷಗಳಲ್ಲಿ  ತಲುಪಲು ಸಾಧ್ಯವಿದೆ. ಬಳಿಕ 20 ನಿಮಿಷಗಳಲ್ಲಿ  ಕಾಣಿಯೂರಿಗೆ ತಲುಪಿ ಅಲ್ಲಿಂದ ಸುಳ್ಯಕ್ಕೆ ತೆರಳಬಹುದಾಗಿದೆ.

ನಂತರ ಎರಡು ಗಂಟೆಗಳ ಕಾಲ ಪ್ರಯಾಣ ನಡೆಸಿದರೆ ಹಾಸನಕ್ಕೆ ಹಾಗೂ ಅಲ್ಲಿಂದ ಇತ್ತೀಚೆಗೆ ಕಾರ್ಯಾರಂಭಗೊಂಡ ಶ್ರವಣಬೆಳಗೊಳ ಮಾರ್ಗದ ಮೂಲಕ ಸಂಚರಿಸಿದರೆ ಆರು ಗಂಟೆಗಳೊಳಗೆ ಬೆಂಗಳೂರಿಗೆ ತಲುಪಬಹುದಾಗಿದೆ.ಕೇರಳ ಮತ್ತು  ಕರ್ನಾಟಕ ರಾಜ್ಯಗಳು ಒಪ್ಪಿಗೆ ಪತ್ರ ನೀಡಿದ ಬಳಿಕ ರೈಲು ಮಾರ್ಗದ ಅಂತಿಮ ರೂಪುರೇಷೆ ದಕ್ಷಿಣ ರೈಲ್ವೇಯಿಂದ ರೈಲ್ವೇ ಮಂಡಳಿಗೆ ತಲುಪಬೇಕಾಗಿದೆ. ಮಂಡಳಿಯು ಅಂಗೀಕರಿಸಿದ ರೈಲ್ವೇಯ ಪಿನ್‌ಬುಕ್‌ನಲ್ಲಿ  ಈ ಯೋಜನೆಯು ಸ್ಥಾನ ಪಡೆಯಬೇಕು.

ಪ್ರದೇಶ ಸರ್ವೇ ಮುಂತಾದ ಯೋಜನೆ ಯನ್ನು  ತಯಾರಿಸಲು ರೈಲ್ವೇ ಸಚಿವಾಲಯ ಹಸಿರು ನಿಶಾನೆ ತೋರಿಸ ಬೇಕು. ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬೇಕು. ಸ್ವಾಧೀನಪಡಿಸುವ ಭೂಮಿಯ ಮಾಲಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರತ್ಯೇಕ ಕ್ರಿಯಾಪಡೆಯನ್ನು  ರಚಿಸಬೇಕು. ಅಲ್ಲದೆ ಯೋಜನೆಗೆ ಸಂಬಂಧಿಸಿ ಅಂತಿಮ ಸಿದ್ಧತೆಗಳನ್ನು  ಮಾಡಿಕೊಳ್ಳಲಾಗುವುದು. ನಂತರವಷ್ಟೇ ಕಾಮಗಾರಿ ಆರಂಭವಾಗಲಿದೆ.

ಕೇರಳ ಸರಕಾರವು 325 ಕೋಟಿ ರೂ. ನೀಡಬೇಕಿದೆ. ಈ ಮೊತ್ತವನ್ನು  ಕೊಡುವುದಾಗಿ ಸೂಚಿಸುವ ಒಪ್ಪಿಗೆಪತ್ರವನ್ನು ಕೇರಳ ಸರಕಾರ ಇನ್ನೂ  ನೀಡದಿರುವುದರಿಂದ ಯೋಜನೆಗೆ ಸಂಬಂಧಪಟ್ಟ  ವರದಿಯು ರೈಲ್ವೇಯ ಚೆನ್ನೈ ಕಚೇರಿಯ ಕಡತದಲ್ಲೇ ಉಳಿದುಕೊಂಡಿದೆ. ಒಪ್ಪಿಗೆ ಪತ್ರಕ್ಕಾಗಿ ಇನ್ನಷ್ಟು  ದಿನ ಕಾಯಲು ಸಾಧ್ಯವಿಲ್ಲ  ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಆದರೆ ಒಪ್ಪಿಗೆ ಪತ್ರವಿಲ್ಲದೆ ಯೋಜನಾ ವರದಿ ಮಾತ್ರ ಕಳುಹಿಸಿದರೆ ರೈಲ್ವೇ ಮಂಡಳಿಯು ಈ ಯೋಜನೆಯನ್ನು  ಕೈಬಿಡುವ ಸಾಧ್ಯತೆ ನಿಚ್ಚಳವಾಗಿದೆ.

ಟಾಪ್ ನ್ಯೂಸ್

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

Court-1

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೊ*ಲೆ ಪ್ರಕರಣ: 14 ಮಂದಿ ತಪ್ಪಿತಸ್ಥರು

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.