Kasaragod: ಅಯೋಧ್ಯೆಯಲ್ಲಿ ಕನ್ನಡ ಯಕ್ಷಗಾನ: ಯಕ್ಷಾಂತರಂಗ ಪೆರ್ಲದಿಂದ ವಾಲಿಮೋಕ್ಷ ಪ್ರದರ್ಶನ
Team Udayavani, Nov 5, 2024, 12:42 AM IST
ಕಾಸರಗೋಡು: ಅಯೋಧ್ಯೆ ಯಲ್ಲಿ ಪ್ರಥಮ ಬಾರಿಗೆ “ಯಕ್ಷಾಂತ ರಂಗ ಪೆರ್ಲ’ ಯಕ್ಷಗಾನವನ್ನು ಪ್ರದರ್ಶಿಸಿದೆ.
ರಾಮಮಂದಿರ ಉದ್ಘಾಟನೆ ಸಂದರ್ಭದ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಆಗ್ರಹ ಇತ್ತು.
ಸತೀಶ್ ಪುಣಿಂಚತ್ತಾಯ ಪೆರ್ಲ ಅವರ ನಿರ್ದೇಶನದಲ್ಲಿ “ವಾಲಿ ಮೋಕ್ಷ’ ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಲಾ ಯಿತು. ಉತ್ತರ ಭಾರತವಾದ್ದರಿಂದ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಪ್ರದರ್ಶನ ನಡೆಸುವ ಉದ್ದೇಶವಿದ್ದರೂ, ದೇವಾಲಯ ನಿರ್ಮಾಣದ ರೂವಾರಿ, ವಿಎಚ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜೀ ಅವರ ಸೂಚನೆಯಂತೆ ಕನ್ನಡದಲ್ಲೇ ಯಕ್ಷಗಾನವನ್ನು ಪ್ರದರ್ಶಿಸ ಲಾಯಿತು. ಸಭಿಕರಿಂದ ಮೆಚ್ಚುಗೆಯೂ ವ್ಯಕ್ತವಾಯಿತು.
ಭಾಗವತರಾಗಿ ಡಾ| ಸತೀಶ ಪುಣಿಂಚತ್ತಾಯ ಪೆರ್ಲ, ಮದ್ದಲೆ- ಚೆಂಡೆ-ಮುರಳೀಧರ ಬಟ್ಯ ಮೂಲೆ, ಸಮೃದ್ಧ ಪುಣಿಂಚಿತ್ತಾಯ ಪೆರ್ಲ, ಚಕ್ರತಾಳ-ಉದಯ ಭಟ್ ಗೋವಾ ಸಹಕರಿಸಿದರು. ಶ್ರೀರಾಮನ ಪಾತ್ರದಲ್ಲಿ ಶೇಣಿ ವೇಣುಗೋಪಾಲ ಭಟ್, ವಾಲಿಯಾಗಿ ವಿನೋದ್ ಕುಮಾರ್ ಪೆರ್ಲ, ಸುಗ್ರೀವನಾಗಿ ಭವಿಷ್ ಭಂಡಾರಿ ಪುತ್ತೂರು ಅಭಿನಯಿಸಿದರು. ಖಂಡೇರಿ ವಿಷ್ಣು ಭಟ್, ಜಿ.ಕೆ.ಯಾದವ್ ಮಿಂಚಿಪದವು ಮತ್ತಿತರರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.