ಕಣ್ಣೂರು ವಿ.ವಿ.ಯಲ್ಲಿ ಕಳರಿ,ಯೋಗ,ಈಜು ಕೋರ್ಸ್
Team Udayavani, Jul 14, 2018, 6:00 AM IST
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಇನ್ನು ಮುಂದೆ ಕೇವಲ ಪಠ್ಯ ಕಲಿಕೆ ಮತ್ತು ಸಂಶೋಧನೆ ಮಾತ್ರವಲ್ಲ. ಕಳರಿ, ಯೋಗ, ಈಜು ಮತ್ತು ಏರೋಬಿಕ್ ಡ್ಯಾನ್ಸ್ ಕೋರ್ಸ್ ಆರಂಭಗೊಳ್ಳಲಿದೆ.
ಕಣ್ಣೂರು ವಿ.ವಿ.ಯ ಕ್ರೀಡಾ ವಿಭಾಗ ಕಳರಿ, ಈಜು, ಯೋಗ ಮತ್ತು ಏರೋಬಿಕ್ ಡ್ಯಾನ್ಸ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಅಲ್ಲದೆ ಫಿಟ್‌ನೆಸ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಕಳರಿಯಲ್ಲಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್, ಯೋಗದಲ್ಲಿ ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್, ಈಜು ಮತ್ತು ಫಿಟ್‌ನೆಸ್ ಮೆನೇಜ್‌ಮೆಂಟ್‌ನಲ್ಲಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಸ್ತುತ ಅಧ್ಯಯನ ವರ್ಷದಿಂದಲೇ ಆರಂಭಿಸಲು ತೀರ್ಮಾನಿಸಿದೆ. ವಿಶ್ವವಿದ್ಯಾಲಯದ ಮಾಂಗಾಟ್‌ಪರಂಬ ಕ್ಯಾಂಪಸ್‌ನಲ್ಲಿ ಈ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಈಜು,ಯೋಗ
ಫಿಟ್‌ನೆಸ್ ಮ್ಯಾನೇಜ್‌ಮೆಂಟ್, ಯೋಗ ಮತ್ತು ಈಜು ಇವುಗಳನ್ನು ತರಬೇತು ದಾರರನ್ನು ಕೇಂದ್ರೀಕರಿಸಿ ಕೋರ್ಸ್ ಗಳನ್ನು ಆರಂಭಿಸ ಲಾಗುವುದು. ಅತ್ಯುತ್ತಮ ಕ್ರೀಡಾ ತರಬೇತು ದಾರರನ್ನು ಸೃಷ್ಟಿಸುವುದು ಇದರ ಉದ್ದೇಶ ವಾಗಿದೆ. ಯೋಗದಲ್ಲಿ ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್ ನಡೆಯಲಿದ್ದು, ಈ ಕೋರ್ಸ್‌ಗೆ ಪದವಿ ಕನಿಷ್ಠ ಅರ್ಹತೆ ಯಾಗಿದೆ. ಪಿಟ್‌ನೆಸ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಜಿಮ್ನಾಸ್ಟಿಕ್ ಮತ್ತು ಏರೋಬಿಕ್ ಡ್ಯಾನ್ಸ್, ಸ್ಕೂಬ್ ಡ್ಯಾನ್ಸ್ ಮೊದಲಾದವುಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದು ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಪ್ಲಸ್ ಟು ಕನಿಷ್ಠ ಅರ್ಹತೆಯಾಗಿದೆ.
ಈಜು
ಶಾಸ್ತ್ರೀಯ ರೀತಿಯಲ್ಲಿ ಈಜು ಕಲಿಸಲಾಗುವುದು. ಅಲ್ಲದೆ ಈಜು ಪಟುಗಳಿಗೆ ತರಬೇತಿಯನ್ನು ನೀಡಲಾಗು ವುದು ಮತ್ತು ನೀರಿಗೆ ಬಿದ್ದವರನ್ನು ರಕ್ಷಿಸಲು ಅಗತ್ಯದ ತರಬೇತಿಯನ್ನು ಈಜು ಕೋರ್ಸ್‌ನಲ್ಲಿ ನೀಡಲಾಗುವುದು. ಮಾಂಗಾಟ್‌ಪರಂಬದ ಕ್ಯಾಂಪಸ್‌ನಲ್ಲಿರುವ ಈಜು ಕೊಳದಲ್ಲಿ ತರಬೇತಿ ನೀಡಲಾಗುವುದು. ಮೂರು ತಿಂಗಳ ಈ ಕೋರ್ಸ್‌ಗೆ ಪ್ಲಸ್ ಟು ಕನಿಷ್ಠ ಅರ್ಹತೆಯಾಗಿದೆ. ಜುಲೈ 30 ರಿಂದ ತರಗತಿಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 17. ಹೆಚ್ಚಿನ ವಿವರಗಳನ್ನು ಕಣ್ಣೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಪಡೆಯಬಹುದು.
ಕಳರಿ ಜತೆ ಚಿಕಿತ್ಸೆ
ಕಳರಿಯ ಜೊತೆಗೆ ಕಳರಿಯ ಮೂಲಕ ಚಿಕಿತ್ಸೆಯ ಕುರಿತಾಗಿ ಕಳರಿ ಡಿಪ್ಲೋಮಾ ಕೋರ್ಸ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ. ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಸಾಧಿಸಲು ಕಳರಿಯನ್ನು ಸೇರ್ಪಡೆಗೊಳಿಸುವ ಕುರಿತಾಗಿ ಯೋಜಿಸಲಾಗಿದ್ದು, ಈ ಬಗ್ಗೆ ಚಿಂತನೆ ನಡೆಯುತ್ತಿದೆ. ತಜ್ಞ ಕಳರಿ ಗುರುಗಳು ವಿಶ್ವವಿದ್ಯಾಲಯದಲ್ಲಿ ಕಳರಿಯನ್ನು ಕಲಿಸಲಿದ್ದಾರೆ. ಕಳರಿ ಅಭ್ಯಾಸಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಮಾಂಗಾಟ್‌ಪರಂಬದಲ್ಲಿ ಏರ್ಪಡಿಸಲಾಗುವುದು. ಪ್ರಥಮ ಬ್ಯಾಚ್‌ನಲ್ಲಿ 20 ಮಂದಿಗೆ ಮಾತ್ರವೇ ಪ್ರವೇಶ ನೀಡಲಾಗುವುದು. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳಲು ಕನಿಷ್ಠ ಅರ್ಹತೆ ಪ್ಲಸ್ ಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.