Karadka Society Fraud Case: ಆರೋಪಿ ಮನೆಯಿಂದ ಡೈರಿ ಪತ್ತೆ
Team Udayavani, Jun 20, 2024, 7:12 PM IST
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂ. ಲಪಟಾಯಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿ ಕಾಂಞಂಗಾಡ್ ಅದಿಯಂಬೂರು ನಿವಾಸಿಯೂ, ಈಗ ರಿಮಾಂಡ್‌ನಲ್ಲಿರುವ ಅನಿಲ್ ಕುಮಾರ್ ಮನೆಯಿಂದ ಕ್ರೈಂಬ್ರಾಂಚ್ ನಡೆಸಿದ ತಪಾಸಣೆಯಲ್ಲಿ ಡೈರಿಯೊಂದು ಪತ್ತೆಯಾಗಿದೆ.
ಪ್ರಕರಣದಲ್ಲಿ ಆರೋಪಿಗಳಾದ ಸೊಸೈಟಿಯ ಸೆಕ್ರೆಟರಿಯಾಗಿದ್ದ ಕರ್ಮಂತೋಡಿ ಬಾಳಕಂಡಂ ಕೆ.ರತೀಶನ್, ಕಣ್ಣೂರು ಚೊವ್ವ ನಿವಾಸಿಯೂ, ಪ್ರಸ್ತುತ ಪಯ್ಯನ್ನೂರಿನಲ್ಲಿ ವಾಸಿಸುವ ಅಬ್ದುಲ್ ಜಬ್ಟಾರ್ ಯಾನೆ ಮಂಞಕಂಡಿಯೊಂದಿಗೆ ಅನಿಲ್ ಕುಮಾರ್ ನಡೆಸಿದ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಡೈರಿಯಲ್ಲಿ ಬರೆದಿಡಲಾಗಿದೆ ಎಂದು ಸೂಚನೆಯಿದೆ. ರತೀಶನ್ ಅನಿಲ್ ಕುಮಾರ್‌ಗೆ ನೀಡಿದ ಎಲ್ಲಾ ಚಿನ್ನಾಭರಣಗಳು, ಅವುಗಳ ತೂಕ, ದಿನಾಂಕ ಮೊದಲಾದವುಗಳನ್ನು ಡೈರಿಯಲ್ಲಿ ದಾಖೀಲಿಸಲಾಗಿದೆ. ಅಡವಿರಿಸಿದ ಆಭರಣಗಳ ಸ್ಲಿಪ್‌ಗ್ಳನ್ನು ಡೈರಿಯಿಂದ ಪತ್ತೆಹಚ್ಚಲಾಗಿದೆ. ಮುಖ್ಯ ಆರೋಪಿಗಳನ್ನು ಮುಳ್ಳೇರಿಯದಲ್ಲಿರುವ ಸೊಸೈಟಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.