ಕರ್ನಾಟಕ-ಕೇರಳ ಗಡಿ ಗ್ರಾಮ: ಆನೆ ಉಪಟಳ

9 ಗ್ರಾಮಗಳ 63 ಪ್ರದೇಶಗಳಲ್ಲಿ ಹಾನಿ; 259 ಪ್ರಕರಣಗಳು: 25.96 ಲಕ್ಷ ರೂ. ವಿತರಣೆ

Team Udayavani, Jun 25, 2019, 5:19 AM IST

2306SLKP1

ಆನೆ ತಡೆ ಪಿಲ್ಲರ್‌ ಸನಿಹದಲ್ಲೇ ಆನೆ ನುಸುಳಲು ಬಳಸಿದ ದಾರಿ.

ಮಂಡೆಕೋಲು: ಕರ್ನಾಟಕ-ಕೇರಳ ಗಡಿ ಗ್ರಾಮದ ಕೃಷಿ ತೋಟಗಳಿಗೆ ನುಗ್ಗುವ ಗಜಪಡೆಗೆ ಅಂಕುಶ ಹಾಕಲು ಅರಣ್ಯ ಇಲಾಖೆ ಅನುಷ್ಠಾನಿಸಿದ ಯಾವ ತಂತ್ರಗಳು ಕೂಡ ಫಲ ಕೊಡುತ್ತಿಲ್ಲ.

ಕಾಡಾನೆ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ರಕ್ಷಣ ಬೇಲಿಗಳನ್ನೇ ಹಿಂಡಾನೆಗಳು ದಾಟಿಕೊಂಡೇ ಕೃಷಿ ತೋಟಕ್ಕೆ ನುಗ್ಗುತ್ತಿವೆ.

ಈ ಬಗ್ಗೆ “ಉದಯವಾಣಿ’ ಪ್ರತಿನಿಧಿ ಗಡಿ ಗ್ರಾಮಗಳಲ್ಲಿ ಆನೆ ಹಾವಳಿ ಸ್ಥಿತಿ-ಗತಿಗಳ ಬಗ್ಗೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ವಾಸ್ತವ ಪರಿಸ್ಥಿತಿ ಇದು.

9 ಗ್ರಾಮ; 259 ಪ್ರಕರಣ
ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ 9 ಗ್ರಾಮಗಳ 63 ಪ್ರದೇಶಗಳು ಕಾಡಾನೆ ಹಾವಳಿಗೆ ನಲುಗಿವೆ. ಹತ್ತಾರು ವರ್ಷಗಳಿಂದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕಳೆದ 7 ವರ್ಷಗಳಲ್ಲಿ 9 ಗ್ರಾಮಗಳಲ್ಲಿ ಕೃಷಿ ತೋಟಕ್ಕೆ ಆನೆ ದಾಳಿಯಿಟ್ಟ ಬಗ್ಗೆ ಬೆಳೆಗಾರರು ಅರಣ್ಯ ಇಲಾಖೆಯಲ್ಲಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 259. ದೂರು ನೀಡದಿರುವ ಹಲವು ಪ್ರಕರಣಗಳು ಇವೆ. ಇಲ್ಲಿ ಆನೆ ತೋಟಕ್ಕೆ ನುಗ್ಗುವುದು ನಿರಂತರ.

ಫಲ ಕಾಣದ ನಿಯಂತ್ರಣ
ಆನೆ ಬಾಧಿತ ಪ್ರದೇಶದಲ್ಲಿ ಹಲವೆಡೆ ಆನೆ ಅಗರ್‌ (ಕಂದಕ), ರೈಲ್ವೇ ಹಳಿ ನಿರ್ಮಾಣ, ಸುರಕ್ಷಾ ಬೇಲಿ ಮೊದಲಾದ ನಿಯಂತ್ರಕ ಸಾಧನ ಅನುಷ್ಠಾನಿಸಲಾಗಿದ್ದು, ಅದರಿಂದ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆನೆ ದಾಳಿ ಇಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ರಕ್ಷಣ ಬೇಲಿ ಸನಿಹದಲ್ಲೇ ದಾರಿ ಮಾಡಿಕೊಂಡು ಕೃಷಿ ತೋಟಕ್ಕೆ ನುಸುಳುತ್ತಿರುವುದಕ್ಕೆ ಹಲವು ಸಾಕ್ಷಿಗಳು ಕಂಡು ಬರುತ್ತಿವೆ.

ಬೇಲಿ ದುಬಾರಿ!
ಸಬ್ಸಿಡಿ ದರದಲ್ಲಿ ಕೃಷಿಕರು ಸ್ವತಃ ತಮ್ಮ ಜಮೀನು ಸುತ್ತ ಸೋಲಾರ್‌ ಬೇಲಿ ಅಳವಡಿಸುವ ಯೋಜನೆ ಸರಕಾರದ ಮೂಲಕ ಇದೆಯಾದರೂ ಅದರ ವೆಚ್ಚವೇ ದುಬಾರಿ. ಸಬ್ಸಿಡಿ ಹಣ ಸಿಕ್ಕಿದರೂ 1 ಕಿ.ಮೀ. ದೂರಕ್ಕೆ 1.15 ಲಕ್ಷ ರೂ. ವೆಚ್ಚವನ್ನು ಫಲಾನುಭವಿಯೇ ಭರಿಸಬೇಕು. ಇದು ಸಣ್ಣ ಪುಟ್ಟ ಕೃಷಿಕರಿಂದ ಅಸಾಧ್ಯ.

ಕಡತ ಪರಿಶೀಲನೆ
ಆನೆ ದಾಳಿಯಿಂದ ನಷ್ಟ ಪರಿಹಾರ ಮೊತ್ತ ವನ್ನು ಫಲಾನುಭವಿಗಳಿಗೆ ಅರಣ್ಯ ಇಲಾಖೆ ಪಾವತಿಸುತ್ತಲಿದೆ. 30 ಫಲಾನುಭವಿಗಳಿಗೆ 5.95 ಲ.ರೂ.ಪಾವತಿಸಲು ಬಾಕಿ ಇದೆ. 2019-20ನೇ ಸಾಲಿನಲ್ಲಿ ಜೂ. 18ರ ತನಕ 5 ಹಾನಿ ಪ್ರಕರಣ ದಾಖಲಾಗಿದ್ದು, ಉಪ ವಲಯ ಅರಣ್ಯಧಿಕಾರಿಗಳ ಕಚೇರಿಯಲ್ಲಿ ಕಡತ ಪರಿಶೀಲನೆ ಪ್ರಗತಿಯಲ್ಲಿದೆ.

ದಾಳಿ ನಿರಂತರ
ಕಾಡಾನೆ ಕೃಷಿ ತೋಟಕ್ಕೆ ನಿರಂತರವಾಗಿ ದಾಳಿಯಿಡುತ್ತಿದೆ. ಅರಣ್ಯ ಭಾಗದಲ್ಲಿ ಇಲಾಖೆ ಅಳವಡಿಸಿರುವ ಸುರಕ್ಷಾ ಬೇಲಿ ದಾಟಿಕೊಂಡೇ ಕೃಷಿ ತೋಟಕ್ಕೆ ನುಗ್ಗುತ್ತಿದೆ. ಇಲ್ಲಿ ನಿಯಂತ್ರಣಕ್ಕೆ ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಅತ್ಯಗತ್ಯ.
– ಶ್ರೀಶ ಶರ್ಮ, ಬೋಳುಗಲ್ಲು, ಕೃಷಿಕ

ಸ್ಥಳಾಂತರಕ್ಕೆ ಮಾಹಿತಿ
ಹಲವು ನಿಯಂತ್ರಣ ಕ್ರಮ ಕೈಗೊಂಡಿದೆ. ನಷ್ಟಕ್ಕೆ ಪರಿಹಾರ ವಿತರಿಸಲಾ ಗುತ್ತಿದೆ. ಹಿಂಡಾನೆ ಗುಂಪೊಂದು ಪದೇ ಪದೇ ದಾಳಿ ಮಾಡುತ್ತಿದ್ದು, ಆನೆ ಸ್ಥಳಾಂತರಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಹಿತಿ ನೀಡಲಾಗಿದೆ.
– ಮಂಜುನಾಥ ಎನ್‌.
ವಲಯ ಅರಣ್ಯಾಧಿಕಾರಿ, ಸುಳ್ಯ ವಲಯ

-ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.