Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Aug 9, 2024, 9:32 PM IST

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ವಿದ್ಯಾರ್ಥಿನಿಯರಿಬ್ಬರಿಗೆ ಕಿರುಕುಳ : ಯುವಕನ ಬಂಧನ

ಮುಳ್ಳೇರಿಯ: ಶಾಲಾ ವಿದ್ಯಾರ್ಥಿನಿಯರಿಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ ಆದೂರು ಕುಂಡಲ ನಾವುಂಗಾಲ್‌ನ ನಾಗೇಶ್‌ ಕೆ. (42)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವಿದ್ಯಾರ್ಥಿನಿಯರ ದೇಹ ಸ್ಪರ್ಶಿಸಿ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಬಾಲಕಿಗೆ ಕಿರುಕುಳ: ಬಂಧನ
ಕಾಸರಗೋಡು: ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಡ್ಕ ಚಾಮಕೊಚ್ಚಿಯ ರಾಜೇಶ್‌ ಯಾನೆ ರಾಜು(35)ನನ್ನು ಪೋಕ್ಸೋ ಪ್ರಕಾರ ಬೇಡಡ್ಕ ಪೊಲೀಸರು ಬಂಧಿಸಿದ್ದಾರೆ. ಮೂರು ತಿಂಗಳ ಹಿಂದೆ ಘಟನೆ ನಡೆದಿತ್ತು.

ಬಿದ್ದು ವಿದ್ಯಾರ್ಥಿಯ ಸಾವು
ಕಾಸರಗೋಡು: ಮೂಲತಃ ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯ ನಿವಾಸಿ ಹಾಗೂ ಈಗ ಮಂಗಳೂರಿನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿ, ಚೆಮ್ನಾಡ್‌ ಮುಹಮ್ಮದಲಿ ಅವರ ಪುತ್ರ ಸಮೀರ್‌ (18) ಬಿದ್ದು ಸಾವಿಗೀಡಾದ ಘಟನೆ ನಡೆದಿದೆ. ಈತ ಪದವಿ ವಿದ್ಯಾರ್ಥಿಯಾಗಿದ್ದಾನೆ.

ಮದ್ಯ ಸಹಿತ ಬಂಧನ
ಕಾಸರಗೋಡು: ಹೊಸದುರ್ಗ ಅಜಾನೂರು ನಂಬ್ಯಾರಡ್ಕದಲ್ಲಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 8.64 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ರಾಜನ್‌ ಬಾಬುನನ್ನು ಬಂಧಿಸಿದೆ.

ಬೈಕ್‌ ಕಳವು: ಯುವಕನ ಬಂಧನ
ಕಾಸರಗೋಡು: ಯುವತಿಯನ್ನು ಬಳಸಿಕೊಂಡು ಯುವಕರ ಗಮನವನ್ನು ಬೇರೆಡೆಗೆ ಸೆಳೆದು ಅವರ ವಾಹನಗಳನ್ನು ಕಳವುಗೈಯ್ಯುವ ತಂಡದ ಮುಖ್ಯ ಸೂತ್ರಧಾರ ಕಾಸರಗೋಡು ನಿವಾಸಿಯಾದ ಅಷ್ಕರ್‌ ಅಲಿಯನ್ನು ಎರ್ನಾಕುಳಂ ಸೆಂಟ್ರಲ್‌ ಪೊಲೀಸರು ಬಂಧಿಸಿದ್ದಾರೆ.

ಏಳು ವಾಹನ ಕಳವು ಪ್ರಕರಣಗಳ ಸಹಿತ 15 ಪ್ರಕರಣಗಳಲ್ಲಿ ಈತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ವಾಹನ ಕಳವು ತಂಡದ ಯುವತಿಯ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಆಕೆಯನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಯುವತಿ ದ್ವಿಚಕ್ರ ವಾಹನಗಳಲ್ಲಿ ಏಕಾಂಗಿಯಾಗಿ ಕುಳಿತಿರುವ ಯುವಕರ ಸಮೀಪಕ್ಕೆ ತೆರಳಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಅವರನ್ನು ದೂರಕ್ಕೆ ಕರೆದೊಯ್ಯುತ್ತಿದ್ದಂತೆ ಅಷ್ಕರ್‌ ಅಲಿ ಬೈಕ್‌ ಕಳವುಗೈದು ಅಲ್ಲಿಂದ ಪರಾರಿಯಾಗುತ್ತಾನೆ. ಕಳೆದ ತಿಂಗಳ 20ರಂದು ಎಂ.ಜಿ. ರೋಡ್‌ನಿಂದ ಬೈಕೊಂದನ್ನು ಕಳವು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆಯಾಗಿತ್ತು. ಇದರಂತೆ ಈತನನ್ನು ಬಂಧಿಸಲಾಗಿದೆ.

ಜೈಲು ಶಿಕ್ಷೆ ಕಳೆದು ಹೊರ ಬಂದ ಆರೋಪಿ
ಮತ್ತೊಂದು ಪ್ರಕರಣದಲ್ಲಿ ಬಂಧನ
ಕಾಸರಗೋಡು: ಜೈಲು ಶಿಕ್ಷೆ ಅನುಭವಿಸಿ ಬಳಿಕ ಬಿಡುಗಡೆಗೊಂಡ ಆರೋಪಿಯನ್ನು ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಚಟ್ಟಂಚಾಲ್‌ ಪುತ್ತರಿಯಡ್ಕ ವೀಟಿಲ್‌ ಮುಹಮ್ಮದ್‌ ರಫೀಕ್‌ ಆಲಿಯಾಸ್‌ ಅಪ್ಪಿ ರಫೀಕ್‌ (32)ನನ್ನು ಬಂಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಚಟ್ಟಂಚಾಲ್‌ ಮಹಿನಾ ಬಾದ್‌ ಸಾದಿಕ್‌ ಮಂಜಿಲ್‌ನ ಇಬ್ರಾಹಿಂ ಅವರು ಚಲಾಯಿಸುತ್ತಿದ್ದ ಕಾರಿಗೆ ಆರೋಪಿ ಮುಹಮ್ಮದ್‌ ರಫೀಕ್‌ ಚಲಾಯಿಸುತ್ತಿದ್ದ ವಾಹನ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದರು. ಈ ದ್ವೇಷದಿಂದ ಹಲ್ಲೆ ಮಾಡಿದ್ದನೆಂದು ಇಬ್ರಾಹಿಂ ಮತ್ತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಹಮ್ಮದ್‌ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಿ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ರ್ಯಾಗಿಂಗ್‌ ಪ್ರಕರಣ: 12 ಮಂದಿ
ವಿರುದ್ಧ ಕೇಸು ದಾಖಲು
ಉಪ್ಪಳ: ಉಪ್ಪಳ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ವನ್‌ ವಿದ್ಯಾರ್ಥಿಗಳಿಗೆ ರ್ಯಾಗಿಂಗ್‌ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 12 ವಿದ್ಯಾರ್ಥಿಗಳ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಆ. 7ರಂದು ಸಂಜೆ 5 ಗಂಟೆಗೆ ಪ್ಲಸ್‌ ವನ್‌ ವಿದ್ಯಾರ್ಥಿಗಳಾದ ಮೂವರಿಗೆ ಹಲ್ಲೆಗೈದು ರ್ಯಾಗಿಂಗ್‌ ನಡೆಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಅಕ್ರಮ ಮರಳುಗಾರಿಕೆ: 10 ದೋಣಿ ನಾಶ
ಕುಂಬಳೆ: ಮೊಗ್ರಾಲ್‌ ಹೊಳೆಯಲ್ಲಿ ಅಕ್ರಮವಾಗಿ ಮರಳುಗಾರಿಕೆಗೆ ಬಳಸುತ್ತಿದ್ದ 10 ದೋಣಿಗಳನ್ನು ಡಿವೈಎಸ್‌ಪಿ ಸುನಿಲ್‌ ಕುಮಾರ್‌ ನೇತೃತ್ವದ ಪೊಲೀಸರು ಪತ್ತೆಹಚ್ಚಿ ನಾಶಪಡಿಸಿದ್ದಾರೆ.
ಹೊಳೆಯ ನೀರಿನೊಳಗೆ ಮತ್ತು ಸಮೀಪದ ಪೊದೆಗಳೆಡೆಯಲ್ಲಿ ದೋಣಿಗಳನ್ನು ಬಚ್ಚಿಡಲಾಗಿತ್ತು. ಇವುಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ.

ಸರಣಿ ಕಳವು: ಆರೋಪಿಯ ಬಂಧನ
ಕಾಸರಗೋಡು: ಕಳೆದ ಎರಡೂವರೆ ತಿಂಗಳಲ್ಲಿ ಜಿಲ್ಲೆಯ ಐದು ಕಡೆಗಳಲ್ಲಿ ಕಳವು ಮತ್ತು ಕಳವು ಯತ್ನ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಕಳವು ಮಾಡಿದ ಆರೋಪಿ ಕಲ್ಲಿಕೋಟೆ ತೊಟ್ಟಿಲ್‌ಪಾಲಂ ಕಾವಿಲಂಬಾರ ವೆಟ್ಟಪ್ಪಾರ ನಾಲೋನ್‌ ಕಾಟಿಲ್‌ ಸನೀಶ್‌ ಜಾರ್ಜ್‌ ಆಲಿಯಾಸ್‌ ಸನಲ್‌ (44)ನನ್ನು ಕಾಸರಗೋಡು ಡಿವೈಎಸ್‌ಪಿ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ಕಳವು ಯತ್ನ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ (1) ದ ರೆಕಾರ್ಡ್‌ ರೂಮ್‌ನ ಬೀಗ ಮುರಿದು ಕಳವಿಗೆ ಯತ್ನ, ಚೆಂಗಳದ ಮರದ ಮಿಲ್‌ನಿಂದ 1.84 ಲಕ್ಷ ರೂ. ಕಳವು ಮತ್ತು ನಾಯಮ್ಮಾರಮೂಲೆಯ ತನಿಹುಲ್‌ ಇಸ್ಲಾಂ ಹೈಯರ್‌ ಸೆಕೆಂಡರಿ ಶಾಲಾ ಕಚೇರಿಯ ಬಾಗಿಲು ಮುರಿದು ಮೇಜಿನ ಡ್ರಾವರ್‌ನೊಳಗಿದ್ದ 5,000 ರೂ. ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.

ಹಲ್ಲೆ ಪ್ರಕರಣ: ಕೇಸು ದಾಖಲು
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಬಳಿಯ ಆಟೋ ಪಾರ್ಕಿಂಗ್‌ ಸ್ಥಳದಲ್ಲಿ ಆಟೋ ರಿಕ್ಷಾ ಚಾಲಕ ಮೇಲ್ಪರಂಬ ಬೈತುಲ್‌ ನೂರ್‌ ನಿವಾಸಿ ಅಬ್ದುಲ್‌ ಸಮದ್‌ ಪಿ.ಎ. (53) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬದ್ರುದ್ದೀನ್‌, ಸುಕುಮಾರನ್‌ ಮತ್ತು ಇನ್ನೋರ್ವನ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. ಆಟೋ ರಿಕ್ಷಾ ಪಾರ್ಕ್‌ ಮಾಡುವ ವಿಷಯದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಗಾಯಾಳು ಆರೋಪಿಸಿದ್ದಾರೆ.

ಹೊಟೇಲ್‌ನಿಂದ ಕಳವುಗೈದ ಫೋನ್‌, ಬ್ಯಾಂಕ್‌ ಪಾಸ್‌ ಬುಕ್‌ ಪತ್ತೆ
ಉಪ್ಪಳ: ಐಲ ಮೈದಾನ ಬಳಿಯ ಮಂಗಲ್ಪಾಡಿ ಪಂಚಾಯತ್‌ ಜನಪರ ಹೊಟೇಲ್‌ನಿಂದ ಕಳವುಗೈದ ಫೋನ್‌ ಮತ್ತು ಬ್ಯಾಂಕ್‌ ಪಾಸ್‌ ಬುಕ್‌ ಕಟ್ಟಿಗೆ ಹಾಕುವ ಸ್ಥಳದಲ್ಲಿ ಪತ್ತೆಯಾಗಿದೆ. ಹೊಟೇಲ್‌ನಿಂದ ಮೊಬೈಲ್‌ ಫೋನ್‌, ಬ್ಯಾಂಕ್‌ ಪಾಸ್‌ ಬುಕ್‌, ಚಿಲ್ಲರೆ ಹಣ ಕಳವು ಮಾಡಲಾಗಿತ್ತು. ಹೊಟೇಲ್‌ ಅಧ್ಯಕ್ಷೆ ಸುಶೀಲ ಕೆ.ವಿ. ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದಂತೆ ಇವುಗಳು ಪತ್ತೆಯಾಗಿವೆ.

ಪಾಲುದಾರಿಕೆ ನೀಡುವುದಾಗಿ
ನಂಬಸಿ ವಂಚನೆ: ಕೇಸು ದಾಖಲು
ಕಾಸರಗೋಡು: ದುಬಾೖಯಲ್ಲಿರುವ ಸಿವಿಕ್‌ ಆನ್‌ಲೈನ್‌ ಜನರಲ್‌ ಟ್ರೇಡಿಂಗ್‌ ಕಂಪೆನಿಯಲ್ಲಿ ಪಾಲುದಾರಿಕೆ ನೀಡುವುದಾಗಿ ಭರವಸೆ ನೀಡಿ ಪರವನಡ್ಕ ನಿವಾಸಿಯ 1.60 ಕೋಟಿ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ನಿರ್ದೇಶದಂತೆ ಬೆಳ್ಳಿಪ್ಪಾಡಿಯ ಎಂ. ಮುಹಮ್ಮದ್‌ ನವಾಸ್‌, ಚೆಂಗಳ ರೆಹಮ್ಮತ್‌ ನಗರದ ಇಬ್ರಾಹಿಂ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

ಪರವನಡ್ಕದ ಆರಿಫ್‌ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಎಂ. ಮುಹಮ್ಮದ್‌ ಅಶ್ರಫ್‌ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. 2015 ಜನವರಿಯಿಂದ 2018 ಡಿಸೆಂಬರ್‌ ವರೆಗಿನ ಕಾಲಾವಧಿಯಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಹಣ ಪಡೆದುಕೊಂಡು ಲಾಭಾಂಶ ನೀಡಿಲ್ಲವೆಂದೂ, ನೀಡಿದ ಹಣವನ್ನು ವಾಪಸು ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.

 

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಯೋಧ್ಯೆಯಲ್ಲಿ ಕನ್ನಡ ಯಕ್ಷಗಾನ: ಯಕ್ಷಾಂತರಂಗ ಪೆರ್ಲದಿಂದ ವಾಲಿಮೋಕ್ಷ ಪ್ರದರ್ಶನ

Kasaragod: ಅಯೋಧ್ಯೆಯಲ್ಲಿ ಕನ್ನಡ ಯಕ್ಷಗಾನ: ಯಕ್ಷಾಂತರಂಗ ಪೆರ್ಲದಿಂದ ವಾಲಿಮೋಕ್ಷ ಪ್ರದರ್ಶನ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

4

Kasaragod: ಸ್ಕೂಟರ್‌ ಅಪಘಾತ; ಸವಾರನ ಸಾವು

arest

Kasaragod: ಎಂ.ಡಿ.ಎಂ.ಎ. ಸಹಿತ ಇಬ್ಬರ ಬಂಧನ

complaint

Kasaragod: ಸಚಿತಾ ರೈ ವಿರುದ್ಧ ಮತ್ತೆ ಮೂರು ಕೇಸು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.