Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Oct 3, 2024, 12:45 AM IST
ಗಾಂಜಾ, ಮದ್ಯ, ಕಳ್ಳ ಭಟ್ಟಿ ಸಾರಾಯಿ, ಹುಳಿರಸ ವಶಕ್ಕೆ
ಕಾಸರಗೋಡು: ಬೇಳ ಗ್ರಾಮದ ಸೀತಾಂಗೋಳಿ-ನೀರ್ಚಾಲು ರಸ್ತೆಯಲ್ಲಿ ಅಬಕಾರಿ ದಳ ನಡೆಸಿದ ವಾಹನ ತಪಾಸಣೆ ವೇಳೆ ಕಾರೊಂದರಲ್ಲಿ ಸಾಗಾಟ ಮಾಡಲಾಗುತ್ತಿದ್ದ 55 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕರಂದಕ್ಕಾಡ್‌ನಿಂದ ಹಿತ್ತಿಲ್ಲೊಂದರಿಂದ 180 ಎಂ.ಎಲ್.ನ 352 ಸ್ಯಾಚೆಟ್ ಮದ್ಯವನ್ನು ಅಬಕಾರಿ ದಳ ವಶಪಡಿಸಿಕೊಂಡಿದೆ. ಮಧೂರು ಅರಂತೋಡಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 7.02 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಅರಂತೋಡು ನಿವಾಸಿ ಜೋಸೆಫ್ ಡಿ”ಸೋಜಾ ವಿರುದ್ಧ ಕೇಸು ದಾಖಲಿಸಿ ಬಂಧಿಸಿಲಾಗಿದೆ. ವೆಳ್ಳರಿಕುಂಡು ಬಳಾಲ್ ಪಡಯಂಕಲ್ಲುನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 45 ಲೀಟರ್ ಹುಳಿ ರಸ ಮತ್ತು ಎರಡು ಲೀಟರ್ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.
ರೈಲಿನಲ್ಲಿ ಯುವತಿಯ ನಗ-ನಗದು ಕಳವು
ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡಿನ ಯುವತಿ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ 1,73,300 ರೂ. ಮೌಲ್ಯದ ಚಿನ್ನದ ಚಿನ್ನಾಭರಣ ಮತ್ತು 5,000 ರೂ. ನಗದು ಕಳವು ಮಾಡಿದ ಘಟನೆ ನಡೆದಿದೆ. ಕೊಲ್ಲಂನಿಂದ ರೈಲುಗಾಡಿ ಕುಟ್ಟಿಪುರಂಗೆ ತಲುಪಿದಾಗ ನಗ-ನಗದು ಇದ್ದ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ಯುವಕನ ಶವ ಪತ್ತೆ
ಕಾಸರಗೋಡು: ಕುಂಬಳೆ ಪೆರುವಾಡ್ ಕಡಪ್ಪುರದ ಸಮುದ್ರದಲ್ಲಿ ಬಲೆ ಬೀಸಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಕೊಯಿಪ್ಪಾಡಿ ನಿವಾಸಿ, ಮೊಗ್ರಾಲ್ ನಾಂಗಿಯಲ್ಲಿ ವಾಸಿಸುವ ಫಾತಿಮಾ ಅವರ ಪುತ್ರ ಫಿಶರೀಸ್ ಕಾಲನಿಯ ಅಶಾìದ್ (21) ಅವರ ಮೃತದೇಹ ಆರಿಕ್ಕಾಡಿ ಕಡಪ್ಪುರದ ಕಡಲ ಕಿನಾರೆಯಲ್ಲಿ ಪತ್ತೆಯಾಯಿತು. ಅ. 1ರಂದು ಸಂಜೆ ಸಮುದ್ರದ ತೆರೆಗೆ ಸಿಲುಕಿ ಸಮುದ್ರ ಪಾಲಾಗಿದ್ದರು.
ನಕಲಿ ದಾಖಲೆ ಸಲ್ಲಿಸಿ 9.5 ಲಕ್ಷ ರೂ. ವಂಚನೆ
ಕಾಸರಗೋಡು: ಮಾಲಕತ್ವ ಪ್ರಮಾಣಪತ್ರ ಹಾಗೂ ತೆರಿಗೆ ರಶೀದಿಯನ್ನು ನಕಲಿಯಾಗಿ ತಯಾರಿಸಿ ಬ್ಯಾಂಕ್‌ನಿಂದ 9.5 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ದೂರಲಾಗಿದೆ.
ಕೇರಳ ಗ್ರಾಮೀಣ ಬ್ಯಾಂಕ್‌ನ ಎಡನೀರು ಶಾಖೆ ಮ್ಯಾನೇಜರ್ ಸೋನಿ ರೇಶ್ಮಾ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಪಿಲಿಕೂಡ್ಲುವಿನ ಹನೀಫ್, ಆಲಂಗೋಲ್ ಹೌಸ್‌ನ ರಸಿಯಾ, ಎನ್. ಮುಹಮ್ಮದ್ ಹನೀಫ್, ನಿಯಾಸ್, ನೆಕ್ರಾಜೆ ಆಲಂಗೋಲ್ ಹೌಸ್‌ನ ಎ.ಕೆ. ಸಫಾನ್, ಪಿಲಿಕೂಡ್ಲುವಿನ ಪಿ.ಎ. ಶಿಹಾಬ್, ಅಬ್ದುಲ್ ಹಾರಿಸ್, ನೆಕ್ರಾಜೆ ಆಲಂಗೋಲ್ ಹೌಸ್‌ನ ಅಬ್ದುಲ್ ಶರೀಫ್ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2019ರ ಜುಲೈ 16ರಿಂದ ನವಂಬರ್ 5ರ ವರೆಗಿನ ಕಾಲಾವಧಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ತೆಗೆದು ವಂಚಿಸಿರುವುದಾಗಿ ದೂರಲಾಗಿದೆ.
ಬಾಲಕಿಗೆ ಕಿರುಕುಳ: ಪೋಕ್ಸೋ
ಕಾಯ್ದೆಯಡಿ ಯುವಕನ ಬಂಧನ
ಬದಿಯಡ್ಕ: ತಂದೆಗೆ ಹಲ್ಲೆ ಮಾಡುವುದನ್ನು ಕಂಡು ತಡೆಯಲು ಯತ್ನಿಸಿದ 17ರ ಹರೆಯದ ಬಾಲಕಿಯನ್ನು ಸ್ಪರ್ಶಿಸಿ ಕಿರುಕುಳ ನೀಡಿದ ಆರೋಪದಂತೆ ಅಗಲ್ಪಾಡಿ ನಿವಾಸಿಯಾದ ಪ್ರದೀಪನ್ (37) ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಪ್ರದೀಪನ್ ಅವರಿಗೆ ಹಲ್ಲೆ ಮಾಡುತ್ತಿದ್ದಾಗ ತಡೆಯಲು ಯತ್ನಿಸಿದಾಗ ಬಾಲಕಿಗೆ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈತನ ವಿರುದ್ಧ ಈ ಹಿಂದೆ ಕಾಪಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಕಿರುಕುಳ: ಬಂಧನ
ಕಾಸರಗೋಡು: ಅಂಗಿಯ ಅಳತೆ ನೀಡಲು ಟೈಲರಿಂಗ್ ಅಂಗಡಿಗೆ ಹೋದ 13ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಸಂಬಂಧ ಗೋಪಾಲಕೃಷ್ಣ (57) ವಿರುದ್ಧ ಹೊಸದುರ್ಗ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.