Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Apr 27, 2024, 12:49 AM IST
ಯುಡಿಎಫ್ ಏಜೆಂಟ್‌ಗೆ ಹಲ್ಲೆ: ಎರಡು ಬೂತ್ ಎಲ್‌ಡಿಎಫ್ ವಶಕ್ಕೆ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಪಯ್ಯನ್ನೂರಿನ ಎರಡು ಬೂತ್‌ಗಳನ್ನು ಎಲ್.ಡಿ.ಎಫ್. ವಶಪಡಿಸಿಕೊಂಡಿದೆ ಎಂದು ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಆರೋಪಿಸಿದ್ದಾರೆ.
ಪಯ್ಯನ್ನೂರಿನ ಕಾರಮ್ಮಲ್ ಎಎಲ್‌ಪಿ ಶಾಲೆಯ 78 ನೇ ನಂಬ್ರದ ಬೂತ್ ಮತ್ತು ಅನ್ನೂರಿನ 84 ನೇ ನಂಬ್ರದ ಬೂತ್‌ನ್ನು ಎಲ್‌ಡಿಎಫ್ ವಶಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಯುಡಿಎಫ್‌ನ ಬೂತ್ ಏಜೆಂಟ್ ಆಗಿರುವ ಡಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಪಿ.ನಾರಾಯಣನ್ ಅವರ ಪುತ್ರ ರಂಜಿತ್ ಅವರು ನಿರಂತರ ಎಲ್‌ಡಿಎಫ್ ಕಳ್ಳ ಮತದಾನವನ್ನು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ರಂಜಿತ್ ಅವರಿಗೆ ಹಲ್ಲೆ ಮಾಡಿದ ಎಲ್‌ಡಿಎಫ್ ಕಾರ್ಯಕರ್ತರು ಮತಗಟ್ಟೆಯಿಂದ ಓಡಿಸಿದ್ದಾಗಿ ಆರೋಪಿಸಿದ್ದಾರೆ. ಗಾಯಾಳು ರಂಜಿತ್ ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ರೀತಿ ಕಾರಮ್ಮಲ್ ಬೂತ್‌ನಲ್ಲಿ ಯುಡಿಎಫ್ ಏಜೆಂಟ್‌ಗೆ ಹಲ್ಲೆ ಮಾಡಿದ ಬಳಿಕ ಬೂತ್‌ನಿಂದ ಓಡಿಸಿದ್ದಾಗಿ ಆರೋಪಿಸಿದ್ದಾರೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ
ಕಾಸರಗೋಡು: ನಗರದ ಕರಂದಕ್ಕಾಡ್‌ನ ಪೊದೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮಧೂರಿಗೆ ಸಾಗುವ ಬಸ್ ತಂಗುದಾಣ ಸಮೀಪದಲ್ಲಿ ಸುಮಾರು 55 ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಶವ ಮಹಜರು ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನುಗಾರಿಕೆ: ಕರ್ನಾಟಕದ ಎರಡು ಬೋಟ್‌ಗಳು ವಶಕ್ಕೆ
ಕಾಸರಗೋಡು: ಕಾಸರಗೋಡು ಕರಾವಳಿ ಪ್ರದೇಶದ ಸಮುದ್ರದಲ್ಲಿ ರಾತ್ರಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಎರಡು ಮೀನುಗಾರಿಕೆ ಬೋಟ್‌ಗಳನ್ನು ಮೀನುಗಾರಿಕ ಇಲಾಖೆಯ ಅಧಿಕಾರಿಗಳು ಮತ್ತು ಶಿರಿಯಾ, ಕಾಸರಗೋಡು ಹಾಗು ತೃಕ್ಕರಿಪುರ ಕರಾವಳಿ ಪೊಲೀಸರು ಸಂಯುಕ್ತ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡರು. ಆಲೀಸಾ ಮತ್ತು ಸಾಗರ್ ಸಂಪತ್ತು ಎಂಬ ಹೆಸರಿನ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬೋಟ್‌ಗಳಿಗೆ 4.5 ಲಕ್ಷ ರೂ. ದಂಡ ವಿಧಿಸಲಾಯಿತು. ಕಾಸರಗೋಡು ಕರಾವಳಿಯಿಂದ 12 ನಾಟಿಕಲ್ ಮೈಲ್‌ನಲ್ಲಿ ಸಮುದ್ರದಲ್ಲಿ ಈ ಬೋಟ್‌ಗಳಲ್ಲಿ ರಾತ್ರಿ ಅಕ್ರಮವಾಗಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಇವುಗಳ ವಿರುದ್ಧ ಕೇರಳ ಸಮುದ್ರ ಮೀನುಗಾರಿಕ ನಿಯಂತ್ರಣ (ಕೆಎಂಎಫ್‌ಆರ್‌ಆರ್) ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.