Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ


Team Udayavani, Jan 16, 2025, 10:47 PM IST

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡKasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

ಕಾಸರಗೋಡು: ಬಸ್ಸಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೆರ್ಕಳ ಪೊವ್ವಲ್‌ ಮಾಸ್ತಿಕುಂಡು ಮುಬೀನ ಮಂಜಿಲ್‌ನ ಅಬೂಬಕರ್‌ ಸಿದ್ದಿಕ್‌(37)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ದ್ವಿತೀಯ) ಎರಡು ವರ್ಷ ಕಠಿನ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2019ರ ಆ. 19ರಂದು ಬಸ್‌ನಲ್ಲಿ ಸಿದ್ದಿಕ್‌ನಿಂದ ಒಂದೂವರೆ ಕಿಲೋ ಗಾಂಜಾವನ್ನು ಅಬಕಾರಿ ದಳ ವಶಪಡಿಸಿಕೊಂಡು ಆತನನ್ನು ಬಂಧಿಸಿತ್ತು.

11ರ ಬಾಲಕಿಗೆ ಕಿರುಕುಳ: 73ರ ವೃದ್ಧನ ಬಂಧನ
ಕಾಸರಗೋಡು: ಹನ್ನೊಂದರ ಹರೆಯದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಲ್ಲಿ 73 ವರ್ಷದ ವೃದ್ಧನನ್ನು ಹೊಸದುರ್ಗ ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್‌ ವೇಳೆ ಕಿರುಕುಳ ಬಯಲಾಗಿತ್ತು. ವಿದ್ಯಾರ್ಥಿನಿಯ ಗೆಳತಿಯ ಅಜ್ಜ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿತ್ತು.

ಬೆನ್ನು ಮೂಳೆ ಮುರಿತದಿಂದ ಟಿಪ್ಪರ್‌
ಚಾಲಕನ ಸಾವು – ವೈದ್ಯಕೀಯ ವರದಿ
ಮಂಜೇಶ್ವರ: ಬಾಯಾರುಪದವು ನಿವಾಸಿ ಟಿಪ್ಪರ್‌ ಲಾರಿ ಚಾಲಕ ಮುಹಮ್ಮದ್‌ ಆಶಿಫ್‌ (29) ಅವರ ಸಾವಿಗೆ ಬೆನ್ನು ಮೂಳೆ ಮುರಿತವೇ ಕಾರಣ ಎಂದು ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಮರಣೋತ್ತರ ಪರೀಕ್ಷೆಯ ಪೂರ್ಣ ಮಾಹಿತಿ ಲಭಿಸಿದ ಬಳಿಕವಷ್ಟೇ ಮೂಳೆ ಮುರಿಯಲು ಕಾರಣ ತಿಳಿಯಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾಯರ್‌ಕಟ್ಟೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‌ ಲಾರಿ ಸಮೀಪ ಆಶಿಫ್‌ ಅವರು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಆಗಮಿಸಿ ಕುಂಬಳೆಯ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಟಿಪ್ಪರ್‌ ಲಾರಿಯೊಳಗೆ ಹಾಗೂ ಹೊರಗೆ ರಕ್ತದ ಕಲೆ ಕಂಡು ಬಂದಿರುವುದರಿಂದ ಸಾವಿನ ಬಗ್ಗೆ ನಿಗೂಢತೆಗೆ ಕಾರಣವಾಗಿದೆ.

ರಸ್ತೆಯಲ್ಲಿ ಕಾಡುಕೋಣ
ಮುಳ್ಳೇರಿಯ: ಬೋವಿಕ್ಕಾನ-ಇರಿಯಣ್ಣಿ ರಸ್ತೆಯ ಮಂಜಕ್ಕಲ್‌ ಪರಿಸರದ ರಸ್ತೆಯಲ್ಲಿ ಕಾಡು ಕೋಣ ಕಂಡು ಬಂದಿದೆ. ಸ್ಥಳೀಯರು ಆತಂಕಿತರಾಗಿದ್ದಾರೆ. ಇರಿಯಣ್ಣಿ ಕಾಡಿನಲ್ಲಿ 7 ಕಾಡುಕೋಣಗಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮಹಿಳೆ ಅಸಹಜ ಸಾವು
ಬದಿಯಡ್ಕ: ಪೆರ್ಲ ಬಜಕೂಡ್ಲು ನಿವಾಸಿ ಕೃಷ್ಣ ನಾಯ್ಕ ಅವರ ಪತ್ನಿ ವಸಂತಿ (57) ಅವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಸಾವಿಗೆ ಕಾರಣ ದೃಢಪಟ್ಟಿಲ್ಲ. ಬದಿಯಡ್ಕ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಸ್ವಸ್ಥರಾಗಿದ್ದ ಅವರನ್ನು ಮನೆಯವರು ಕೂಡಲೇ ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅವರು ಅಲ್ಲಿಗೆ ಬರುವ ಮೊದಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದರು.

ಜಗಳ: ಐವರ ಬಂಧನ
ಬದಿಯಡ್ಕ: ಬದಿಯಡ್ಕ ಪೆಟ್ರೋಲ್‌ ಬಂಕ್‌ ಪರಿಸರದಲ್ಲಿ ಜಗಳ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಮ್ರಾನ್‌ ಹನನ್‌ ಶಹಲ್‌ (18), ಮೊಹಮ್ಮದ್‌ ರಂಶೀದ್‌ (22), ಅಬ್ದುಲ್‌ ಬಾದಿಶಾ (20), ಹಮೀದ್‌ ಅಲ್ತಾಫ್‌ (22) ಮತ್ತು ಮೊಹಮ್ಮದ್‌ (20) ಅವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್‌ನಲ್ಲಿ ಫೋಟೋ ತೆಗೆಯುವ ವಿಚಾರದಲ್ಲಿ ಜಗಳ ನಡೆದಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

1-kho-kho

Kho kho World Cup: ಭಾರತಕ್ಕೆ 71-34 ಅಂತರದ ಗೆಲುವು

Vinesh 2

ಶಾಸಕಿಯಾದ ಬಳಿಕ ವಿನೇಶ್‌ ಪೋಗಟ್‌ ಮತ್ತೆ ಕುಸ್ತಿ ಅಭ್ಯಾಸ?

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MDK-Changappa

ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು

Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

8-

Madikeri: ಕಾಡಾನೆ ದಾಳಿ-ವ್ಯಕ್ತಿ ಸಾವು : ಶಾಸಕರ ಭೇಟಿ

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

India US

US ;ಬಾರ್ಕ್‌ ಸೇರಿ 3 ಸಂಸ್ಥೆಗಳ ಮೇಲಿನ ನಿಷೇಧ ತೆರವು

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

1-PVS

India Open Super 750 Badminton: ಸಿಂಧು, ಕಿರಣ್‌ ಜಾರ್ಜ್‌ ಕ್ವಾರ್ಟರ್‌ಫೈನಲಿಗೆ

1-vh

Vijay Hazare Trophy: ವಿದರ್ಭಕ್ಕೆ 69 ರನ್‌ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.